ಬೆಂಗಳೂರು: : ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ರಾಜ್ಯ ಗಡಿ ಆಯೋಗದ ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಸಂಬಂಧ ಸಲಹೆ ನೀಡುವ ಸಲುವಾಗಿ ಸರ್ಕಾರ ಈ ಆಯೋಗವನ್ನು ರಚನೆಮಾಡಿದೆ. ಆಯೋಗದ ಹಿಂದಿನ ಅಧ್ಯಕ್ಷ ಎಸ್. ರಾಜೇಂದ್ರ ಬಾಬು 2017ರ ನವೆಂಬರ್‌ನಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಆ ಸ್ಥಾನಕ್ಕೆ ಮಂಜುನಾಥ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಇದೇ ವೇಳೆ ಸರ್ಕಾರವು ಉಪಲೋಕಾಯುಕ್ತ ಹುದ್ದೆಗೆ ಮಂಜುನಾಥ್ ಅವರ ಹೆಸರನ್ನು ಮಂಜೂರು ಮಾಡಿ ಮೂರು ಬಾರಿ ರಾಜ್ಯಪಾಲರಿಗೆ ಶಿಪಾರಸು ಕಳಿಸಿತ್ತು. ರಾಜ್ಯಪಾಲರು ಎಲ್ಲಾ ಬಾರಿಯೂ ಅವರ ಹೆಸರನ್ನು ತಿರಸ್ಕರಿಸಿದ್ದರು ಎನ್ನುವುದು ಗಮನಾರ್ಹ.