ಬೆಂಗಳೂರು ಮಾಸ್ಟರ್ ಪ್ಲಾನ್ ಮತ್ತಷ್ಟು ವಿಳಂಬ, ಹೆಚ್ಚುವರಿ ಸಲಹೆಗಳನ್ನು ಆಹ್ವಾನಿಸಲು ಸರ್ಕಾರ ತೀರ್ಮಾನ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿ.ಡಿ.ಎ) ರಚಿಸಿರುವ ಮಾಸ್ಟರ್ ಪ್ಲಾನ್ 2031 ಸಂಬಂಧ ಬಿಜೆಪಿ ಲಂಚದ ಆರೋಪ ಮಾಡಿದ ಹಿನ್ನೆಲೆಯಲ್ಲಿ ಇದೀಗ ಪರಿಷ್ಕೃತ ಮಾಸ್ಟರ್ ಪ್ಲಾನ್ (ಆರ್ಎಂಪಿ) 2031............
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಬೆಂಗಳೂರು  ಅಭಿವೃದ್ಧಿ ಪ್ರಾಧಿಕಾರ (ಬಿ.ಡಿ.ಎ) ರಚಿಸಿರುವ  ಮಾಸ್ಟರ್ ಪ್ಲಾನ್ 2031 ಸಂಬಂಧ ಬಿಜೆಪಿ ಲಂಚದ ಆರೋಪ ಮಾಡಿದ ಹಿನ್ನೆಲೆಯಲ್ಲಿ ಇದೀಗ ಪರಿಷ್ಕೃತ ಮಾಸ್ಟರ್ ಪ್ಲಾನ್ (ಆರ್ಎಂಪಿ) 2031 ಕರಡುಪ್ರತಿ ರಚನೆಯಾಗಿದೆ. ಇದಕ್ಕಾಗಿ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಧಿ ನೀಡಿದೆ.
ನಗರಾಭಿವೃದ್ದಿ ಇಲಾಖೆಯು ಈ ಸಂಬಂಧ ಪತ್ರವೊಂಡನ್ನು ಹೊರಡಿಸಿದ್ದು ಸಾರ್ವಜನಿಕರು ಯೋಜನೆ ಸಂಬಂಧ ಆಕ್ಷೇಪಣೆ ಹಾಗೂ ಸಲಹೆ ನೀಡಲು ಇನ್ನೂ ಒಂದು ತಿಂಗಳ ಕಾಲ ಹೆಚ್ಚುವರಿ ಅವಧಿಯನ್ನು ಕೊಡಲಾಗಿದೆ. ಇದಾಗಲೇ ಸಾರ್ವಜನಿಕರಿಂದ ಸ್ವೀಕರಿಸಲ್ಪಟ್ಟ ಎಲ್ಲಾ 13,067 ಅರ್ಜಿಯನ್ನು ಮತ್ತೆ ಪರಿಶೀಲಿಸಲು ಪುನರ್ ಪರಿಶೀಲಿಸಲು ಮಾಜಿ ಮತ್ತು ಉನ್ನತ ಧಿಕಾರಿಗಳನ್ನು ಒಳಗೊಂಡಿರುವ ಒಂದು ಹೊಸ ಪಂಚ ಸದಸ್ಯರ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದೆ.
ನೂತನ ಸಮಿತಿಯಲ್ಲಿ ವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್, ಮಾಜಿ ಬಿಬಿಎಂಪಿ ಮತ್ತು ಬಿಡಿಎ ಕಮಿಷನರ್ ಎಚ್ ಸಿದ್ದಯ್ಯ, ನಗರ ಯೋಜನಾ ಇಲಾಖೆಯ ಸದಸ್ಯ ಕಾರ್ಯದರ್ಶಿ ಎಲ್. ಶಶಿಕುಮಾರ್, ಬಿಡಿಎ ಕಮಿಷನರ್ ರಾಕೇಶ್ ಸಿಂಗ್ ಮತ್ತು ನಗರ ತಜ್ಞ ಆರ್.ಕೆ. ಮಿಶ್ರಾ ಸೇರಿದ್ದಾರೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದರು 
ಈ ಹಿಂದೆ ಆರ್ ಎಂಪಿ 2031ರ ಕರಡು ಪ್ರತಿಯನ್ನು ನವೆಂಬರ್ 25, 2017 ರಂದು ಸಾರ್ವಜನಿಕವಾಗಿ  ಪ್ರಕಟಿಸಲಾಗಿತ್ತು, ಈ ಯೋಜನೆಗಾಗಿ ಆಕ್ಷೇಪ, ಸಲಹೆಗಳನ್ನು ನೀಡಲು ಸಾರ್ವಜನಿಕರಿಗೆ ಜನವರಿ 23, 2018 ರ ಅಂತಿಮ ಗಡುವು ನೀಡಲಾಗಿತ್ತು.
"13,067 ಅರ್ಜಿಗಳಲ್ಲಿ ಪ್ರತಿಯೊಂದನ್ನು ಪರಿಶೀಲಿಸಿದ ನಂತರ ತಂಡವು ಬೆಂಗಳೂರು ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಎಂಆರ್ಡಿಎ) ವರದಿ ಸಲ್ಲಿಸಿದೆ. ಸಚಿವ ಸಂಪುಟದ ಅನುಮೋದನೆಯ ನಂತರವೇ ಅಂತಿಮ ಯೋಜನೆಯನ್ನು ಬಿಡುಗಡೆ ಮಾಡಬಹುದು. ಆದಾಗ್ಯೂ ರೋಧ ಪಕ್ಷಗಳು ಮಾಡಿದ ಆರೋಪಗಳಿಂದ ರಾಜ್ಯ ಸರ್ಕಾರ ಹೊಸ ತಂಡವನ್ನು ರೂಪಿಸಲು ನಿರ್ಧರಿಸಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಮತ್ತು ಬಿಜೆಪಿ ವಕ್ತಾರ ಅಶ್ವತ್ ನಾರಾಯಣ್ ಜನವರಿ 9 2018ರಂದು ಪತ್ರಿಕಾಗೋಷ್ಠಿ ನಡೆಸಿ ಯೋಜನೆ ಸಂಬಂಧ ಹಲವಾರು ಅನುಮಾನಗಳಿದೆ. "ಪರಿಸರದ ರಕ್ಷಣೆ, ಉತ್ತಮ ಸಾರಿಗೆ ವ್ಯವಸ್ಥೆ, ಕಲ್ಪಿಸುತ್ತೇವೆ<ದು ಹೇಳಿ ರೈತರಿಂದ ಕೃಷಿ ಭೂಮಿ ತೆಗೆದುಕೊಂಡು ಅದನ್ನು ಬಿಲ್ಡರ್ ಗಳಿಗೆ ಹಂಚಲಾಗುತ್ತಿದೆ. ರಿಯಲ್ ಎಸ್ಟೇಟ್ ಲಾಬಿಗಳಿಗೆ ಸಹಾಯ ಮಾಡುವುದು ಆರ್ಎಂಪಿ ಉದ್ದೇಶ" ಎಂದು ಅವರು ಆರೋಪಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com