ಬರೋಬ್ಬರೀ 12 ವರ್ಷಗಳ ನಂತರ ಅರ್ಕಾವತಿ ಲೇಔಟ್ ಗೆ ಸಿಕ್ತು ವಿದ್ಯುತ್!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅರ್ಕಾವತಿ ಲೇಔಟ್ ನಲ್ಲಿ ಪಡೆದ ನಿವೇಶನಗಳಲ್ಲಿ ಮನೆ ಕಟ್ಟಲು ಮಾಲೀಕರು ಈಗ ಮನಸು ಮಾಡುತ್ತಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅರ್ಕಾವತಿ ಲೇಔಟ್ ನಲ್ಲಿ ಪಡೆದ ನಿವೇಶನಗಳಲ್ಲಿ ಮನೆ ಕಟ್ಟಲು ಮಾಲೀಕರು ಈಗ ಮನಸು ಮಾಡುತ್ತಿದ್ದಾರೆ.
ಸುಮಾರು 12 ವರ್ಷಗಳ ನಂತರ ಅಂತಿಮವಾಗಿ ಅರ್ಕಾವತಿ ಲೇಔಟ್ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ.  ವಿದ್ಯುತ್ ಮೂಲ ಸೌಕರ್ಯ ಕಲ್ಪಿಸಲು ಅಗತ್ಯವಾದ ಎಲ್ಲಾ ವಸ್ತುಗಳನ್ನು ಸರಬರಾಜು ಮಾಡಲು ಖಾಸಗಿ ಕಂಪನಿಗೆ ಮಾರ್ಚ್ 26 ರಂದು ಸೂಚನೆ ನೀಡಲಾಗಿದೆ.
ಸುಮಾರು 600 ಎಕರೆ ಜಾಗದಲ್ಲಿ ನಿರ್ಮಾವಾಗಿರುವ ಅರ್ಕಾವತಿ ಲೇಔಟ್ ನಲ್ಲಿ ನಿವೇಶನ ಪಡೆದು ಮನೆ ಕಟ್ಟಲಾಗದ ಸ್ಥಿತಿಯಲ್ಲಿದ್ದ ಮಾಲೀಕರು ಈಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.  ಬಳ್ಳಾರಿ ರಸ್ತೆ ಮತ್ತು ಓಲ್ಡ್ ಮದ್ರಾಸ್ ರಸ್ತೆಯ ಜಕ್ಕೂರು, ರಾಜನಹಳ್ಳಿ, ಸಂಪಿಗೆಹಳ್ಳಿ, ಥಣಿಸಂದ್ರ, ಹೆಣ್ಣೂರು, ಕೆ. ನಾರಾಯಣಪುರ ಹಾಗೂ ಬೈರತಿ ಖಾನೆ ಸೇರಿದಂತೆ ಸುಮಾರು 13 ಗ್ರಾಮಗಳು ಈ ಲೇಔಟ್ ವ್ಯಾಪ್ತಿಗೆ ಬರುತ್ತವೆ,
ಈ ಅರ್ಕಾವತಿ ಲೇಔಟ್ ನಲ್ಲಿ ಸುಮಾರು 6 ಸಾವಿರ ಮನೆಗಳನ್ನು ನಿರ್ಮಿಸಬಹುದಾಗಿದೆ. ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ಇದುವರೆಗೂ ಇಲ್ಲಿ ಮನೆ ಕಟ್ಟಲು ಮಾಲೀಕರು ಹಿಂದೇಟು ಹಾಕುತ್ತಿದ್ದರು. ಆದರೆ ಈ ಪ್ರದೇಶದಲ್ಲಿ  185 ಮನೆ ನಿರ್ಮಾಣವಾಗಿದ್ದು ಕೆಲವು ಮಂದಿ ವಾಸವಾಗಿದ್ದಾರೆ, ಇವರು ಬೆಸ್ಕಾಂ ಗೆ ಅತ್ಯಧಿಕ ಪ್ರಮಾಣದಲ್ಲಿ ಹಣ ಪಾವತಿಸಿ ವಿದ್ಯುತ್ ಸಂಪರ್ಕ ಪಡೆದು ಕೊಂಡಿದ್ದಾರೆ.
ಅರ್ಕಾವತಿ ಲೇಔಟ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಖಾಸಗಿ ಕಂಪನಿ ಜೊತೆ 221 ಕೋಟಿ ರು ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದು ಬಿಡಿಎ ಅಧಿಕಾರಿಗಳು  ಸ್ಪಷ್ಟ ಪಡಿಸಿದ್ದಾರೆ.
ತಾತ್ಕಲಿಕ ಸಂಪರ್ಕ ಪಡೆದಿರುವ ನಿವಾಸಿಗಳು ಶೀಘ್ರವೇ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯಬಹುದಾಗಿದೆ, ಸಾಧಾರಣ ಸಂಪರ್ಕಕ್ಕಾಗಿ ನಿವಾಸಿಗಳು 30 ಯುನಿಟ್ ವರೆಗೆ 2.90 ರು ಪಾವತಿಸಬೇಕು. ಅದ್ದಾ ನಂತರ ಬಳಸುವ ಪ್ರತಿ ಯುನಿಟ್ ಗೆ ಬೇರೆ ಬೇರೆ ದರ ವಿಧಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗ ತಾತ್ಕಾಲಿಕ ಸಂಪರ್ಕ ಪಡೆದುಕೊಂಡಿರುವ ಗ್ರಾಹಕರು ಪ್ರತಿ ಯುನಿಟ್ ಗೆ 9.50 ರು ಪಾವತಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com