ನಿವೃತ್ತ ಐಎಎಸ್ ಅಧಿಕಾರಿ ಪತ್ನಿಗೆ 25 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್

ಅನಿವಾಸಿ ಭಾರತೀಯ(ಎನ್ ಆರ್ ಐ) ಮಹಿಳೆಯೊಬ್ಬರಿಗೆ ಸೇರಿದ ಆಸ್ತಿಯನ್ನು ಬಲವಂತವಾಗಿ ತಮ್ಮ ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದ ಆರೋಪದ ಮೇಲೆ, ...
ಹೈಕೋರ್ಟ್
ಹೈಕೋರ್ಟ್
ಬೆಂಗಳೂರು: ಅನಿವಾಸಿ ಭಾರತೀಯ(ಎನ್ ಆರ್ ಐ) ಮಹಿಳೆಯೊಬ್ಬರಿಗೆ ಸೇರಿದ ಆಸ್ತಿಯನ್ನು ಬಲವಂತವಾಗಿ ತಮ್ಮ ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದ ಆರೋಪದ ಮೇಲೆ, ನಿವೃತ್ತ ಐಎಎಸ್ ಅಧಿಕಾರಿ ಕೆ.ಎಸ್ ಪ್ರಭಾಕರ್ ಪತ್ನಿ ಶೋಭಾ ಪ್ರಭಾಕರ್ ಅವರಿಗೆ 25 ಸಾವಿರ ರು ದಂಡ ವಿಧಿಸಿದೆ.
ತಾವು ದೇಶದಲ್ಲಿಲ್ಲದ ಸಮಯವನ್ನು ದುರುಪಯೋಗ ಪಡಿಸಿಕೊಂಡು, ದಕ್ಷಿಣ ಬೆಂಗಳೂರಿನಲ್ಲಿರುವ ತಮ್ಮ ಆಸ್ತಿಯನ್ನು ಬಲವಂತವಾಗಿ ಸ್ವಾಧೀನಕ್ಕೆ ಪಡೆಯಲು ಶೋಭಾ ಯತ್ನಿಸಿದ್ದರು, ಮೊಕದ್ದಮೆಗೆ ತ್ವರಿತ ತಡೆಯಾಜ್ಞೆ  ನೀಡಬೇಕೆಂದು ವಿಚರಾಣಾಧೀನ ನ್ಯಾಯಾಲಯಕ್ಕೆ ರೇಣುಕಾ ಶೇಷಾದ್ರಿ ಎಂಬುವರು ಮನವಿ ಮಾಡಿದ್ದರು,. ಆದರೆ ಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿತ್ತು ಹೀಗಾಗಿ ರೇಣುಕಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ರೇಣುಕಾ ಅವರ ತಂದೆ ಶೇಷಾದ್ರಿ  ನಾಯ್ಡು ಕೆ,ಎಸ್  ಪ್ರಭಾಕರ್ ವಿರುದ್ಧ  ಮಾರ್ಚ್ 8 ರಂದು ದೂರು ಸಲ್ಲಿಸಿದ್ದರು. ಎರಡನೇ ದೂರಿನಲ್ಲಿ ಪ್ರಭಾಕರ್ ಮತ್ತು 8 ಮಂದಿ ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ದೂರು ದಾಖಲಿಸಿದ್ದಾರೆ.
ಆದರೆ ಮಾರ್ಚ್ 10 ರಂದು ಶೇಷಾದ್ರಿ ನಾಯ್ಜ ವಿರುದ್ಧ ಪ್ರಭಾಕರ್ ಪ್ರತಿ ದೂರು ದಾಖಲಿಸಿದ್ದರು.  ತಮ್ಮ ಮೇಲೆ ಶೇಷಾದ್ರಿ ನಾಯ್ಡು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ರೇಣುಕಾ ಶೋಭಾ ಅವರಿಗೆ ತಮ್ಮ ಆಸ್ತಿಯನ್ನು 1.39 ಕೋಟಿಗೆ ನವೆಂಬರ್ 28, 2016 ರಂದು ಮಾರಾಟ ಮಾಡಿ 10 ಲಕ್ಷ ರು. ಹಣ ಮುಂಗಡವಾಗಿ ಪಡೆದಿದ್ದರು. ನವೆಂಬರ್ 30 ರಂದು ಸೇಲ್ ಡೀಡ್ ಮಾಡಲಾಗಿತ್ತು. ಉಳಿದ 1.27 ಕೋಟಿ ರು ಹಣದ ಚೆಕ್ ನೀಡಲಾಗಿದೆ. ಇದನ್ನು ಪ್ರಭಾಕರ್ ಅವರು ಮೇಲ್ ಮಾಡಿದ್ದಾರೆ, ಆದರೆ ಅವರು ಹಾಕಿದ್ದ ಚೆಕ್ ಬೌನ್ಸ್ ಆಗಿತ್ತು, ಆದರೆ ಶೋಭಾ ಅವರು ಆಸ್ತಿಯನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳಲು ಯತ್ನಿಸಿದ್ದರು ಎಂದು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com