ನ್ಯಾಯಮೂರ್ತಿಗಳ ಮೇಲೆ ಪ್ರಭಾವ: ಶ್ರೀರಾಮುಲು ಮೇಲಿನ ಆರೋಪದ ಸುದ್ದಿ ಪ್ರಕಟಣೆಗೆ ಹೈಕೋರ್ಟ್ ತಡೆ

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ತಮ್ಮ ಪರವಾಗಿ ತೀರ್ಪು ಪಡೆಯಲು ಸಂಸದ ಶ್ರೀರಾಮುಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಿದ್ದರೆನ್ನುವ ಆರೋಪ....
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Updated on
ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ತಮ್ಮ ಪರವಾಗಿ ತೀರ್ಪು ಪಡೆಯಲು ಸಂಸದ ಶ್ರೀರಾಮುಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಿದ್ದರೆನ್ನುವ ಆರೋಪ ಸಂಬಂಧ ಮಾದ್ಯಮಗಳು ಯಾವ ಸುದ್ದಿಯನ್ನೂ ಪ್ರಕಟಿಸಬಾರದೆಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ರಾಜ್ಯ ಬಿಜೆಪಿ ಜಂಟಿ ಕಾರ್ಯದರ್ಶಿ ಲೋಕೇಶ್ ಅಂಬೇಕಲ್ಲು ಎನ್ನುವವವ್ರು ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ "ಶ್ರೀರಾಮುಲು ವಿರುದ್ಧದ ಆರೋಪ ಸಂಬಂಧ ಯಾವುದೇ ಟಿವಿ ಚಾನಲ್, ಸುದ್ದಿ ಪತ್ರಿಕೆ, ಡಿಜಿಟಲ್ ಮೀಡಿಯಾ, ರೇಡಿಯೋ, ಮನರಂಜನಾ ಚಾನೆಲ್‌ಗಳು, ಸೋಷಿಯಲ್ ಮೀಡಿಯಾಗಳಲ್ಲಿ ಯಾವುದೇ ಪ್ರಕಾರದ ಸುದ್ದಿ ಪ್ರಸಾರ ಮಾಡಬಾರದೆಂದು ಆದೇಶ ಹೊರಡಿಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಾಮುಲು ಬಾದಾಮಿ ಹಾಗೂ ಮೊಳಕಾಲ್ಮೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆಗೆ ಮೇ 12ರಂದು ಮತದಾನ ನಡೆಯಲಿದ್ದು ಮೇ 15ರಂದು ಫಲಿತಾಂಶಗಳು ಘೋಷಣೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com