ರಾಜಕೀಯ ಪ್ರವೇಶಿಸಲು ಆಸಕ್ತಿಯಿಲ್ಲ, ಆದರೆ ಕರ್ನಾಟಕದಲ್ಲಿ ರಾಜಕೀಯ ಮಾಡುತ್ತಿದ್ದೇನೆ: ಪ್ರಕಾಶ್ ರೈ

ತಮ್ಮ ಸ್ನೇಹಿತೆ ಗೌರಿ ಲಂಕೇಶ್ ಹತ್ಯೆಯಾದ ಬಳಿಕ ಕರ್ನಾಟಕ ರಾಜಕೀಯದಲ್ಲಿ ಸಕ್ರಿಯರಾಗಿರುವ ನಟ ಪ್ರಕಾಶ್ ರೈ ಬಿಜೆಪಿಯನ್ನು ವಿರೋಧಿಸುತ್ತಿದ್ದು ...
ಪ್ರಕಾಶ್ ರೈ
ಪ್ರಕಾಶ್ ರೈ
Updated on: 
ರಾಯಚೂರು: ತಮ್ಮ ಸ್ನೇಹಿತೆ ಗೌರಿ ಲಂಕೇಶ್ ಹತ್ಯೆಯಾದ ಬಳಿಕ ಕರ್ನಾಟಕ ರಾಜಕೀಯದಲ್ಲಿ ಸಕ್ರಿಯರಾಗಿರುವ ನಟ ಪ್ರಕಾಶ್ ರೈ ಬಿಜೆಪಿಯನ್ನು ವಿರೋಧಿಸುತ್ತಿದ್ದು ಕಾಂಗ್ರೆಸ್ ಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ, ಈ ವೇಳೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಅವರು ಸಂದರ್ಶನ ನೀಡಿದ್ದಾರೆ.
ತಮಗೆ ರಾಜಕೀಯ ಪ್ರವೇಶಿಸಲು ಆಸಕ್ತಿಯಿಲ್ಲ ಎಂದು ಎಹಲವು ಬಾರಿ ಹೇಳಿದ್ದೀರಿ, ಆದರೆ ಸದ್ಯ ತಾವು ಮಾಡುತ್ತಿರುವ ಕೆಲಸ ದೀರ್ಘಕಾಲದ ರಾಜಕೀಯಕ್ಕಾಗಿ ಎಂಬ ಮಾತಗಳು ಕೇಳಿ ಬರುತ್ತಿವೆ?
ರಾಜಕೀಯ ಪ್ರವೇಶಿಸಲು ನನಗೆ ಆಸಕ್ತಿಯಿಲ್ಲ, ಆದರೆ ಕರ್ನಾಟಕದಲ್ಲಿ ನಾನು ರಾಜಕೀಯ ಮಾಡುತ್ತಿದ್ದೇನೆ. ಇದಕ್ಕಾಗಿ ಜಸ್ಟ್ ಆಸ್ಕಿಂಗ್ ಅಭಿಯಾನ ಆರಂಭಿಸಿದ್ದೇನೆ, ಈ ಅಭಿಯಾನ ದಶಕದ ಕಾಲ ನಡೆಯಲಿದ್ದು, ಕರ್ನಾಟಕ ಮತ್ತು ಭಾರತದ ಜಾಗೃತಿಗೆ ಕಾರಣವಾಗಲಿದೆ, ತಮ್ಮ ಅಧಿಕಾರದ ಬಗ್ಗೆ ಪ್ರಶ್ನೆ ಮಾಡಲು ಸಮರ್ಥರಾಗುತ್ತಾರೆ.
ರಾಷ್ಟ್ರೀಯ ಪಕ್ಷಗಳ ವಿರುದ್ದ ಹೋರಾಡಲು ರಾಜ್ಯದಲ್ಲಿ ಸಮರ್ಥ ಪ್ರಾದೇಶಿಕ ಪಕ್ಷ ಎಂದು ನಿಮಗೆ ಅನಿಸಿದೆಯೇ?
ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸಮರ್ಥ ಪ್ರಾದೇಶಿಕ ಪಕ್ಷದ ಅವಶ್ಯಕತೆಯಿದೆ. ನನಗೆ ಅನ್ನಿಸುವ ಪ್ರಕಾರ ಶೀಘ್ರವೇ ಅಂತದೊಂದು ಪಕ್ಷ ಸಿಗಲಿದೆ,ಚಳುವಳಿಗಳ ಮೂಲಕ ಪಕ್ಷಗಳು ಹುಟ್ಟುತ್ತವೆ.
ಕರ್ನಾಟಕದಲ್ಲಿ ರಾಜಕೀಯ ಪಕ್ಷವನ್ನು ಸ್ಛಾಪಿಸುವ ಯೋಜನೆ ಇದೆಯೇ?
ಸದ್ಯದ ಪರಿಸ್ಥಿತಿಯಲ್ಲಿ  ಆ ಇಚ್ಚೆ ನನಗಿಲ್ಲ. ನೋಡೋಣ, ಹೊಸ ನಾಯಕತ್ವ ಹಾಗೂ ಚಳವಳಿ ಯಾವ ದಿಕ್ಕಿಗೆ ಕರೆದೊಯ್ಯುತ್ತದೆ. ನನ್ನ ಜೀವನದ ಪ್ರಯಾಣ ತುಂಬಾ ವಿಭಿನ್ನ, ಕೆಲಸ ಮಾಡುವುದಕ್ಕೂ ಮುನ್ನ ನಾನು ಯಾವುದನ್ನು ನಿರ್ಧರಿಸುವುದಿಲ್ಲ, ಸ್ವಾಭಾವಿಕವಾಗಿಯೆ ಕೆಲವೊಂದು ಘಟನೆಗಳು ಜರುಗುತ್ತವೆ. ತುರ್ತುಪರಿಸ್ಥಿತಿ ಇದ್ದಾಗ ಒಂದು ಹೊಸ ಚಳುವಳಿ ಮತ್ತು ಪಕ್ಷವು ಹುಟ್ಟಿಕೊಳ್ಳುತ್ತದೆ.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳುತ್ತೀರಿ? ನಿಮಗೆ ಹೇಗೆ ನಂಬಿಕೆ ಇದೆ?
ದಕ್ಷಿಣ ಭಾರತದ ಜನರು ಕೋಮು ರಾಜಕೀಯವನ್ನು ಬಯಸುವುದಿಲ್ಲ, ಉತ್ತರ ಭಾರತದಲ್ಲಿ ಆದಂತೆ ಇಲ್ಲಿಯೂ ಆಗುತ್ತದೆ, ಬಿಜೆಪಿ ಅದಕ್ಕಾಗಿ ಸೂಕ್ತ ಬೆಲೆ ತೆರಬೇಕಾಗುತ್ತದೆ.
ಬಿಜೆಪಿ ಆಸಕ್ತಿಯಿಂದ ಕೆಲಸ ಮಾಡುತ್ತಿಲ್ಲ, ಸಂಘ ಪರಿವಾರಕ್ಕಾಗಿ ಶ್ರಮಿಸುತ್ತಿದೆ.
ಕರ್ನಾಟಕದ ಸಿಎಂ ಅಭ್ಯರ್ಥಿಗಳಲ್ಲಿ ನಿಮಗೆ ಯಾರು ಉತ್ತಮ?
ಸಿದ್ದರಾಮಯ್ಯ ಅವರೇ ಉತ್ತಮ ಸಿಎಂ, ಅಭಿವೃದ್ಧಿಗಾಗಿ ಮಾತ್ರ ಸಿಎಂ ಹೋರಾಟ ನಡೆಸುತ್ತಿದ್ದಾರೆ, ಅವರು ಸಮಾಜವಾದಿ ಹಿನ್ನೆಲೆ ಹೊಂದಿರುವ ಅವರು, ಉತ್ತಮ ಅಭ್ಯರ್ಥಿ ಅವರು ಜಾತಿ ರಾಜಕೀಯಕ್ಕೆ ಅಂಟಿಕೊಂಡಿಲ್ಲ,
ನರೇಂದ್ರ ಮೋದಿ ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳಿದ್ದಾರಲ್ಲ?
ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ತಮಗೆ ಅಪಾರ ಗೌರವ ಇದೆ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ, ಕಾವೇರಿ ನೀರಿನ ವಿಚಾರವಾಗಿ ಹಲವು ಬಾರಿ ಮೋದಿಯವರಿಗೆ ಪತ್ರ ಬರೆದರೂ ಸ್ಪಂದಿಸುತ್ತಿಲ್ಲ ಎಂದು ಸ್ವತಃ ದೇವೇಗೌಡರೇ ಹೇಳಿದ್ದರು. ಆಗ ದೇವೇಗೌಡರ ಬಗ್ಗೆ ಗೌರವ ಎಲ್ಲಿಗೆ ಹೋಗಿತ್ತು? ಸೋನಿಯಾ ಗಾಂಧಿಯವರ ಬಗ್ಗೆ ಅಗೌರವದಿಂದ ಮಾತನಾಡುವವರಿಗೆ ಗೌರವ ಅಂದರೆ ಏನೆಂದು ಗೊತ್ತಿದೆಯಾ?’
ಮತದಾರರಿಗೆ ನಿಮ್ಮ ಸಂದೇಶ?
ಪ್ರತಿಯೊಬ್ಬರು ಬಂದು ಮತದಾನ ಮಾಡಬೇಕು, ಅವರ ವರ್ತನೆ ಮೇಲೆ ಅಭ್ಯರ್ಥಿಗಳಿಗೆ ಮತಚಲಾಯಿಸಬೇಕು, ಉತ್ತಮ ಪಕ್ಷ ಬಹುಮತ ಪಡೆದು ಆಧಿಕಾರಕ್ಕೆ ಬಂದು ಮುಂದಿನ ಐದು ವರ್ಷಗಳಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com