ಬೆಂಗಳೂರು: ಭಾರತದ ಕ್ಷಿಪಣಿ ಮಹಿಳೆ ಎಂದೇ ಖ್ಯಾತವಾಗಿರುವ ಟೆಸ್ಸಿ ಥಾಮಸ್ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಹಾ ನಿರ್ದೇಶಕಿಯಾಗಿ ನೇಮಕವಾಗಿದ್ದಾರೆ.
ಡಿಆರ್‌ಡಿಒ ಮಹಾ ನಿರ್ದೇಶಕ ಡಾ.ಸಿ.ಪಿ. ರಾಮನಾರಾಯಣನ್ ಮೇ 31ರಂದು ನಿವೃತ್ತಿ ಯಾಗಲಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಟೆಸ್ಸಿ ಅವರನ್ನು ನೇಮಕ ಮಾಡಲಾಗಿದೆ. ಜೂನ್ 1ರಿಂದ ಟೆಸ್ಸಿ ಡಿಆರ್‌ಡಿಒ ಮಹಾ ನಿರ್ದೇಶಕಿಯಾಗಿ ಜವಾಬ್ದಾರಿ ವಹಿಸಲಿದ್ದಾರೆ.
ಅಗ್ನಿ ಕ್ಷಿಪಣಿ ಯೋಜನೆಯಲ್ಲಿ ಸಕ್ರಿಯ ಕಾರ್ಯನಿರ್ವಹಿಸಿದ್ದ ಟೆಸ್ಸಿ ಥಾಮಸ್ ಪ್ರಸ್ತುತ ಹೈದರಾಬಾದ್‍ನ ಅಡ್ವಾನ್ಸ್ಡ್ ಲ್ಯಾಬೋರೇಟರಿಸ್ (ಎಎಸ್‌ಎಲ್) ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಿಆರ್‌ಡಿಒ ಇತಿಹಾಸದಲ್ಲಿ ಮಹಾ ನಿರ್ದೇಶಕಿ ಸ್ಥಾನಕ್ಕೇರಿದ ಎರಡನೇ ಮಹಿಳೆ ಟೆಸ್ಸಿ ಅವರಾಗಿದ್ದು ಇದಕ್ಕೂ ಮುನ್ನ ಜೆ.ಮಂಜುಳಾ ಆ ಸ್ಥಾನವನ್ನು ಅಲಂಕರಿಸಿದ್ದರು.