ನನ್ನ ಹೋರಾಟದಿಂದ ಇತರರು ಲಾಭ ಮಾಡಿಕೊಂಡರು, ನನಗೆ ದ್ರೋಹ ಎಸಗಿದರು: ಇರೋಮ್ ಶರ್ಮಿಳಾ

ಮಣಿಪುರದಲ್ಲಿ ತನ್ನವರಿಂದ ಸೋಲು ಕಂಡ ಐರನ್ ಲೇಡಿ ಇರೋಮ್ ಶರ್ಮಿಳಾ ನಗರಕ್ಕೆ ಆಗಮಿಸಿದ್ದಾರೆ. ಈ ವೇಳೆ ಎಕ್ಸ್ ಪ್ರೆಸ್ ನೊಡನೆ ಆಕೆ ಸಂಭಾಷಣೆಯಲ್ಲಿ ತೊಡಗಿದ್ದರು. ಇದರ ಆಯ್ದ ಬಾಗ ಇಲ್ಲಿದೆ.
ಇರೋಮ್ ಶರ್ಮಿಳಾ
ಇರೋಮ್ ಶರ್ಮಿಳಾ
ಬೆಂಗಳೂರು: ಮಣಿಪುರದಲ್ಲಿ ತನ್ನವರಿಂದ ಸೋಲು ಕಂಡ ಐರನ್ ಲೇಡಿ ಇರೋಮ್ ಶರ್ಮಿಳಾ ನಗರಕ್ಕೆ ಆಗಮಿಸಿದ್ದಾರೆ. ಈ ವೇಳೆ ಎಕ್ಸ್ ಪ್ರೆಸ್ ನೊಡನೆ ಆಕೆ ಸಂಭಾಷಣೆಯಲ್ಲಿ ತೊಡಗಿದ್ದರು. ಇದರ ಆಯ್ದ ಬಾಗ ಇಲ್ಲಿದೆ.
ಮೇಘಾಲಯದಲ್ಲಿ, ಅರುಣಾಚಲದ 8 ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಶಸ್ತ್ರ ಪಡೆಗಳು (ವಿಶೇಷ ಅಧಿಕಾರಗಳ) ಕಾಯಿದೆ ರದ್ದಾಗಿದೆ, ನಿಮ್ಮ ಹೋರಾಟ ಫಲ ನೀಡಿದೆ ಎಂದೆನಿಸಿದೆಯೆ?
ಕಳೆದ 16 ವರ್ಷಗಳಿಂದ ಅವರು ನನ್ನ ಹೋರಾಟವನ್ನು ಕಡೆಗಣಿಸಿದ್ದರು. ಈಗ ಅದೇ ಪಡೆಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಇದೂ ಕೇವಲ ರಾಜಕೀಯ ಉದ್ದೇಶಕ್ಕಾಗಿ ಮಾತ್ರ, ಆದರೆ ಏನೇ ಇರಲಿ ಒಂದು ರೀತಿಯಲ್ಲಿ ಇದು ಒಳ್ಳೆಯ ಬೆಳವಣಿಗೆ. ಬ್ರಿಟೀಷರು ಜಾರಿಗೆ ತಂದಿದ್ದ ಕಾಯ್ದೆಯನ್ನೇ ನಾವೇಕೆ ಮುಂದುವರಿಸಬೇಕು? ನಾವೀಗ  ಪ್ರಜಾಸತ್ತಾತ್ಮಕ, ಗಣರಾಜ್ಯದಲ್ಲಿದ್ದೇವೆ. ಎಎಫ್ಎಸ್ಪಿಎ ಪ್ರಜಾಪ್ರಭುತ್ವದ ಚಿತ್ರಣವನ್ನು ಹಾಳುಗೆಡವುತ್ತಿದೆ.
ನೀವು ಮಣಿಪುರದೊಡನೆ ಸಂಬಂಧ ಮುಂದ್ವರಿಸಲು ಬಯಸಿದ್ದೀರಿ ಎಂದಿರಿ, ಆದರೆ ನಿಮ್ಮ ಜನರೇ ನಿಮಗೆ ಮೋಸ ಮಾಡಿದ್ದಾರೆ ಎನಿಸಿದೆಯೆ?
16 ವರ್ಷಗಳ ಕಾಲ ಒಂದೇ ಒಂದು ಕಾರಣಕ್ಕಾಗಿ ನಾನು ಹೋರಾಟ ನಡೆಸಿದ್ದೆ. ಇದರ ಹಿಂದೆ ಯಾವ ಸ್ವಾರ್ಥವಿರಲಿಲ್ಲ. ನಾನು ಒಂದೇ ಒಂದು ಹನಿ ನೀರೂ ಕ್ಕುಡಿಯಲಿಲ್ಲ. ಆ ನಂತರ ನಾನು ನನ್ನ ಕಾರ್ಯತಂತ್ರ ಬದಲಿಸಲು ನಿರ್ಧರಿಸಿದೆ.ಮೊದಲು ನಾನು ಇಅರ ಕುರಿತಂತೆ ಜನರ ಅಭಿಪ್ರಾಯ ತಿಳಿದುಕೊಳ್ಳಲು ಪ್ರಯತ್ನಿಸಿದೆ. ಆದರೆ ಜನ ನನ್ನನ್ನು ನಿರ್ಲಕ್ಷಿಸಿದ್ದಾರೆ ಎನ್ನುವುದು ತಿಳಿದು ನಾನೇ ನನ್ನ ಸ್ವ ಇಚ್ಚೆಯಿಂದ ಉಪವಾಸ ಬಿಟ್ಟೆ. ನನ್ನ ಕಾರ್ಯತಂತ್ರವನ್ನೊಮ್ಮೆ ಬದಲಾಯಿಸಿದ ಬಳಿಕ ಜನರು ನನ್ನನ್ನು ದ್ವೇಷಿಸತೊಡಗಿದ್ದರು.
ಜನರ ಈ ಪ್ರತಿಕ್ರಿಯೆಯಿಂದ ನಾನು ಅವರಿಂಡ ದೂರವಾಗಬಯಸಿದ್ದೆ.ಉಪವಾಸ ಮುಗಿಸುವವರೆಗೆ ನಾನು ಅವರ ಪಾಲಿನ ದೇವತೆ, ಮಗಳು, ಸೋದರಿಯಾಗಿದ್ದೆ. ಆದರೆ ಉಪವಾಸ ಅಂತ್ಯಗೊಳಿಸಿದ ಬಳಿಕ ನಾನು ನೀಚಳು, ಸ್ವಾರ್ಥಿ, ಪಲಾಯನಾವಾದಿ ಎನ್ನುವುದಾಗಿ ಬಿಂಬಿಸಲ್ಪಟ್ಟೆನು. ಹೀಗಾಗಿ ನಾನು ನನ್ನ ಹೋರಾಟವನ್ನು ಪರ್ಯಾಯ ರೀತಿಯಲ್ಲಿ ಮುಂದುವರಿಸಲು ಬಯಸುತ್ತೇನೆ. ನಾನು ನನ್ನ ಜನ, ಸಂಬಂಧಿಗಳೊಡನೆ ಸೇರಲು ಇಚ್ಚಿಸಲಾರೆ.
ನೀವು ರಾಜಕೀಯಕ್ಕೆ ಮರಳಲು ಬಯಸಿದ್ದೀರಾ?
ಎಲ್ಲವೂ ರಾಜಕೀಯ, ನಾನು ವಿದ್ಯಾರ್ಥಿಗಳೊಂದಿಗೆ ಮಾತನಾಡುವ ವಿಷಯವೂ ಸಹ ಒಂದು ರೀತಿಯ ರಾಜಕೀಯವಾಗಿದೆ. ಆದರೆ ನಾನು ಸರ್ಕಾರದೊಂದಿಗೆ, ಮತ್ತು ರಾಷ್ಟ್ರ ರಾಜಕೀಯದೊಂದಿಗೆ ಇರಲು ಇಚ್ಚಿಸುತ್ತೇನೆ.ನಮ್ಮ ಬೇಡಿಕೆಗಳನ್ನು ಪ್ರತಿನಿಧಿಸುವ ಯಾರನ್ನಾದರೂ ಆಯ್ಕೆ ಮಾಡುವುದು ಪ್ರಜಾಪ್ರಭುತ್ವದ ಕಲ್ಪನೆ. ಆದರೆ ಇದು ನಿಜವಾಗಿಯೂ ಕೆಲಸ ಮಾಡುತ್ತಿದೆಯೆ? ಓರ್ವ ಮಂತ್ರಿಯನ್ನು ಅಧಿಕಾರಕ್ಕೆ ತರುವುದು ನಿಮ್ಮ ಮತದ ಉದ್ದೇಶವೆ? ನಾನು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನನ್ನ ಸೋದರರು, ಕುಟುಂಬದವರು ತಿರಸ್ಕಾರ ವ್ಯಕ್ತಪಡಿಸಿದ್ದರು. ನಾನು  90 ಮತಗಳನ್ನು ಪಡೆಯಲಷ್ಟೇ ಸಾಧ್ಯವಾಯಿತು ಎನ್ನುವ ಒಂದು ವಿಷಾದವೂ ಇದೆ.
ಮೊದಲು ನನ್ನ ಸೋದರ ನನ್ನೊಡನೆ ಇದ್ದ. ಆದರೆ ಕಡೆಗೊಮ್ಮೆ ನನ್ನ ಜನಪ್ರಿಯತೆಯನ್ನು ಅವನ ಸ್ವಂತಕ್ಕೆ ಬಳಸಿಕೊಂಡನು. ಅಲ್ಲದೆ ನನ್ನ ಹೋರಾಟವನ್ನು ದುರುಪಯೋಗಪಡಿಸಿಕೊಂಡನು.ನನ್ನ ಪ್ರಚಾರದಿಂದ ಅವರು ಅನೇಕ ಸಂಗಟನೆಗಳ ಸಂಪರ್ಕ ಸಾಧಿಸಿದ್ದನು. ಅವರು ಹಣವನ್ನೂ ಹಂಚಿದ್ದರು. ಇದಕ್ಕಾಗಿಯೇ ಅವರು ನಾನು ಚುನಾವಣೆಗೆ ನಿಲ್ಲುವುದನ್ನು ವಿರೋಧಿಸಿದ್ದರು ಎನಿಸಿದೆ.
ಚುನಾವಣೆಯಲ್ಲಿ ನಾನು ಮುಖ್ಯಮಂತ್ರಿಗಳ ವಿರುದ್ಧ ಸ್ಪರ್ಧೆಗೆ ಮುಂದಾದಾಗ ನೀವು ಯಾಕೆ ಚುನಾವಣೆಗೆ ನಿಲ್ಲುತ್ತೀರಿ?" ಎಂದು ನನ್ನ ಸೋದರ ನನಗೆ ಪ್ರಶ್ನಿಸಿದ್ದ. ಹಾಗೆಯೇ ಎರಡೂ ಕ್ಷೇತ್ರಗಲಲ್ಲಿ ನಿಲ್ಲುವ ನನ್ನ ನಿಲುವಿಗೆ ಅವರ ವಿರೋಧವಿತ್ತು.
ನನ್ನ ಸ್ವಂತ ಮನಸಾಕ್ಷಿಗೆ ನೋವಾಗುವಂತೆ ಅವರು ಕೆಲಸ ಮಾಡಿದ್ದಾರೆ. ಅವರು ಸಂಪ್ರದಾಯವಾದಿ ಮನಸ್ಥಿತಿಯುಳ್ಳವರಾಗಿದ್ದು ಅಲ್ಲಿ ಕೈಗೊಂಬೆ  ಸಂಸ್ಕೃತಿ ಪ್ರಬಲವಾಗಿದೆ.ಅದು ಕೊಳಾಲು ತನದ ಪರಮಾವಧಿ.  ನನ್ನ ಹೆಸರಿನಲ್ಲಿ ಸಂಗ್ರಹವಾದ ಲಕ್ಷ ಹಣವನ್ನು ಚುನಾವಣೆ ಹೆಸರಿಗೆ ಸುರಿದು ಹಾಳು ಮಾಡಿದರು. ಈ ಮೂಲಕ ಹನಿ ನೀರೂ ಕುಡಿಯದೆ ಹೋರಾಡಿದ ನನ್ನ ಹೋರಾಟಕ್ಕೆ ಯಾವ ಬೆಲೆ ಸಿಗದಂಟಾಗಿದೆ.
ಅವರು ನನ್ನ ಇತಿಹಾಸ ರಚಿಸುತ್ತಾರೆ, ಆದರೆ ನಾನು ನನ್ನ ಸ್ವಂತ ಇತಿಹಾಸ ಬರೆಯಲು ಸಿದ್ದವಾಗಿದ್ದೇನೆ. ಸಧ್ಯ ನಾನು ಸ್ವಾತಂತ್ರಕ್ಕಾಗಿ ಪ್ರತಿ ದಿನವೂ ಹಾಡುತ್ತಾ ಪ್ರಾರ್ಥನೆ ಸಲ್ಲಿಸುತ್ತೇನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com