ಪಿಯುಸಿ ಮಂಡಳಿ
ಪಿಯುಸಿ ಮಂಡಳಿ

224 ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ತಡೆಹಿಡಿದ ಇಲಾಖೆ

ಪದವಿಪೂರ್ವ ಶಿಕ್ಷಣ ಇಲಾಖೆ ಅನೇಕ ಕಾರಣಗಳಿಗಾಗಿ ಸುಮಾರು 224 ಅಭ್ಯರ್ಥಿಗಳ ಫಲಿತಾಂಶವನ್ನು ...

ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆ ಅನೇಕ ಕಾರಣಗಳಿಗಾಗಿ ಸುಮಾರು 224 ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿದಿದೆ.

ಫಲಿತಾಂಶ ಪಟ್ಟಿಯಲ್ಲಿರುವ ಎಕ್ಸ್ ಗುರುತು ಫಲಿತಾಂಶವನ್ನು ತಡೆಹಿಡಿದಿರುವುದರ ಸೂಚನೆಯಾಗಿದೆ. ಅಂದರೆ ವಿದ್ಯಾರ್ಥಿ ಅನುತ್ತೀರ್ಣನಾಗಿದ್ದಾನೆಂದು ಅರ್ಥವಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಲವು ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ವಿಷಯದ ಕೋಡ್ ಸಂಖ್ಯೆಯನ್ನು ತಪ್ಪಾಗಿ ಬರೆದಿದ್ದಾರೆ ಮತ್ತು ಇನ್ನು ಕೆಲವರು ತಮ್ಮ ಉತ್ತರ ಪತ್ರಿಕೆಗಳನ್ನು ಹರಿದುಕೊಂಡಿದ್ದಾರೆ. ಇಂತಹ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿಲ್ಲ ಎಂದು ಪಿಯುಸಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಎಕ್ಸ್ ಮಾರ್ಕ್ಸ್ ಎಂದರೆ ಅಂಕಪಟ್ಟಿಯಲ್ಲಿ ಅನುತ್ತೀರ್ಣ ಎಂದು ಇತ್ತೀಚೆಗೆ ನಗರದ ವಿದ್ಯಾರ್ಥಿಯೊಬ್ಪ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಈ ಕುರಿತು ಸ್ಪಷ್ಟೀಕರಣ ನೀಡಿರುವ ಇಲಾಖೆ ಅಧಿಕಾರಿಗಳು, ತನಿಖೆ ನಡೆಸಿದ ನಂತರ ಈ 224 ಅಭ್ಯರ್ಥಿಗಳ ಫಲಿತಾಂಶವನ್ನು ಘೋಷಿಸಲಾಗುವುದು ಎಂದು ಹೇಳಿದರು.

ಇಲ್ಲಿ ಎರಡು ವಿಭಾಗಗಳಿವೆ ಒಂದು ತಡೆಹಿಡಿಯುವುದು ಮತ್ತು ಒತ್ತಾಯಪೂರ್ವಕವಾಗಿ ತಡೆಹಿಡಿಯುವುದು. ಫಲಿತಾಂಶವನ್ನು ತಡೆಹಿಡಿದ ಸಂದರ್ಭದಲ್ಲಿ ಪರೀಕ್ಷಾರ್ಥಿಗಳ ಡೈರಿಯನ್ನು ಪರಿಶೀಲಿಸಲಾಗುತ್ತದೆ. ಒತ್ತಾಯಪೂರ್ವಕ ತಡೆಹಿಡಿದ ಸಂದರ್ಭದಲ್ಲಿ, ವಿಸ್ತೃತ ತನಿಖೆ ನಡೆಯುತ್ತದೆ.

ಪಿಯುಸಿ ಇಲಾಖೆ ನಿರ್ದೇಶಕಿ ಸಿ.ಶಿಖಾ, ಸುಮಾರು 181 ಫಲಿತಾಂಶವನ್ನು ತಡೆಹಿಡಿಯಲಾಗಿದ್ದು, 43 ಫಲಿತಾಂಶವನ್ನು ಒತ್ತಾಯಪೂರ್ವಕವಾಗಿ ತಡೆಹಿಡಿಯಲಾಗಿದೆ. ಒತ್ತಾಯಪೂರ್ವಕ ತಡೆಹಿಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಪರೀಕ್ಷಾರ್ಥಿಗಳನ್ನು ಕರೆದು ಉತ್ತರ ಪತ್ರಿಕೆ ಹೇಗೆ ಹರಿದುಹೋಯಿತು ಎಂದು ನೋಡಲಾಗುತ್ತದೆ. ನಾವು ವಿದ್ಯಾರ್ಥಿಗಳನ್ನು ಮಾತ್ರ ದೂರುವುದಿಲ್ಲ. ಪರೀಕ್ಷಾ ಕೊಠಡಿಯಲ್ಲಿರುವ ಪರೀಕ್ಷಾರ್ಥಿಗಳು ಅಕ್ರಮತೆ ನಡೆದಿದ್ದನ್ನು ಪರೀಕ್ಷೆ ನಡೆಸಬೇಕು ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

Related Stories

No stories found.

Advertisement

X
Kannada Prabha
www.kannadaprabha.com