ರಾಜ್ಯ ಸರ್ಕಾರಿ ನೌಕರರ ಕೈಗೆ ಬಾರದ ಪರಿಷ್ಕೃತ ವೇತನ!

ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ಏಪ್ರಿಲ್ ತಿಂಗಳಲ್ಲಿ ಪರಿಷ್ಕೃತ ವೇತನ ಎದುರು ನೋಡುತ್ತಿದ್ದ ರಾಜ್ಯ ಸರ್ಕಾರದ ನಾನಾ ಇಲಾಖೆಗಳ ನೌಕರರು ಅಸಮಾಧಾನಗೊಂಡಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು :  ಏಪ್ರಿಲ್ ತಿಂಗಳು ಕಳೆದು ಒಂದು ವಾರ  ಆದರೂ ರಾಜ್ಯಸರ್ಕಾರದ ಕೆಲ ಇಲಾಖೆಯ  ನೌಕರರಿಗೆ  ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ಪರಿಷ್ಕೃತ ವೇತನಾವೂ ಸಿಕ್ಕಿಲ್ಲ. ಏಪ್ರಿಲ್ ತಿಂಗಳ ಸಾಮಾನ್ಯ ತಿಂಗಳ ಸಂಬಳ ದೊರೆಯದೆ ತೀವ್ರ ಅಸಮಾಧಾನಗೊಂಡಿದ್ದಾರೆ.

ಇದಕ್ಕೆ ಆಡಳಿತಾತ್ಮಕ  ಪ್ರಕ್ರಿಯೆಯೇ ಕಾರಣವಾಗಿದೆ. ಅಧಿಕಾರಿಗಳು ಚುನಾವಣಾ   ಅಧಿಕಾರಿಗಳು ಕಾರ್ಯ ನಿರತರಾಗಿರುವುದರಿಂದ  ಆರನೇ  ವೇತನಾ ಆಯೋಗದ ಶಿಫಾರಸ್ಸುನ್ನು ಪರಿಣಾಮಕಾರಿಯಾಗಿ  ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರ  ಆರನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಈ ವರ್ಷದ ಏಪ್ರಿಲ್ ತಿಂಗಳಿನಿಂದ ಅನುಷ್ಠಾನಗೊಳಿಸುವುದಾಗಿ ಹೇಳಿತ್ತು.  ಈ ಸಂಬಂಧ ಹಣಕಾಸು ಸಚಿವಾಲಯ  ಏಪ್ರಿಲ್ 19 ರಂದು ಆದೇಶ ಪ್ರಕಟಿಸಿತ್ತು.

ಪ್ರಸ್ತುತ ಶೇ.30 ರಷ್ಟು ಪರಿಷ್ಕೃತ ವೇತನಕ್ಕೆ ಕಾಯುತ್ತಿರುವ  ನೌಕರರು, ಪರಿಷ್ಕೃತ ವೇತನ ಮಾತ್ರವಲ್ಲದೆ, ಏಪ್ರಿಲ್ ತಿಂಗಳ ನಿಗದಿತ ವೇತನಕ್ಕೂ ಕಾಯುವಂತಾಗಿದೆ  ಎಂದು  ಹಣಕಾಸು ಇಲಾಖೆ ಮೂಲಗಳಿಂದ ತಿಳಿದುಬಂದಿದೆ.

 ಮೂಲಗಳ ಪ್ರಕಾರ ಪೊಲೀಸ್ ಇಲಾಖೆ  ಸಿಬ್ಬಂದಿಗಳು ವೇತನ ಪಡೆದಿದ್ದಾರೆ ಆದರೆ, ಪರಿಷ್ಕೃತ ವೇತನ ಪಡೆಯಲು  ಖಜಾನೆ ಇಲಾಖೆಯ ಡ್ರಾಯಿಂಗ್ ಅಫೀಸರ್ ಒಪ್ಪಿರುವ ನೌಕರರು  ಏಪ್ರಿಲ್ ತಿಂಗಳ ಸಂಬಳ ಪಡೆದುಕೊಂಡಿಲ್ಲ.

 ಕಾರ್ಮಿಕ, ಶಿಕ್ಷಣ, ಆರ್ ಟಿಒ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಕೆಲ ಇಲಾಖೆಗಳ ಪರಿಸ್ಥಿತಿ ಇದೇ  ರೀತಿಯದಾಗಿದೆ. ಈ ಇಲಾಖೆಗಳು ಆರನೇ ವೇತನಾ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಿಸುವಂತೆ  ಖಜಾನೆ ಇಲಾಖೆಯನ್ನು ಕೇಳಿದ್ದು,  ಏಪ್ರಿಲ್ 30 ರೊಳಗೆ ವೇತನ ಪರಿಷ್ಕರಣೆಯಾಗಬಹುದೆಂದು ನಿರೀಕ್ಷಿಸಿದ್ದಾರೆ  ಆದರೆ, ಇದು  ಏಪ್ರಿಲ್ ನಿಂದ ಜಾರಿಯಾಗಿಲ್ಲ.

ಆದಾಗ್ಯೂ, ಪರಿಷ್ಕೃತ ವೇತನಾವನ್ನು ಕಾರ್ಯಗತಗೊಳಿಸಿಲ್ಲ ಎಂದು ಹಣಕಾಸು ಇಲಾಖೆ ಏಪ್ರಿಲ್ 19 ರಂದು ಆದೇಶ ಹೊರಡಿಸಿದೆ. ಇದರಿಂದಾಗಿ ವೇತನದಲ್ಲಿನ ವಿಳಂಬದಿಂದಾಗಿ ನಾನಾ ಇಲಾಖೆಯ ನೌಕರರು ಸಮಸ್ಯೆ ಎದುರಿಸುವಂತಾಗಿದೆ.

 ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆ ಫಲಿತಾಂಶ ಬಂದಿದ್ದು, ಮನೆ ಬಾಡಿಗೆ. ವಿದ್ಯುತ್ , ನೀರಿನ ಬಿಲ್, ಹಾಲು  ಮತ್ತಿತರ ತಿಂಗಳ ಮನೆ ಖರ್ಚಿಗೆ ವೇತನವನ್ನೇ ನಂಬಿದ್ದ ನೌಕರರು ತೊಂದರೆ ಎದುರಿಸುವಂತಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

  ಈ ಬಗ್ಗೆ ಹಣಕಾಸು ಇಲಾಖೆಯ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದ್ದರೆ, ನಮ್ಮ ಪಾಲಿನ ಕೆಲಸ ಮುಗಿದಿದ್ದು, ಆದೇಶ ಹೊರಡಿಸಲಾಗಿದೆ. ಆಡಳಿತಾತ್ಮಕ ಪ್ರಕ್ರಿಯೆಯಿಂದಾಗಿ ಚುನಾವಣೆ ಮುಗಿಯುವವರೆಗೂ  ಪರಿಷ್ಕೃತ ವೇತನ ನೀಡಲು ಸಾಧ್ಯವಿಲ್ಲ ಎಂಬುದಾಗಿ ಹೇಳುತ್ತಾರೆ.

2012ರಲ್ಲಿ ಐದನೇ ವೇತನ ಆಯೋಗ ಜಾರಿಯಾದಾಗಲೂ ಮೂರು ತಿಂಗಳ ವಿಳಂಬ ಮಾಡಲಾಗಿತ್ತು. ಏಪ್ರಿಲ್ 2012 ರಿಂದ ಜುಲೈ 2012 ರವರೆಗೂ ಎಲ್ಲಾ ಹೆಚ್ಚುವರಿ ಭತ್ಯೆಯನ್ನು ಪಡೆಯಲಾಗಿತ್ತು. ಇದು ಹಾಗೇ ಆಗಿದ್ದು, ಎರಡು ಮೂರು ತಿಂಗಳು ಬೇಕಾಗುತ್ತದೆ.ತದನಂತರ ಎಲ್ಲಾ ಹೆಚ್ಚುವರಿ ಭತ್ಯೆಗಳನ್ನು ಪಾವತಿಸಲಾಗುವುದು ಎಂದು ಅವರು ಹೇಳಿದ್ದಾರೆ.




Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com