ಇನ್ನು ಮುಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ದೀರ್ಘಾವಧಿ

ನಾಳೆ ನೀವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದು ಯೋಜನೆ ...
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುವಾಗ ಸಿಗುವ ಟೋಲ್ ಗೇಟ್
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುವಾಗ ಸಿಗುವ ಟೋಲ್ ಗೇಟ್

ಬೆಂಗಳೂರು: ನಾಳೆ ನೀವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದು ಯೋಜನೆ ಹಾಕಿಕೊಂಡಿದ್ದರೆ ಸ್ವಲ್ಪ ಬೇಗ ಮನೆಯಿಂದ ಹೊರಡುವುದು ಒಳ್ಳೆಯದು. ಸೋಮವಾರ ಮಧ್ಯರಾತ್ರಿಯಿಂದ ದೇವನಹಳ್ಳಿ ಟೋಲ್ ಬೂತ್ ನಲ್ಲಿ ಟೋಲ್ ಸಂಗ್ರಹಣೆ ಆರಂಭವಾಗಿರುವುದರಿಂದ ನಾಳೆ ಅಲ್ಲಿ ಸಂಚಾರ ದಟ್ಟಣೆಯುಂಟಾಗುವ ಸಾಧ್ಯತೆಯಿದೆ. ಇದು ದಿನನಿತ್ಯದ ಸಮಸ್ಯೆಯಾಗಬಹುದು ಎನ್ನುತ್ತಾರೆ ಕ್ಯಾಬ್ ಚಾಲಕರು.

ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವವರು ಏಕಮುಖ ಸಂಚಾರದ ಎಕ್ಸ್ ಪ್ರೆಸ್ ವೇಯನ್ನು ಮತ್ತು ಇತ್ತೀಚೆಗೆ ಮುಕ್ತವಾದ ಬದಲಿ ರಸ್ತೆಯನ್ನು ಹಿಂತಿರುಗುವಿಕೆ ಪ್ರಯಾಣಕ್ಕೆ ಟೋಲ್ ಬಳಕೆ ತಪ್ಪಿಸಲು ಬಳಸುವುದರಿಂದ ಟೋಲ್ ಬೂತ್ ನಿರ್ವಾಹಕರು ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳಿಂದ ಟೋಲ್ ಸಂಗ್ರಹಿಸಲು ಮುಂದಾಗಿವೆ.

ಆದರೆ ಈ ನಡೆಗೆ ಪ್ರಯಾಣಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಟೋಲ್ ಬೂತ್ ಬಳಿ ವಾಹನಗಳು ಗಂಟೆಗಟ್ಟಲೆ ನಿಲ್ಲಬೇಕಾಗುತ್ತದೆ ಎಂದು ಹಿಡಿಶಾಪ ಹಾಕುತ್ತಿದ್ದಾರೆ.
ಟೋಲ್ ಸಂಗ್ರಹಣೆ ವಿರುದ್ಧ ಧ್ವನಿಯೆತ್ತಿರುವ ಬೆಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಕೇಂದ್ರ(ಬಿಸಿಐಸಿ) ಈ ಕ್ರಮದಿಂದ ಸಂಚಾರ ದಟ್ಟಣೆಯುಂಟಾಗಿ ನಗರದ ಚಿತ್ರಣವೇ ಹಾಳಾಗುತ್ತದೆ.

ಈ ಬಗ್ಗೆ ಬಿಸಿಐಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಾತಿನಿಧ್ಯ ಸಲ್ಲಿಸಿದ್ದು ಹಳೆ ಪದ್ದತಿಯನ್ನೇ ಮುಂದುವರಿಸಬೇಕೆಂದು ಕೋರಿದೆ. ವಿಮಾನ ನಿಲ್ದಾಣಕ್ಕೆ ಹೋಗುವಾದ ಸಮಯ ತುಂಬಾ ಮುಖ್ಯವಾಗುತ್ತದೆ. ಟೋಲ್ ಪ್ಲಾಜಾ ಮಾರ್ಗದಲ್ಲಿ ಪೀಕ್ ಸಮಯದಲ್ಲಿ ಹೆಚ್ಚು ಹೊತ್ತು ನಿಲ್ಲಬೇಕಾಗುತ್ತದೆ ಎಂದು ಬಿಸಿಐಸಿ ಮಾಜಿ ಅಧ್ಯಕ್ಷ ಅಹ್ಮೆದಾಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com