ಮುಸಲ್ಮಾನರ ಸಮಾಧಿ ಸ್ಥಳ
ಮುಸಲ್ಮಾನರ ಸಮಾಧಿ ಸ್ಥಳ

ಹೆಣ ಹೂಳಲು ಕಬರಿಸ್ಥಾನದಲ್ಲಿ ಸ್ಥಳವೇ ಇಲ್ಲ, ಆತ್ಮಕ್ಕೆ ಶಾಂತಿ ಎಲ್ಲಿ: ಮುಸ್ಲಿಮರ ಪ್ರಶ್ನೆ?

: ರಾಜ್ಯದ ಹಲವು ಪ್ರದೇಶಗಳಲ್ಲಿ ಹೆಣ ಹೂಳಲು ಮುಸ್ಲಿಮರಿಗೆ ಸ್ಥಳ ಇಲ್ಲವಾಗಿದೆ, ಹೀಗಾಗಿ ಬಳಕೆಯಾಗಿರುವ ಸ್ಥಳವನ್ನು ಮರು ಬಳಕೆ ಮಾಡುವಂತೆ ಕರ್ನಾಟಕ ...
Published on
ಬೆಂಗಳೂರು: ರಾಜ್ಯದ ಹಲವು ಪ್ರದೇಶಗಳಲ್ಲಿ ಹೆಣ ಹೂಳಲು ಮುಸ್ಲಿಮರಿಗೆ ಸ್ಥಳ ಇಲ್ಲವಾಗಿದೆ, ಹೀಗಾಗಿ  ಬಳಕೆಯಾಗಿರುವ ಸ್ಥಳವನ್ನು ಮರು ಬಳಕೆ ಮಾಡುವಂತೆ ಕರ್ನಾಟಕ ವಕ್ಫ್ ಮಂಡಳಿ ಸುತ್ತೋಲೆ ಹೊರಡಿಸಿದೆ.
ಜೊತೆಗೆ ಸ್ಥಳದ ಕೊರತೆ ನಿಬಾಯಿಸಲು ಹೆಣ ಹೂಳಿದ ಸ್ಥಳದಲ್ಲಿ ಗೋರಿಗಳನ್ನು ನಿರ್ಮಿಸಬಾರದೆಂದು ಆದೇಶ ಹೊರಡಿಸಿದೆ. ಶವ ಹೂಳಲು ಮಾತ್ರ ಅವಕಾಶ ಇದೆಯೆಂದು ಸುತ್ತೋಲೆಯಲ್ಲಿ ತಿಳಿಸಿದೆ,ಅದಕ್ಕಿಂತ ಹೆಚ್ಚಾಗಿ ಸಮುದಾಯದ ಸದಸ್ಯರು ಈ ಹಿಂದೆ ತಮ್ಮ ಕುಟುಂಬಸ್ಥರನ್ನು ಹೂಳಿದ ಸ್ಥಳದಲ್ಲೇ ಮತ್ತೆ ಹೂಳುವಂತೆ ಕೂಡ ಹೇಳಿದೆ. ರಾಜ್ಯಾದ್ಯಂತ ಮುಸ್ಲಿಮರ ಶ ಹೂಳಲು ಸ್ಥಳದ ಕೊರತೆಯಿದೆ, ಒಂದು ಬಾರಿ ಶವವನ್ನು ಹೂಳಿದ ಮೇಲೆ, ಕೆಲವು ವರ್ಷಗಳ ನಂತರ ಅಲ್ಲಿ ಏನೂ ಉಳಿಯುವುದಿಲ್ಲ, ಹೀಗಾಗಿ ಒಮ್ಮೆ ಶವ ಹೂತ ಜಾಗದಲ್ಲೇ ಮತ್ತೆ ಹೂಳುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ, ಇದರಲ್ಲಿ ಯಾವುದೇ ಕೆಟ್ಟದ್ದು ಇಲ್ಲ ಎಂದು ಕರ್ನಾಟಕ ವಕ್ಫ್ ಮಂಡಳಿ ಆಡಳಿತಾಧಿಕಾರಿ ಮೊಹಮದ್ ಮೊಹ್ಸಿನ್ ತಿಳಿಸಿದ್ದಾರೆ,
ಈ ಹಿಂದೆ ಸಮಾಧಿ ಮಾಡಿದ ಸ್ಥಳದ ಮೇಲ್ಭಾಗದಲ್ಲಿ ತಮ್ಮ ಕುಟುಂಬಸ್ಥರನ್ನು ಮತ್ತೆ ಸಮಾಧಿ ಮಾಡಬೇಕು, ಈಗಾದರೇ ಸೂಕ್ತ ಜಾಗವನ್ನು ಬಳಸುವುದರಿಂದ ಎರಡು ದೇಹಗಳ ನಡುವೆ ಕನಿಷ್ಠ ಸ್ಥಳಾವಕಾಶ ಇರಬೇಕು ಎಂದು ತಿಳಿಸಿದ್ದಾರೆ. ಜೊತೆಗೆ ಹೆಚ್ಚುವರಿ ಸ್ಥಳದಲ್ಲಿ  ಘೋರಿಗಳನ್ನು ನಿರ್ಮಿಸಬಾರದೆಂದು ತಿಳಿಸಿದೆ.
ಇನ್ನೂ ಕಬರಿಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಸಿರು ಬಣ್ಣ ಹಚ್ಚುವಂತೆ ಅಲ್ಲಿನ ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ, ಜೊತೆಗೆ ಈ ಆಸ್ತಿ ವಕ್ಫ್ ಮಂಡಳಿಗೆ ಸೇರಿದ್ದು ಎಂಬ ಬೋರ್ಡ್ ಹಾಕಬೇಕೆಂದು ಸೂಚಿಸಿದೆ, ಇದರಿಂದ ಆಸ್ತಿ ಒತ್ತುವರಿ ಮಾಡುವುದನ್ನು ತಪ್ಪಿಸಲು ಸಹಾಯವಾಗುತ್ತದೆ, ಒಂದು ವೇಳೆ ಈ ನಿರ್ದೇಶನಗಳನ್ನು ಉಲ್ಲಂಘಿಸಿದರೇ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ವಕ್ಫ್ ಮಂಡಳಿ ಎಚ್ಚರಿಸಿದೆ. 
ವಕ್ಫ್ ಮಂಡಳಿಗೆ ಸೇರಿದ ಸುಮಾರು 5ಸಾವಿರ ಕಬರಿಸ್ಥಾನಗಳು ನೋಂದಾಯಿಸಿವೆ, ಹೊಸದಾಗಿ ಇದುವರೆಗ ಯಾವುದೇ ಹೊಸ ಜಾಗವನ್ನು ನೀಡಿಲ್ಲ, ಹೀಗಾಗಿ ಲಭ್ಯವಿರುವ ಜಾಗವನ್ನು ಸೂಕ್ತವಾದಿ ಬಳಸಿಕೊಳ್ಳಲು ನಿರ್ದೇಶನ ನೀಡಲಾಗಿದೆ.
ಒಮ್ಮೆ ಶವ ಹೂಳಿಟ್ಟ ಸ್ಥಳದಲ್ಲಿ ಮತ್ತೆ ಅದೇ ಕುಟುಂಬ ಸದಸ್ಯರ ಶವವನ್ನು ಮತ್ತೆ ಹೂಳುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಸಿಟಿ ಮಾರುಕಟ್ಟೆಯ ಜಾಮಿಯಾ ಮಸೀದಿಯ ಮೊಹಮದ್ ಇಮ್ರಾನ್ ರಶಾದಿ ಹೇಳಿದ್ದಾರೆ, ಸಮಾಧಿ ಜಾಗಗಳ ಕೊರತೆಯ ಸಮಸ್ಯೆ ಪ್ರಪಂಚದಾದ್ಯಂತ ಇದೆ, ಮೆಕ್ಕಾ ಮತ್ತು ಮದೀನಾದಲ್ಲೂ ಇದೇ ವಿಧಾನವನ್ನು ಅಳವಡಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com