
ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿರುವ ಜಾಗದ ಮೇಲೆ ಪ್ರತಿಯೊಬ್ಬರ ಕಣ್ಣು ನೆಟ್ಟಿದೆ. ಇದು ನಗರದ ಕೇಂದ್ರ ಭಾಗದಲ್ಲಿದೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಕಟ್ಟಡ ನಿರ್ಮಿಸಲು ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನದ ಪಕ್ಕದಲ್ಲಿ ಜಾಗ ಪಡೆದುಕೊಂಡ ನಂತರ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಕೇಂದ್ರ ಕಚೇರಿ ನಿರ್ಮಿಸಲು ಮತ್ತು ಬೆಂಗಳೂರು ಸ್ಥಳೀಯ ಕಚೇರಿ ನಿರ್ಮಿಸಲು ಸ್ಥಳಾವಕಾಶವನ್ನು ಕೋರಿದೆ.
ಹಣಕಾಸು ಇಲಾಖೆ ಸಲ್ಲಿಸಿದ ಪ್ರಸ್ತಾವನೆ ಬಳಿಕ, ಬೆಂಗಳೂರು ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಪಕ್ಕದಲ್ಲಿ ಇರುವ ಜಾಗವನ್ನು ನೀಡಲು ಒಪ್ಪಿಕೊಂಡಿದೆ. ಆ ನಿರ್ಧಾರವನ್ನು ಕಳೆದ ಮಾರ್ಚ್ 5ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ತೆಗೆದುಕೊಳ್ಳಲಾಗಿದ್ದು ಇದಕ್ಕೆ ಸಂಬಂಧಪಟ್ಟಂತೆ ಫೆಬ್ರವರಿ 5ರಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಒಟ್ಟು 37,112.85 ಚದರಡಿ ಜಾಗವಿದ್ದು ಅದರಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ನೀಡಿದ ನಂತರ ಉಳಿದಿರುವ 10,000 ಚದರಡಿ ಜಾಗವನ್ನು ಸಿಂಡಿಕೇಟ್ ಒದಗಿಸಲಿದೆ. ಸಭೆಯ ನಡಾವಳಿಯಲ್ಲಿ ನಮೂದಿಸಿದಂತೆ ಈ ಜಾಗವನ್ನು 99 ವರ್ಷಗಳ ಕಾಲ ಭೋಗ್ಯಕ್ಕೆ ನೀಡಿ ರಾಜ್ಯ ಲೆಕ್ಕಪತ್ರ ಇಲಾಖೆ ಪ್ರತಿವರ್ಷ 1 ಲಕ್ಷ ರೂಪಾಯಿ ಭೋಗ್ಯದ ಮೊತ್ತ ನೀಡಲಿದೆ.
ಆದರೆ ಬೆಂಗಳೂರು ವಿಶ್ವವಿದ್ಯಾಲಯ ತೆಗೆದುಕೊಂಡಿರುವ ತೀರ್ಮಾನ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಕೆರಳಿಸಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ವಿಶ್ವವಿದ್ಯಾಲಯ ಅಧಿಕಾರಿಗಳು, ವಿಶ್ವವಿದ್ಯಾಲಯ ಶಾಖೆಗಳಾಗಿರುವಾಗ ಮತ್ತು ಎರಡೂ ಕೂಡ ವಿವಿಧ ಆಡಳಿತಾತ್ಮಕ ವ್ಯವಸ್ಥೆ ಹೊಂದಿರುವಾಗ ಕೇಂದ್ರ ವಿಶ್ವವಿದ್ಯಾಲಯ ಇಂತಹ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಹೇಗೆ ಸಾಧ್ಯ ಎಂದು ಕೇಳಿದೆ. ನಮಗೆ ಈ ಬೆಳವಣಿಗೆ ಬಗ್ಗೆ ಅರಿವಿಲ್ಲ. ಆದರೂ ಇದು ಸತ್ಯವಾದ ವಿಷಯವಾಗಿದ್ದರೆ ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯುತ್ತೇವೆ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ.ಎಂ.ರಾಮಚಂದ್ರ ಗೌಡ ಹೇಳಿದ್ದಾರೆ.
ಈ ಮಧ್ಯೆ ವಿಶ್ವವಿದ್ಯಾಲಯವನ್ನು ವಿಸ್ತರಿಸಲು ಸ್ಥಳದ ಅಭಾವವಿರುವುದನ್ನು ರಿಜಿಸ್ಟ್ರಾರ್ ಉಲ್ಲೇಖಿಸಿದರು. ವಿಶ್ವವಿದ್ಯಾಲಯದ ಚಟುವಟಿಕೆಗಳಿಗೆ ಸ್ಥಳವನ್ನು ವಿಸ್ತರಿಸಲು ಜಾಗದ ಅಭಾವವಿರುವಾಗ ಬೆಂಗಳೂರು ಕೇಂದ್ರ ಕ್ಷೇತ್ರಗಳ ಪ್ರತಿನಿಧಿಗಳಿಗೆ ಸ್ಥಳ ಒದಗಿಸುವಂತೆ ನಾವು ಜನಪ್ರತಿನಿಧಿಗಳನ್ನು ಕೇಳುತ್ತೇವೆ. ಪರಿಸ್ಥಿತಿ ಹೀಗಿರುವಾಗ ನಮ್ಮ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ಕುರಿತು ಬೇರೆ ವಿಶ್ವವಿದ್ಯಾಲಯಗಳು ಹೇಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಎಂದು ರಿಜಿಸ್ಟ್ರಾರ್ ಕೇಳಿದರು.
Advertisement