ಮನಗೂಳಿಯ ವಿವಿ ಪ್ಯಾಟ್‍ಗಳಿಗೂ ರಾಜ್ಯ ಚುನಾವಣೆಗೂ ಸಂಬಂಧವಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ

ವಿಜಯಪುರದ ಮನಗೂಳಿಯಲ್ಲಿ ಪತ್ತೆಯಾದ ವಿವಿ ಪ್ಯಾಟ್‍ಗಳು ರಾಜ್ಯ ಚುನಾವಣೆಗೆ ಬಳಸಿದ ವಿವಿ ಪ್ಯಾಟ್‍ಗಳಲ್ಲ ಅಲ್ಲದೆ ಇಲ್ಲಿ ಸಿಕ್ಕವುಗಳು ವಿವಿಪ್ಯಾಟ್ಖಾಲಿ ಬಾಕ್ಸ್ ಗಳು ಮಾತ್ರ....
ಸಂಜೀವ್ ಕುಮಾರ್
ಸಂಜೀವ್ ಕುಮಾರ್
ಬೆಂಗಳೂರು: ವಿಜಯಪುರದ ಮನಗೂಳಿಯಲ್ಲಿ ಪತ್ತೆಯಾದ ವಿವಿ ಪ್ಯಾಟ್‍ಗಳು ರಾಜ್ಯ ಚುನಾವಣೆಗೆ ಬಳಸಿದ ವಿವಿ ಪ್ಯಾಟ್‍ಗಳಲ್ಲ ಅಲ್ಲದೆ ಇಲ್ಲಿ ಸಿಕ್ಕವುಗಳು ವಿವಿಪ್ಯಾಟ್ಖಾಲಿ ಬಾಕ್ಸ್ ಗಳು ಮಾತ್ರ ಎಂದು ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್  ಹೇಳಿದ್ದಾರೆ.
ಮನಗೂಳಿಯ ಹೊರವಲಯದ ಶೆಡ್‍ವೊಂದರಲ್ಲಿ ವಿವಿ ಪ್ಯಾಟ್‍ಗಳು ಸಿಕ್ಕ ಪ್ರಕರಣ ಸಂಬಂಧ ಪ್ರತಿಕ್ರಿಒಯೆ ನಿಡಿದ ಆಯುಕ್ತರು ಮನಗೂಳಿ ಬಳಿಯ ಕಾರ್ಮಿಕರ ಜೋಪಡಿಯಲ್ಲಿ ದೊರೆತ ಯಂತ್ರಗಳಿಗೆ, ಆಯೋಗದ ಯಂತ್ರಗಳಿಗೆ ಯಾವ ಹೋಲಿಕೆಗಳಿಲ್ಲ. ವಿವಿಪ್ಯಾಟ್ ನಲ್ಲಿ ಯಾವುದೇ ಎಲೆಕ್ಟ್ರಾನಿಕ್ ಯಂತ್ರಗಳಿರಲಿಲ್ಲ. ಅವು ಚುನಾವಣೆಗೆ ಬಳಕೆಗೊಂಡ ವಿವಿಪ್ಯಾಟ್ ಆಗಿರಲಿಲ್ಲ.ಅದಾಗ್ಯೂ ಈ ಖಾಲಿ ಪೆಟ್ಟಿಗೆಗಳನ್ನು ರಸ್ತೆ ಬದಿಯಲ್ಲಿ ಎಸೆದವರಾರು ಎನ್ನುವ ಕುರಿತಂತೆ ತನಿಖೆ ಕೈಗೊಳ್ಳುತ್ತೇವೆ ಎಂದರು.
ಸಾರ್ವಜನಿಕರು ಈ ವಿಚಾರದ ಸಂಬಂಧ ಯಾವ ರೀತಿಯ ಊಹಾಪೋಹಗಳನ್ನು ಹರಡಬಾರದೆಂದು ಅವರು ಕಿವಿಮಾತು ಹೇಳಿದ್ದಾರೆ.
ವಿಜಯಪುರದ ಬಸವನವಾಗೇವಾಡಿಯ  ಮನಗೂಳಿಯಲ್ಲಿ ಎಂಟು ವಿವಿಪ್ಯಾಟ್ ಯಂತ್ರ)ಗಳು ಭಾನುವಾರ ಪತ್ತೆಯಾಗಿದ್ದು ಚುನಾವಣಾ ಅಕ್ರಮ ನಡೆದಿರುವ ಸಾಧ್ಯತೆಯ ಬಗ್ಗೆ ಶಂಕೆ ವ್ಯಕ್ತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com