ಬುಡಕಟ್ಟು ಜನರಿಗಾಗಿ ಸಾಂಪ್ರದಾಯಿಕ ಮತಕೇಂದ್ರ ಸ್ಥಾಪನೆ: ಚುನಾವಣಾ ಆಯೋಗ

ಬುಡಕಟ್ಟು ಜನಾಂಗ ಅಧಿಕವಾಗಿರುವ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಬುಡಕಟ್ಟು ಸಮುದಾಯ ವಾಸವಿರುವ ಪ್ರದೇಶದ ಎರಡು ಕಿ.ಮೀ. ಅಂತರದಲ್ಲಿ ಸಾಂಪ್ರದಾಯಿಕ ಮತಕೇಂದ್ರಗಳ ಸ್ಥಾಪನೆಗೆ....
ಬುಡಕಟ್ಟು ಜನರಿಗಾಗಿ ಸಾಂಪ್ರದಾಯಿಕ ಮತಕೇಂದ್ರ ಸ್ಥಾಪನೆ: ಚುನಾವಣಾ ಆಯೋಗ
ಬುಡಕಟ್ಟು ಜನರಿಗಾಗಿ ಸಾಂಪ್ರದಾಯಿಕ ಮತಕೇಂದ್ರ ಸ್ಥಾಪನೆ: ಚುನಾವಣಾ ಆಯೋಗ
ಬೆಂಗಳೂರು: ಬುಡಕಟ್ಟು ಜನಾಂಗ ಅಧಿಕವಾಗಿರುವ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಬುಡಕಟ್ಟು ಸಮುದಾಯ ವಾಸವಿರುವ  ಪ್ರದೇಶದ ಎರಡು ಕಿ.ಮೀ. ಅಂತರದಲ್ಲಿ ಸಾಂಪ್ರದಾಯಿಕ ಮತಕೇಂದ್ರಗಳ ಸ್ಥಾಪನೆಗೆ ಭಾರತೀಯ ಚುನಾವಣಾ ಆಯೋಗ ನಿರ್ಧರಿಸಿದೆ. ಬುಡಕಟ್ಟು ಸಮುದಾಯ ಮತ ಚಲಾಯಿಸಲು ಈ ಸಾಂಪ್ರದಾಯಿಕ ಕೇಂದ್ರಗಳಿಗೆ ತೆರಳಬಹುದು ಎಂದು ಚುನಾವಣಾ ಆಯೋಗದ ಪ್ರಧಾನ ಕಾರ್ಯದರ್ಶಿ ಸಂಜೀವ್ ಕುಮಾರ್ ಹೇಳಿದ್ದಾರೆ.
ಮೇ 12ರಂದು ನಡೆಯುವ ಚುನಾವಣೆಯಲ್ಲಿ ಬುಡಕಟ್ಟು ಜನಾಂಗ ಹೆಚ್ಚು ಪ್ರಮಾಣದಲ್ಲಿ ಬಾಗವಹಿಸಿ ಮತ ಚಲಾಯಿಸಲು ಪ್ರೋತ್ಸಾಹ ನೀಡಬೇಕಿದೆ. ಆ ನಿಟ್ಟಿನಲ್ಲಿ ನಿರ್ಮಿಸಲಾದ ಸಾಕ್ಷ ಚಿತ್ರ ಹಾಗೂ ಇತರೆ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿದ ಸಂಜೀವ್ ಕುಮಾರ್ ಚಾಮರಾಜನಗರ, ಉಡುಪಿ, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ  28 ಸಾಂಪ್ರದಾಯಿಕ ಮತಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.
ಎಂಟು ಜಿಲ್ಲೆಗಳಲ್ಲಿ ಬುಡಕಟ್ಟು ಮತದಾರರ ಸಂಖ್ಯೆಯು 5,15,190ರಷ್ಟಿದೆ. ಇದರಲ್ಲಿ  2,58,395 ಮಹಿಳೆಯರು, 2,56,795 ಪುರುಷರು ಸೇರಿದ್ದಾರೆ.ಈ ವರ್ಷ, 3,559  ಹೊಸ ಮತದಾರರನ್ನು ಮತಪಟ್ಟಿಗೆ ಸೇರ್ಪಡಿಸಲಾಗಿದೆ ಈ ಜನ ಸಮುದಾಯಕ್ಕೆ ."ಸಮಾಜ ಕಲ್ಯಾಣ ಇಲಾಖೆಯಿಂದ ಇವಿಎಂಗಳ ಮೂಲಕ ಮತ ಚಲಾಯಿಸಲು ಜಾಗೃತಿ ಮೂಡಿಸಲಾಗಿದೆ" ಅವರು ಹೇಳಿದರು.
ಈ ಬಾರಿ ಚುನಾವಣೆಗಾಗಿ ಆಯೋಗವು 224 ವೀಕ್ಷಕರ ನೇಮಕ ಮಾಡಿದೆ. ಅವರು ರಾಜ್ಯಾದ್ಯಂತದ 33 ಚುನಾವಣಾ ಜಿಲ್ಲೆಗಳಲ್ಲಿ ಚುನಾವಣೆ ಮೇಲ್ವಿಚಾರಣೆ ನಡೆಸಲಿದ್ದಾರೆ. ಅಲ್ಲದೆ ಈ ಬಾರಿ 3.65 ಲಕ್ಷ ಸಿಬ್ಬಂದಿ ಚುನಾವಣೆ ಕಾರ್ಯಕ್ಕಾಗಿ ಸಿದ್ದವಾಗಿದಾರೆ. ಒಟ್ಟು 38 ಎಣಿಕೆಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು  ಮತದಾನ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ಈ ಬಾರಿ  ಐವರು ಸದಸ್ಯರ ಅಂತರರಾಷ್ಟ್ರೀಯ ನಿಯೋಗವು ಕರ್ನಾಟಕಕ್ಕೆ ಭೇಟಿ ನೀಡಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com