ರಾಯಚೂರು: ಕಾಂಗ್ರೆಸ್ ಪರ ಪ್ರಚಾರ, ಕೃಷಿ ವಿವಿ ಪ್ರಾಧ್ಯಪಕಿ ಅಮಾನತು

ಕಾಂಗ್ರೆಸ್ ಪರವಾಗಿ ಸಾಮಾಜಿಕ ತಾಣ ಫೇಸ್​ಬುಕ್​ ಹಾಗೂ ವಾಟ್ಸ್ ಅಪ್ ಗಳಲ್ಲಿ ಪ್ರಚಾರ ಮಾಡುತ್ತಿದ್ದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಪಕಿಯನ್ನು ಅಮಾನತುಗೊಳಿಸಲಾಗಿದೆ.
ಡಾ.ಜಾಗೃತಿ ದೇಶಮಾನ್ಯ
ಡಾ.ಜಾಗೃತಿ ದೇಶಮಾನ್ಯ
Updated on
ರಾಯಚೂರು: ಕಾಂಗ್ರೆಸ್ ಪರವಾಗಿ ಸಾಮಾಜಿಕ ತಾಣ ಫೇಸ್​ಬುಕ್​ ಹಾಗೂ ವಾಟ್ಸ್ ಅಪ್ ಗಳಲ್ಲಿ ಪ್ರಚಾರ ಮಾಡುತ್ತಿದ್ದ ರಾಯಚೂರು  ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಪಕಿಯನ್ನು ಅಮಾನತುಗೊಳಿಸಲಾಗಿದೆ.
ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಜಾಗೃತಿ ದೇಶಮಾನ್ಯ ಅಮಾನತುಗೊಂಡಿರುವ ಪ್ರಾದ್ಯಾಪಕಿ. ರಾಜಕೀಯ ಪಕ್ಷವೊಂದರ ಪರ ಪ್ರಚಾರ ನಡೆಸಿದ್ದಕ್ಕಾಗಿ ತಕ್ಶ್ಃಅಣ ಜಾರಿಗೆ ಬರುವಂತೆ  ಮೂರು ತಿಂಗಳು ಅಮಾನತುಗೊಳಿಸಿ ವಿಶ್ವವಿದ್ಯಾಲಯದ ಕುಲಸಚಿವ ಜಂಬುನಾಥ ಗುತ್ತಿ ಆದೇಶಿಸಿದ್ದಾರೆ.
ಪ್ರಾದ್ಯಾಪಕಿ, ಪ್ರಧಾನಿ ಮೋದಿ ಹಾಗು ಶ್ರೀರಾಮುಲು ವಿರುದ್ಧ ಸಾಮಾಜಿಕ ತಾಣಗಳಲ್ಲಿ ಪ್ರಚಾರ ನಡೆಸಿದ್ದು ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕೋರಿದ್ದರು. ದೇಶಮಾನ್ಯ ಅವರು ಪರೋಕ್ಷವಾಗಿ ರಾಜಕೀಯದಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಚುನಾವಣಾಧಿಕಾರಿಗಳು ಇತ್ತೀಚೆಗೆ ವಿಶ್ವವಿದ್ಯಾನಿಲಯಕ್ಕೆ ಶಿಪಾರಸು ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com