ಜಯ ಭಾರತ ಜನನಿಯ ತನುಜಾತೆ ನಾಡಗೀತೆಗೆ 150 ಸೆಕೆಂಡ್ ಕತ್ತರಿ!?

: ನಾಡಗೀತೆ ಜಯಭಾರತ ಜನನಿಯ ತನುಜಾತೆ ಹಾಡನ್ನು 9 ನಿಮಿಷಗಳು ಹಾಡಲಾಗುತ್ತಿದ್ದು, ಅದನ್ನು 2 ನಿಮಿಷ 30 ಸೆಕಂಡ್ ಗಳಷ್ಟು ಕಡಿತಗೊಳಿಸಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ನಾಡಗೀತೆ ಜಯಭಾರತ ಜನನಿಯ ತನುಜಾತೆ ಹಾಡನ್ನು 9 ನಿಮಿಷಗಳು ಹಾಡಲಾಗುತ್ತಿದ್ದು, ಅದನ್ನು 2 ನಿಮಿಷ 30 ಸೆಕಂಡ್ ಗಳಷ್ಟು ಕತ್ತರಿ ಪ್ರಯೋಗ ಮಾಡಲು ನಿರ್ಧರಿಸಲಾಗಿದೆ. 
ಕನ್ನಡ ಸಾಹಿತ್ಯ ಪರಿಷತ್ ಮತ್ತು ಬರಹಗಾರರು ಹಾಗೂ ಕನ್ನಡಪರ ಚಳುವಳಿಗಾರರು ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ.
ರಾಷ್ಚ್ರಕವಿ ಕುವೆಂಪು ಅವರು ಬರೆದಿರುವ ಜಯ ಭಾರತ ಜನನಿಯ ತನುಜಾತೆ ಹಾಡನ್ನು 2004 ರಲ್ಲಿ ನಾಡಗೀತೆ ಎಂದು ಘೋಷಿಸಲಾಯಿತು. ಈ ಹಾಡನ್ನು ಈಗ ಐದರಿಂದ 9 ನಿಮಿಷಗಳವೆರೆಗೆ ಹಾಡಲಾಗುತ್ತಿದೆ. 2006 ರಲ್ಲಿ  ಈ ನಾಡಗೀತೆ ಹಾಡುವ ಸಮಯ ತುಂಬಾ ದೀರ್ಘವಾಗಿದೆ ಎಂಬ ದೂರು ಕೇಳಿ ಬಂದಿತ್ತು, ಆ ವೆಳೆ ಚನ್ನವೀರ ಕಣವಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.
2006 ರಲ್ಲಿ ಈ ಸಮಿತಿ  ಹಾಡಿಗೆ ಕತ್ತರಿ ಪ್ರಯೋಗಿಸುವಂತೆ ತನ್ನ ವರದಿ ಸಲ್ಲಿಸಿತ್ತು,  ಆದರೆ ಸಮಿತಿಯ ವರದಿ ಮಾತ್ರ ಅನುಷ್ಠಾನಗೊಳ್ಳಲಿಲ್ಲ.
ಸದ್ಯ ನಾಡಗೀತೆಯನ್ನು 9 ನಿಮಿಷಗಳ ಕಾಲ ಹಾಡಲಾಗುತ್ತಿದೆ,. ಬರಹಗಾರರು . ಕನ್ನಡಪರ ಸಂಘಟನೆಗಳುಹಾಗೂ ಗಾಯಕರು ನವೆಂಬರ್ 14 ರಂದು ಸಭೆ ನಡೆಸಿ ಹಾಡಿನ ಸಮಯವನ್ನು ಕಡಿತಗೊಳಿಸಲು  ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹೇಳಿದ್ದಾರೆ. 
ಹಲವುಸರ್ಕಾರಿ  ಕಾರ್ಯಕ್ರಮಗಳಲ್ಲಿ ನಾಡಗೀತೆ ಹಾಡಲಾಗುತ್ತದೆ. ಇದನ್ನು ಹಾಡಲು ದೀರ್ಘಾವಧಿ ಸಮಯ ತೆಗೆದುಕೊಳ್ಳುವುದಿಂದ ಹಿರಿಯ ನಾಗರಿಕರಿಗೆ ಹಾಗೂ ವಿಕಾಲಂಗರಿಗೆ ನಿಲ್ಲುವುದು ಸಮಸ್ಯೆಯಾಗುತ್ತದೆ ಎಂಬ ದೃಷ್ಟಿಯಿಂದ ನಾಡಗೀತೆಗೆ ಕತ್ತರಿಹಾಕಲು ನಿರ್ಧರಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com