ಮಲೇಶಿಯಾದಿಂದ ಬಂದು ಮತಚಲಾಯಿಸಿ ಬೆಂಗಳೂರಿಗರಿಗೆ ಮಾದರಿಯಾದ ಟೆಕ್ಕಿ!

ಬೆಂಗಳೂರಿನಲ್ಲೇ ಇದ್ದುಕೊಂಡು ಮನೆಯಿಂದ ಹೊರಬಂದು ಮತ ಚಲಾಯಿಸದೇ ಸೋಮಾರಿತನ ಮಾಡುವ ನಮ್ಮ ಹಲವು ನಾಗರಿಕರಿಗೆ...
ಮನೋಹರ್ ಅಯ್ಯರ್
ಮನೋಹರ್ ಅಯ್ಯರ್
ಬೆಂಗಳೂರು:  ಮಲೇಶಿಯಾದ ಕೌಲಲಾಂಪುರದಿಂದ  ಬಂದ ಟೆಕ್ಕಿ ಮನೋಹರ್ ಅಯ್ಯರ್ ಬೆಂಗಳೂರಿನಲ್ಲಿ ಮತ ಚಲಾಯಿಸಿದ್ದಾರೆ.
ಬೆಂಗಳೂರಿನಲ್ಲೇ ಇದ್ದುಕೊಂಡು ಮನೆಯಿಂದ ಹೊರಬಂದು ಮತ ಚಲಾಯಿಸದೇ ಸೋಮಾರಿತನ ಮಾಡುವ ನಮ್ಮ ಹಲವು ನಾಗರಿಕರಿಗೆ ಮನೋಹರ್ ಅಯ್ಯರ್ ಮಾದರಿಯಾಗಿದ್ದಾರೆ. 
ಮತ ಚಲಾಯಿಸಿದ ನಂತರ ಕೈ ಬೆರಳಿಗೆ ಹಾಕಿಸಿಕೊಂಡ ಶಾಹಿಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.
ಬನಶಂಕರಿಯ ಶಾಂತಿನಿಕೇತನ ಶಾಲೆಯಲ್ಲಿ ಸರತಿ ಸಾಲಿನಲ್ಲಿ  ನಿಂತು ಮತ ಚಲಾಯಿಸಿದ್ದಾರೆ, ಜೊತೆಗೆ ತಮ್ಮ ಜೊತೆ ಹಲವು ಹಿರಿಯರನ್ನು ಕರೆತಂದು ಮತದಾನಕ್ಕೆ ಸಹಾಯ ಮಾಡಿದ್ದಾರೆ,
ಜನರು ಮತದಾನ ಮಾಡಲು ಸೋಷಿಯಲ್ ಮೀಡಿಯಾ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ ಅವರು 28 ಸಾವಿರ ರು, ಖರ್ಚು ಮಾಡಿಕೊಂಡು ಮಲೇಶಿಯಾದಿಂದ ಬೆಂಗಳೂರಿಗೆ ಬಂದಿದ್ದಾರೆ. 
ಹಣ ಖರ್ಚಾಯಿತು ಎಂಬುದು ಮುಖ್ಯವಲ್ಲ, ಆದರೆ ಅದಕ್ಕಿಂತ ಹೆಚ್ಚಿನದ್ದು ನನ್ನ ಮತ ಎಂದು ತಿಳಿಸಿದ್ದಾರೆ,. ಮತದಾನ ಮಾಡುವುದು ನನ್ನ ಕರ್ತವ್ಯ ಹಾಗೂ ಹಕ್ಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com