ರಾಜ್ಯದಲ್ಲಿ ಸುಮಾರು 120 ಕೋಟಿ ರುಪಾಯಿ ಜಪ್ತಿ: ಅಧಿಕಾರಿಗಳು

ಮೇ 12ರಂದು ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಕರ್ನಾಟಕದಲ್ಲಿ ಸುಮಾರು 120 ಕೋಟಿ ರುಪಾಯಿ ಮೌಲ್ಯದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಮೇ 12ರಂದು ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಕರ್ನಾಟಕದಲ್ಲಿ ಸುಮಾರು 120 ಕೋಟಿ ರುಪಾಯಿ ಮೌಲ್ಯದ ನಗದು, ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಶನಿವಾರ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 67.27 ಕೋಟಿ ರುಪಾಯಿ ನಗದು, 23.36 ಕೋಟಿ ಮೌಲ್ಯದ ಮದ್ಯ, 43.17 ಕೋಟಿ ರುಪಾಯಿ ಚಿನ್ನ ಹಾಗೂ ಕುಕ್ಕರ್ ಲ್ಯಾಪ್ ಟಾಪ್ ಸೇರಿದಂತೆ 18.57 ಕೋಟಿ ರುಪಾಯಿ ಮೌಲ್ಯದ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಜಪ್ತಿ ಮಾಡಲಾಗಿದ್ದ ಒಟ್ಟು 152.78 ಕೋಟಿ ರುಪಾಯಿ ನಗದು ಪೈಕಿ, ದಾಖಲೆ ಪರಿಶೀಲಿಸಿದ ಬಳಿಕ 32.54 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚುನಾವಣೆ ಘೋಷಣೆಯಾದ ಬಳಿಕ ಚುನಾವಣಾ ಕರ್ತವ್ಯ ನಿಯೋಜನೆಗೊಂಡಿದ್ದ ಪೊಲೀಸರು, ಆದಾಯ ತೆರಿಗೆ ಅಧಿಕಾರಿಗಳು ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಚಿನ್ನ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com