ಮಡಿಕೇರಿ: ಮಹಿಳೆಯರು ಬ್ರಹ್ಮಗಿರಿ ಬೆಟ್ಟವೇರದಂತೆ ನಿಷೇಧಿಸಿದ ಜ್ಯೋತಿಷಿ

ಮಹಿಳೆಯರು ಪುರಾಣ ಪ್ರಸಿದ್ದ ಬ್ರಹ್ಮಗಿರಿ ಬೆಟ್ಟ ಹತ್ತುವಂತಿಲ್ಲ ಎಂದು ಜ್ಯೋತಿಷಿ ನೀಲೇಶ್ವರ ಪದ್ಮನಾಭ ತಂತ್ರಿ ಹೇಳಿದ್ದಾರೆ. ಮೂರು ದಿನಗಳಿಂದ ಮಡಿಕೇರಿಯ ತಲಕಾವೇರಿಯಲ್ಲಿ......
ತುಲಾ ಸಂಕ್ರಮಣ ಜಾತ್ರೆಯಲ್ಲಿ ತಲಕಾವೇರಿಯಲ್ಲಿ ಸೇರಿರುವ ಭಕ್ತವೃಂದ
ತುಲಾ ಸಂಕ್ರಮಣ ಜಾತ್ರೆಯಲ್ಲಿ ತಲಕಾವೇರಿಯಲ್ಲಿ ಸೇರಿರುವ ಭಕ್ತವೃಂದ
ಮಡಿಕೇರಿ: ಮಹಿಳೆಯರು ಪುರಾಣ ಪ್ರಸಿದ್ದ ಬ್ರಹ್ಮಗಿರಿ ಬೆಟ್ಟ ಹತ್ತುವಂತಿಲ್ಲ ಎಂದು ಜ್ಯೋತಿಷಿ ನೀಲೇಶ್ವರ ಪದ್ಮನಾಭ ತಂತ್ರಿ ಹೇಳಿದ್ದಾರೆ. ಮೂರು ದಿನಗಳಿಂದ ಮಡಿಕೇರಿಯ ತಲಕಾವೇರಿಯಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರ್ಮವು ಇಂದು ಕೊನೆಯಾಗಿದ್ದು ಬ್ರಹ್ಮಗಿರಿ ಪವಿತ್ರ ಕ್ಷೇತ್ರ. ಮಹಿಳೆಯರು, ಶಾರ್ಟ್ಸ್ ಮತ್ತು ಟಿಶರ್ಟ್ ಧರಿಸಿ ಬೆಟ್ಟವೇರುವ ಮೂಲಕ ಸ್ಥಳದ ಪವಿತ್ರತೆಯನ್ನು ಹಾಳು ಮಾಡುತ್ತಿದ್ದಾರೆ. ಎಂದು ಅವರು ಹೇಳಿದ್ದಾರೆ.
'' ತುಲಾ ಸಂಕ್ರಮಣ '(ಅಕ್ಟೋಬರ್ 17) ಆರಂಭದಿಂದ' ವೃಷಭ ಸಂಕ್ರಮಣದ ಅವಧಿಯವರೆಗೆ ಪುರುಷರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳು ಹಾಗೂ  50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಬೆಟ್ಟ ಏರಲು ಅವಕಾಶವಿದೆ" ಎಂದ ಅವರು ಪವಿತ್ರ ಸ್ಥಳವನ್ನು ಪ್ರವಾಸೋದ್ಯಮ ಸ್ಥಳವಾಗಿ ಮಾರ್ಪಡಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಹೀಗೆ ಬೆಟ್ಟವೇರುವ ಮಹಿಳೆಯರು ಹಾಗೂ ಪುರುಷರು ಅಲ್ಲಿ ಅಸಭ್ಯ ವರ್ತನೆ ತೋರುವುದರಿಂದ ಬೆಟ್ಟದಹಾಗೂ ಈ ಸ್ಥಳದ ಆಧ್ಯಾತ್ಮಿಕ ಪ್ರಭಾವ ಕಡಿಮೆಯಾಗಲಿದೆ.ಇದರಿಂದಾಗಿ ಕಾವೇರಿ ನದಿ ಮೂಲ ಸ್ಥಾನ ಕಣ್ಮರೆಯಾಗುವ ಭೀತಿ ಇದೆ. "ದೇವರ ಕುರಿತಂತೆ ಯಾವ ಭಕ್ತಿ ಇಲ್ಲದವರು ಯಾತ್ರಾ ಕೇಂದ್ರಕ್ಕೆ ಆಗಮಿಸುತ್ತಾರೆ. ಮಹಿಳೆಯರು ತಾವು ಬೆಟ್ಟದ ಮೇಲಿನ ನದಿ ಮೂಲವನ್ನು ಅಪವಿತ್ರಗೊಳಿಸುತ್ತಾರೆ. ಇದರಿಂದಾಗಿ ಸ್ಥಳದ ಪಾವಿತ್ರತೆಗೆ ಧಕ್ಕೆ ಬರುತ್ತದೆ"
ಮಹಿಳೆಯರಿಗೆ ಬ್ರಹ್ಮಗಿರಿ ಬೆಟ್ಟ ಏರುವುದನ್ನು ನಿಷೇಧಿಸುವ ಕ್ರಮ ಅಚ್ಚರಿಗೆ ಕಾರಣವಾಗಿದೆ. "ಕಾವೇರಿ ಮಾತೆಯನ್ನು ಪೂಜಿಸಲು ಪುರುಷರಷ್ಟೇ ಅಧಿಕಾರ ಮಹಿಳೆಯರಿಗೆ ಇದೆ. ಪುರುಷ ಪ್ರವಾಸಿಗರೇ ಹೆಚ್ಚು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ ಕೇವಲ ಮಹಿಳೆಯರಿಂದ ಮಾತ್ರವೇ ಹೇಗೆ ಸ್ಥಳದ ಪವಿತ್ರತೆ ನಾಶವಾಗಲಿದೆ?" ಮಡಿಕೇರಿ ನಿವಾಸಿ ಪ್ರಭಾ ಪ್ರಶ್ನಿಸಿದ್ದಾರೆ.
ಜ್ಯೋತಿಷಿ ತಂತ್ರಿಯವರ ಮಾತುಗಳು ನ್ಯಾಯಸಮ್ಮತವಾಗಿಲ್ಲ ಎಂದ ಸ್ತ್ರೀವಾದಿ ಅನನ್ಯಾ "ಮಹಿಳೆಯರು ನಾವು ಸುಲಭವಾಗಿ ಬಲಿಪಶುಗಳಾಗುತ್ತಿದ್ದೇವೆ.ನಾವು ಯಾತ್ರಾಸ್ಥಳಗಳಿಗೆ ಯಾವ ಉಡುಪಿನಲ್ಲಿ ಹೋಗಬೇಕೆನ್ನುವುದು ನಮ್ಮ ಸ್ವಂತ ಆಯ್ಕೆಗೆ ಬಿಟ್ಟದ್ದು ಹಾಗಾಗಿ ಮಹಿಳೆಯರನ್ನು ಅಲ್ಲಿಗೆ ಬರಬಾರದೆಂದು ಹೇಳುವುದಕ್ಕಾಗಿ ಅವರ ಉಡುಪಿನತ್ತ ಬೆರಳು ತೋರಿಸಿರುವುದು ಸರಿಯಲ್ಲ.
"ಮಹಿಳೆಯರಿಂದ ನೀರಿನ ಕೊರತೆಯಾಗಿದೆಯೆ? ನಾವು ನಮ್ಮ ಸಂಪನ್ಮೂಲಗಳನ್ನು ಸರಿಯಾದ ಕ್ರಮದಿಂದ ಬಳ್ಸಿದಲ್ಲಿ ಹಾಗೆಯೇ ಹೆಚ್ಚು ಜವಾಬ್ದಾರಿಯುತ ಪ್ರಜ್ಞೆಯನ್ನು ಹೊಂದಿದ್ದರೆ ಈ ಸಮಸ್ಯೆ ಉದ್ಭವಿಸುವುದಿಲ್ಲ. ಕೆಲವು ಜ್ಯೋತಿಷಿಗಳಿಗೆ ಮಹಿಳೆಯರನ್ನು ಟೀಕಿಸುವುದಕ್ಕಾಗಿ ಯಾವುದಾದರೂ ಕಾರಣ ಬೇಕು. ಅದು ಕ್ಷುಲ್ಲಕ ಕಾರಣವಾದರೂ ಸರಿಯೆ. 
"ಪಿತೃ ಪ್ರಧಾನವಾದ ಸಮಾಜ ವ್ಯವಸ್ಥೆಯ ಕಲ್ಪನೆಗಳು ನಮ್ಮ ಸಮಾಜದಲ್ಲಿ ಇಂದಿಗೂ ಹೇಗೆ ಆಳವಾಗಿ ಬೇರೂರುಇದೆ ಎಂದು ಹೇಳಲು ಇದೊಂದು ಹೊಸ ಉದಾಹರಣೆ." ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com