ಲಿಂಗಾಯತ ಎಸ್ ಸಿ, ಒಬಿಸಿಗಳಿಂದ ಅಲ್ಪಸಂಖ್ಯಾತ ಸ್ಥಾನ-ಮಾನಕ್ಕೆ ವಿರೋಧ? ಬೆಂಬಲಿಸುವ ಸಾಧ್ಯತೆ ಕಡಿಮೆ

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸುವ ಸಲುವಾಗಿ, ಸಿದ್ದರಾಮಯ್ಯ ಸರ್ಕಾರ ಮತ್ತು ...
ಬೆಳಗಾವಿಯಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ಭಾಗಿಯಾಗಿದ್ದ ಜನ
ಬೆಳಗಾವಿಯಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ಭಾಗಿಯಾಗಿದ್ದ ಜನ
Updated on
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸುವ ಸಲುವಾಗಿ, ಸಿದ್ದರಾಮಯ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಲಿಂಗಾಯತ ಸಮುದಾಯಕ್ಕೆ ಅಲ್ಪ ಸಂಖ್ಯಾತ ಸ್ಥಾನ ಮಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿವೆ,
ಲಿಂಗಾಯತ ಸಮುದಾಯಕ್ಕೆ ಅಲ್ಪ ಸಂಖ್ಯಾತ ಸ್ಥಾನಮಾನ ನೀಡುವುರಿಂದ ಉಂಟಾಗುವ ಅನುಕೂಲಗಳ ಜೊತೆಗೆ ಹಲವು ಸಮಸ್ಯೆಗಳು ತಲೆ ದೋರಿವೆ, ಲಿಂಗಾಯತ ಸಮುದಾಯ ಕೇವಲ ಒಂದು ಘಟಕವಲ್ಲ, ಬದಲಿಗೆ ಅದು 99 ಜಾತಿಗಳ ಮತ್ತು ಉಪಜಾತಿಗಳ ಒಂದು ಸಮೂಹವಾಗಿದೆ, ಎಸ್ ಸಿ ಮತ್ತು ಹಿಂದುಳಿದ ವರ್ಗ ಕೂಡ ಇದರಲ್ಲಿ ಸೇರಿದೆ.
ಈಗಾಗಲೇ ಹಲವು ಲಾಭ ಪಡೆಯುತ್ತಿರುವ ಈ ಸಮುದಾಯಕ್ಕೆ, ಅಲ್ಪ ಸಂಖ್ಯಾತ ಎಂಬ ಸ್ಥಾನಮಾನ ಬೇಕಿಲ್ಲ ಎಂಬುದು ಕೆಲವರ ಅಬಿಪ್ರಾಯ, ಅಲ್ಪಸಂಖ್ಯಾತ ಸಮುದಾಯಕ್ಕೆ ಉದ್ಯೋಗದಲ್ಲಿ ಹಾಗೂ ಶಿಕ್ಷಣದಲ್ಲಿ ಯಾವುದೇ ಮೀಸಲಾತಿಯೂ ಇಲ್ಲ.
ಲಿಂಗಾಯತ ಸಮುದಾಯದೊಳಗೆ ಬರುವ 99 ಜಾತಿಗಳಲ್ಲಿ, 20 ಜಾತಿ  ಪರಿಶಿಷ್ಟ ಜಾತಿ ಅಡಿಯಲ್ಲಿ, 15 ಜಾತಿ ಹಿಂದುಳಿದ ವರ್ಗಗಳ ಸಮುದಾಯದಡಿ ಬರುತ್ತವೆ. ಈ ಎರಡರಲ್ಲಿ ಬರುವ ಜಾತಿಗಳನ್ನು ಅವುಗಳಿಂದ ಸರ್ಕಾರ ಹೊರತೆಗೆಯುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ. 
ಪ್ರಭಾವ ಶಾಲಿ ವರ್ಗದವರು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳಿಗೆ ಮಾತ್ರ ಇದರ ಉಪಯೋಗವಾಗಲಿದೆ, ಸಮುದಾಯದವರಿಗೆ ಸಹಾಯ ಮಾಡಬೇಕೆಂಬ ಮನಸ್ಥಿತಿ ಅವರಿಗಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ಗುರುರಾಜ್ ಹುಣಸೀಮರದ್ ಹೇಳಿದ್ದಾರೆ.
ಕೇವಲ ಶೇ.7 ರಷ್ಟು ಲೀಂಗಾಯತರು ಎಸ್ ಎಸಿ/ ಎಸ್ಸಿ ವರ್ಗದಡಿ ಬರುತ್ತಾರೆ, ಹಿಂದೂ ಧರ್ಮದ ಭಾಗವಾಗಿ ಇದರಲ್ಲೇ ಮುಂದುವರಿದು ಪ್ರಯೋಜನಗಳನ್ನು ಪಡೆಯುವುದೋ, ಬೇಡವೋ ಎಂಬ ಬಗ್ಗೆ ಅವರೇ ನಿರ್ಧರಿಸಿಬೇಕಾಗಿದೆ.
ಸಮಾಜ ಸುಧಾರಕ ಬಸವಣ್ಣ ಬೋಧಿಸಿದ ತತ್ವಗಳನ್ನು ಲಿಂಗಾಯತ ಸಮುದಾಯದಲ್ಲಿರುವ ಹಲವು ಜಾತಿಗಳ ಜನ ಅನುಸರಿಸಿಕೊಂಡು ಬರುತ್ತಿದ್ದಾರೆ. 12 ನೇ ಶತಮಾನದಿಂದ ಹಲವು ಜಾತಿಗಳನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ, 12ನೇ ಶತಮಾನದಿಂದ ಬಸವಣ್ಣ ಬೋಧಿಸಿದ ತತ್ವಗಳನ್ನು ಪಾಲಿಸುತ್ತಾ ಬಂದಿದ್ದಾರೆ. ಮಾದಾರ ಸಮಾಗರ ದೋರ್ ಮತ್ತು ಮೋಚಿ ಇವುಗಳಳ್ಲಿ ಕೆಲವು ಸಮುದಾಯಗಳು ಎಂದು ನಾಗ ಮೋಹನ್ ಸಮಿತಿಯ ಸರ್ಜೂ ಕಾರ್ಕರ್ ಹೇಳಿದ್ದಾರೆ.
ಹಿಂಧೂ ಧರ್ಮದ ಭಾಗವಾಗಿ ಇರಬೇಕೆಂದರೇ  ಅವರು ಲಿಂಗಾಯತ ಸಮುದಾಯದಲ್ಲಿ ಇರಬೇಕೆ ಬೇಡವೇ ಎಂದು ಈ ಜಾತಿಗಳ ಜನ ನಿರ್ಧರಿಸಬೇಕು ಎಂದು ಅವರು ತಿಳಿಸಿದ್ದಾರೆ
ಲಿಂಗಾಯತ ಸಮುದಾಯದಲ್ಲಿ 99 ಜಾತಿಗಳಿದ್ದು,ಹೈದಾರಬಾದ್ ಕರ್ನಾಟಕ, ಮುಂಬಯಿ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಲಿಂಗಾಯತರು ವಾಸಿಸುತ್ತಿದ್ದಾರೆ. ಕೃಷಿ ಇವರ ಪ್ರಮುಖ ವೃತ್ತಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com