#HDKnotmyCM ನಿಂದ #Kumaraswamyswearinginವರೆಗೆ ಕಳೆದೊಂದು ವಾರ ಟ್ವೀಟ್, ಮೀಮ್ಸ್ ಗಳು ಭಾರೀ ಜೋರು!

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಗಳಾಗಿ ಸರ್ಕಾರ ರಚನೆಯಾಗುತ್ತದೆ ಎಂದು ಘೋಷಣೆಯಾದಲ್ಲಿಂದ ...
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹೆಚ್ ಡಿ ಕುಮಾರಸ್ವಾಮಿ
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹೆಚ್ ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಗಳಾಗಿ ಸರ್ಕಾರ ರಚನೆಯಾಗುತ್ತದೆ ಎಂದು ಘೋಷಣೆಯಾದಲ್ಲಿಂದ ಮುಖ್ಯಮಂತ್ರಿಯಾಗಿ ಹೆಚ್ ಡಿ ಕುಮಾರಸ್ವಾಮಿಯವರು ಪ್ರಮಾಣವಚನ ಸ್ವೀಕರಿಸುವವರೆಗೆ ಹಲವಾರು ಮೀಮ್ಸ್ ಗಳು, ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ನಿನ್ನೆ ಕೂಡ ಹೆಚ್ ಡಿ ಕುಮಾರಸ್ವಾಮಿಯವರು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಕೂಡ ಇಂತಹದ್ದೇ ಟ್ರೆಂಡ್ ಟ್ವಿಟ್ಟರ್, ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ಹರಿದಾಡುತ್ತಿದ್ದವು.

ಕುಮಾರಸ್ವಾಮಿಪ್ರಮಾಣವಚನ ಎಂದು ಹ್ಯಾಶ್ ಟಾಗ್ ನ ಶಬ್ದ ನಿನ್ನೆ ಸಾಯಂಕಾಲದ ಹೊತ್ತಿಗೆ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿತ್ತು. ಕಾಂಗ್ರೆಸ್-ಜೆಡಿಎಸ್ ನ್ನು ಅಪವಿತ್ರ ಮೈತ್ರಿಯೆಂದು ಕರೆದಿದ್ದ ಬಿಜೆಪಿ #HDKNotMyCM ಎಂಬ ಹ್ಯಾಶ್ ಟಾಗ್ ನೊಂದಿಗೆ ಟ್ರೆಂಡ್ ಮಾಡಿತ್ತು. ಎರಡೂ ಹ್ಯಾಶ್ ಟಾಗ್ ಗಳಲ್ಲಿ ಕೆಲವರು ಹೆಚ್ ಡಿ ಕುಮಾರಸ್ವಾಮಿಯನ್ನು ಹೊಗಳಿದರೆ ಇನ್ನೊಂದು ಹ್ಯಾಸ್ ಟಾಗ್ ನಲ್ಲಿ ಬೈಯುತ್ತಿದ್ದರು. ಹ್ಯಾಶ್ ಟಾಗ್ ಗಳು ಮಾತ್ರವಲ್ಲದೆ ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ ಡಿ ಕುಮಾರಸ್ವಾಮಿಗೆ ಸಂಬಂಧಪಟ್ಟ ಹಲವು ಮೀಮ್ಸ್ ಗಳು ಹರಿದಾಡುತ್ತಿದ್ದವು. ಅವುಗಳಲ್ಲಿ ಬಹುತೇಕ ಮುಖ್ಯಮಂತ್ರಿಗೆ ವಿರುದ್ಧವಾಗಿ ಅವರ ಕುಟುಂಬದವರನ್ನು ಗುರಿಯಾಗಿಟ್ಟುಕೊಂಡು ಹರಿದಾಡುತ್ತಿದ್ದವು.

ಮೀಮ್ಸ್ ಗಳಲ್ಲಿ ಹೆಚ್ಚು ಟ್ರೆಂಡ್ ಆಗಿದ್ದು ಸಾಮಾಜಿಕ ಜ್ಞಾನದ ಪ್ರಶ್ನೆ, 2019ರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾರು ಎಂದು ಕೇಳಿ 4 ಆಯ್ಕೆಗಳನ್ನು ನೀಡಲಾಗಿತ್ತು, ಸಿದ್ದರಾಮಯ್ಯ, ಯೆಡಿಯೂರಪ್ಪ, ಕುಮಾರಸ್ವಾಮಿ ಮತ್ತು ಇವರು ಎಲ್ಲರೂ ಎಂದು ತಮಾಷೆಯಾಗಿ ಕೇಳಿರುವ ಪ್ರಶ್ನೆ ಹೆಚ್ಚು ಟ್ರೆಂಡ್ ಆಗಿತ್ತು.

ಇನ್ನು ಹಲವು ಮೀಮ್ಸ್ ಗಳಲ್ಲಿ ಮೈತ್ರಿ ಸರ್ಕಾರವನ್ನು ಟೀಕಿಸಿ ಮತ್ತು ಕುಮಾರಸ್ವಾಮಿಯವರ ಖಾಸಗಿ ಜೀವನದ ಬಗೆಗಿನ ಮೀಮ್ಸ್ ಗಳಾಗಿದ್ದವು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕುರಿತು, ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಗ್ಗೆ ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಪರ ವಿರೋಧ ಅಭಿಪ್ರಾಯಗಳು, ಚರ್ಚೆಗಳು ಇನ್ನು ಕೂಡ ಕಡಿಮೆಯಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com