ತಪ್ಪಾಯ್ತು ಎಂದು ಕೇಳಿ ನನ್ನ ಪಾದಕ್ಕೆ ಮುತ್ತಿಡು, ಇಲ್ಲದಿದ್ದರೆ ಕೊಲ್ಲುತ್ತೇನೆ: ಇದು ವಿದ್ವತ್ ಗೆ ನಲಪಾಡ್ ಹಾಕಿದ ಬೆದರಿಕೆ

ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ...
ಮೊಹಮ್ಮದ್ ನಲಪಾಡ್ ನನ್ನು ಕಸ್ಟಡಿಗೆ ಕರೆದೊಯ್ಯುತ್ತಿರುವ ಪೊಲೀಸರು(ಸಂಗ್ರಹ ಚಿತ್ರ)
ಮೊಹಮ್ಮದ್ ನಲಪಾಡ್ ನನ್ನು ಕಸ್ಟಡಿಗೆ ಕರೆದೊಯ್ಯುತ್ತಿರುವ ಪೊಲೀಸರು(ಸಂಗ್ರಹ ಚಿತ್ರ)

ಬೆಂಗಳೂರು; ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್ ನಗರದ ಫಾರ್ಸಿ ಕೆಫೆ ಬಾರ್ ಮತ್ತು ಯುಬಿ ಸಿಟಿಯ ರೆಸ್ಟೊರೆಂಟ್ ನಲ್ಲಿ ಎಲ್ ವಿದ್ವತ್ ಗೆ ಮೊದಲು ಹೊಡೆದಿದ್ದು ಅಲ್ಲದೆ ತನ್ನ ಸಹಚರರಿಗೆ ಹಲ್ಲೆ ಮಾಡಲು ಪ್ರೇರೇಪಿಸಿದರು, ಇದು ಕೊಲೆ ಮಾಡುವ ಏಕೈಕ ಉದ್ದೇಶವಾಗಿತ್ತು. ಇದು ಕೇಂದ್ರ ಅಪರಾಧ ದಳ ಪೊಲೀಸರು ವಿಚಾರಣಾ ನ್ಯಾಯಾಲಯದ ಮುಂದೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಬಹಿರಂಗವಾಗಿದೆ.

ಮೊಹಮ್ಮದ್ ನಲಪಾಡ್ ಕಾಲು ವಿದ್ವತ್ ನ ಬಲಗಾಲಿಗೆ ಮುಟ್ಟಿದಾಗ ಈ ಗಲಾಟೆ ಆರಂಭವಾಗಿದೆ. ವಿದ್ವತ್ ಕಾಲಿಗೆ ಗಾಯವಾಗಿತ್ತು ಎಂದು ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಕಲಾಗಿತ್ತು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ಯುಬಿ ಸಿಟಿಯ ಎರಡನೇ ಮಹಡಿಯಲ್ಲಿರುವ ಕೆಫೆಯಲ್ಲಿ ವಿದ್ವತ್ ಕಳೆದ ಫೆಬ್ರವರಿ 17ರಂದು ರಾತ್ರಿ 10.30ರ ಸುಮಾರಿಗೆ ಕುಳಿತು ಆಹಾರ ಸೇವಿಸುತ್ತಿದ್ದರು. ಕಾಲಿಗೆ ಕಾಲು ತಾಗಿದಾಗ ವಿದ್ವತ್ ಮೇಲೆ ಮನಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ನಲಪಾಡ್, ನಾನು ಶಾಸಕ ಎನ್ ಎ ಹ್ಯಾರಿಸ್ ಅವರ ಮಗ. ನೀನು ನನ್ನ ಕಾಲಿನ ಚಪ್ಪಲಿಗೆ ಕೂಡ ಸಮನಲ್ಲ. ನೀನು ತಪ್ಪಾಯ್ತು ಎಂದು ಕೇಳಿ ನನ್ನ ಕಾಲಿಗೆ ಮುತ್ತಿಡಬೇಕು ಎಂದು ಕೆಟ್ಟ ಶಬ್ದಗಳಿಂದ ಮೊಹಮ್ಮದ್ ಬೈದನು. ಇದಕ್ಕೆ ವಿದ್ವತ್ ನಿರಾಕರಿಸಿದಾಗ ನಲಪಾಡ್ ತನ್ನ ಸಹಚರರನ್ನು ಕರೆದು ವಿದ್ವತ್ ಮೇಲೆ ಎಲ್ಲರೂ ಒಟ್ಟು ಸೇರಿ ಹಲ್ಲೆ ನಡೆಸಿದರು. ಆತನಿಗೆ ಒಂದು ಗತಿ ಕಾಣಿಸಿ, ನಾನು ಯಾರೆಂದು ಎಂದು ತೋರಿಸಿ ಎಂದು ನಲಪಾಡ್ ಹೇಳಿದ್ದಾಗಿ ಚಾರ್ಜ್ ಶೀಟ್ ನಲ್ಲಿ ಹೇಳಿದ್ದಾರೆ.

ನಂತರ ನಲಪಾಡ್ ಸಹಚರರು ವಿದ್ವತ್ ನ ಕಾಲು, ಎದೆ, ತೋಳು ಮತ್ತು ಬೆನ್ನ ಹಿಂಭಾಗ ಗ್ಲಾಸಿನ ಬಾಟಲ್, ಐಸ್ ಬಕೆಟ್ ಮತ್ತು ಅಲ್ಲಿದ್ದ ಇತರ ಉಪಕರಣಗಳಿಂದ ಹಲ್ಲೆ ನಡೆಸಿದರು. ನಾನು ಯಾರೆಂದು ನಿನಗೆ ತೋರಿಸುತ್ತೇನೆ, ನೀನು ನನ್ನ ಕಾಲಿಗೆ ಬೀಳದಿದ್ದರೆ ತಪ್ಪಾಯ್ತೆಂದು ಕೇಳದಿದ್ದರೆ ಇಲ್ಲಿಯೇ ನಿನ್ನನ್ನು ಕೊಂದು ಹಾಕಿ ಬಿಡುತ್ತೇನೆ ಎಂದು ವಿದ್ವತ್ ಬೆದರಿಕೆಯೊಡ್ಡಿದ್ದನು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ಹಲ್ಲೆಯಿಂದ ವಿದ್ವತ್ ನ್ನು ಕಾಪಾಡಲು ಆತನ ಸ್ನೇಹಿತರು ಮತ್ತು ಕೆಫೆಯ ಬೌನ್ಸರ್ ಗಳು ವೀಲ್ ಚೇರ್ ನಲ್ಲಿ ಮೊದಲ ಮಹಡಿಗೆ ಕರೆತಂದರು ಎಂದು ಕೂಡ ವಿವರಿಸಲಾಗಿದೆ.
ಆರೋಪಿ ಸಂಖ್ಯೆ 8 ನಫಿ ಅಹ್ಮದ್ ಕೂಡ ವಿದ್ವತ್ ತನ್ನನ್ನು ಕಾಪಾಡಿಕೊಳ್ಳುವುದಕ್ಕೆ ಬಿಡಲಿಲ್ಲ. ಮತ್ತೆ ಕೆಫೆಗೆ ಕರೆತಂದು ಹಲ್ಲೆ ಮಾಡಿದರು. ನಂತರ ಬೌನ್ಸರ್ ಗಳು ಮತ್ತು ವಿದ್ವತ್ ಸ್ನೇಹಿತರು ಗಂಭೀರ ಗಾಯಗೊಂಡ ವಿದ್ವತ್ ನ್ನು ಮಲ್ಯ ಆಸ್ಪತ್ರೆಗೆ ಕರೆತಂದರು.

ಆಸ್ಪತ್ರೆಯಲ್ಲಿ ಕೂಡ ನಲಪಾಡ್ ಗ್ಯಾಂಗ್ ನವರು ಬೆನ್ನಟ್ಟಿ ಬಂದಿದ್ದರು. ಅಲ್ಲಿಗೆ ಬಂದ ವಿದ್ವತ್ ಸೋದರನಿಗೆ ಕೂಡ ಬೆದರಿಕೆಯೊಡ್ಡಿದ್ದರು. ಆಸ್ಪತ್ರೆ ಸಿಬ್ಬಂದಿ ಕಿರುಚುವುದು ಕೇಳಿ ಅಲ್ಲಿಂದ ತೆರಳಿದರು ಎಂದು 300 ಪುಟಕ್ಕೂ ಅಧಿಕ ಇರುವ ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ. ಇಲ್ಲಿ ದೂರುದಾರ ಪ್ರವೀಣ್ ವೆಂಕಟಾಚಲಯ್ಯ ಮತ್ತು 23 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಕೇಸು ದಾಖಲಿಸಲಾಗಿದೆ.

ಪ್ರಕರಣದಲ್ಲಿ ಇತರ ಆರೋಪಿಗಳಾದ ಕೃಷ್ಣ, ಜಾವರ್ ಅವರನ್ನು ಪತ್ತೆಹಚ್ಚಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಆರೋಪಿಗಳು ಪೊಲೀಸ್ ವಶದಲ್ಲಿದ್ದು, ಜಾಮೀನಿಗಾಗಿ ನಿನ್ನೆ ನಲಪಾಡ್ ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com