ಆತಂಕಕಾರಿ ಸುದ್ದಿ: 2017ರಲ್ಲಿ ರಾಜ್ಯದಲ್ಲಿ 5,008 ಹೊಸ ಎಚ್ಐವಿ ಪ್ರಕರಣ ಪತ್ತೆ!

ಕರ್ನಾಟಕದಲ್ಲಿ ಒಟ್ಟು 2.47 ಲಕ್ಷ ಎಚ್ಐವಿ ರೋಗಿಗಳಿದ್ದಾರೆ. ದೇಶದ ಎಚ್ಐವಿ ರೋಗಿಗಳ ಸಂಖ್ಯೆಯ ಆಧಾರದಲ್ಲಿ ರಾಜ್ಯಕ್ಕೆ ಐದನೇ ಸ್ಥಾನ! ಇನ್ನು ರಾಜ್ಯದ ಒಟ್ಟು ಎಚ್ಐವಿ ರೋಗಿಗಳ ಪೈಕಿ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕರ್ನಾಟಕದಲ್ಲಿ ಒಟ್ಟು 2.47 ಲಕ್ಷ ಎಚ್ಐವಿ ರೋಗಿಗಳಿದ್ದಾರೆ. ದೇಶದ ಎಚ್ಐವಿ ರೋಗಿಗಳ ಸಂಖ್ಯೆಯ ಆಧಾರದಲ್ಲಿ ರಾಜ್ಯಕ್ಕೆ ಐದನೇ ಸ್ಥಾನ! ಇನ್ನು ರಾಜ್ಯದ ಒಟ್ಟು ಎಚ್ಐವಿ ರೋಗಿಗಳ ಪೈಕಿ ಕೇವಲ 1.5 ಲಕ್ಷ ಮಂದಿಗೆ ಮಾತ್ರ ಜೀವ ರಕ್ಷಕ ಆಂಟಿ ರೆಟ್ರೋವೈರಲ್ ಥೆರಪಿ (ಎಆರ್ ಟಿ) ಚಿಕಿತ್ಸೆ ಸೌಲಭ್ಯ ಪಡೆದಿದ್ದಾರೆ.
ಇನ್ನು ಎಚ್ಐವಿ ಹೊಂದಿರುವ 1,951 ಗರ್ಭಿಣಿ ಮಹಿಳೆಯರ ಪೈಕಿ ಕೇವಲ 1,421 ಮಂದಿಗೆ ಮಾತ್ರ ಈ ಚಿಕಿತ್ಸೆ ದೊರಕಿದೆ.ಇದೇ ಶುಕ್ರವಾರದಿಂದ ಭಾನುವಾರದವರೆಗೆ ನಡೆಯುವ ರಾಷ್ಟ್ರೀಯ ಏಡ್ಸ್ ಸಮಾವೇಶದಲ್ಲಿ ಏಡ್ಸ್ ಲಸಿಕೆ, ರೋಗಕ್ಕೆ ನೀಡಬಹುದಾದ ಆರಂಭಿಕ ಚಿಕಿತ್ಸೆ, ಸಂಶೋಧನೆ, ರೋಗನಿರ್ಣಯ ಮತ್ತು ರೋಗನಿರೋಧಕ ಔಷಧಿ ಸಂಶೋಧನೆಗಳಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳು ಕುರಿತಂತೆ ಚರ್ಚೆ ನಡೆಯಲಿದೆ.
2017 ರಲ್ಲಿ ಕರ್ನಾಟಕದಲ್ಲಿ 2,47,413 ಎಚ್ಐವಿ ರೋಗಿಗಳ ಗುರುತಿಸಲಾಗಿದ್ದು ಇವರಲ್ಲಿ 1,23,821 ಮಹಿಳೆಯರಾಗಿದ್ದಾರೆ. ಇವರಲ್ಲಿ 1,55,411 (62.8%) ಮಾತ್ರ ಎಆರ್ ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೆಂಟ್ ಜಾನ್ಸ್ ರಿಸರ್ಚ್ ಇನ್ ಸ್ಟಿಟ್ಯೂಟ್ ನ ಪ್ರೊಫೆಸರ್ ಡಾ.ಜಿ.ಡಿ ರವೀಂದ್ರನ್ ಹೇಳಿದ್ದಾರೆ. ಕರ್ನಾಟಕದಲ್ಲಿ 2010-2017ರ ನಡುವೆ ಏಡ್ಸ್ ನಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ 68% ಇಳಿಕೆಯಾಗಿದೆ. ಈ ವಧಿಯಲ್ಲಿ ಏಡ್ಸ್ ನ ಂಆರಕ ಖಾಯಿಲೆಯಿಂಡಾಗಿ  8,450 ಮಂದಿ ಸಾವನ್ನಪ್ಪಿದ್ದಾರೆ. ಎಚ್ಐವಿ ಸೋಂಕು 46% ದಷ್ಟು ಇಳಿಕೆಯಾದರೂ  2017 ರಲ್ಲಿ 5,008 ಹೊಸ ಪ್ರಕರಣಗಳು ವರದಿಯಾಗಿದೆ.
ಹೆಚ್.ಐ.ವಿ ರೋಗಿಗಳ ಪರ ಕೆಲಸ ಮಾಡುವ ಆಶಾ ಫೌಂಡೇಶನ್ ನಿರ್ದೇಶಕಿ  ಡಾ. ಗ್ಲೋರಿ ಅಲೆಕ್ಸಾಂಡರ್, "ಗರ್ಭದಲ್ಲ್ಕಿನ ಶಿಶುವಿಗೆ ಹೆಚ್ಐವಿ ಪ್ರಸರಣವನ್ನು ತಡೆಯುವ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಾವಿನ್ನೂ ಹಿ/ಮ್ದೆ ಇದ್ದೇವೆ. 2017 ರಲ್ಲಿ ಭಾರತದಲ್ಲಿ ಎಚ್ಐವಿ ಹೊಂದಿದ ಅಂದಾಜು 22,677 ಗರ್ಭಿಣಿ ಮಹಿಳೆಯರಲ್ಲಿ, ಕೇವಲ 13,716 ಮಂದಿ ಮಾತ್ರ ಎಆರ್ ಟಿ ಚಿಕಿತ್ಸೆ ಹೊಂದಿದ್ದಾರೆ.ಇದು ಕೇವಲ ಶೇ.60ರಷ್ಟನ್ನು ಮಾತ್ರ ಒಳಗೊಂಡಿದೆ.ಆದರೆ ಕರ್ನಾಟಕದಲ್ಲಿ , 2017 ರಲ್ಲಿ, ಸುಮಾರು 70% ಮಹಿಳೆಯರು ಈ ಸೌಲಭ್ಯ ಬಳಸಿಕೊಂಡಿದ್ದಾರೆ.. ಪೋಷಕರಿಂದ ಮಗುವಿಗೆ ಮಾರಕ ರೋಗ ಹರಡುವದನ್ನು ತಡೆಯುವುದಕ್ಕೆ ಭಾರತ ಸಂಕಲ್ಪ ಮಾಡಿದೆ. ಗರ್ಭಿಣಿ ಮಹಿಳೆಯರಲ್ಲಿ ನಾವು ಹೆಚ್.ಐ.ವಿ ಪರೀಕ್ಷೆ ಜತೆಗೆ ಸೂಕ್ತ ಚಿಕಿತ್ಸೆ ನೀಡುವಸಂಬಂಧ ನಾವು ಇದುವರೆಗೆ ಸಾಧಿಸಿದ ಪ್ರಗತಿ ಅಸಡ್ಡೆ ಪಡುವಂತಹುದಲ್ಲ" ಎಂದಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಮಾರ್ಗದರ್ಶಿ ಸೂತ್ರಗಳು ರೋಗಿಯೊಬ್ಬ ಪ್ರತಿ ಆರು, ಹನ್ನೆರಡು ತಿಂಗಳಿಗೊಮ್ಮೆ ಎಆರ್ ಟಿ ಚಿಕಿತ್ಸೆ ಪಡೆಯುವುದನ್ನು ಸೂಚಿಸುತ್ತದೆ. ಒಂದೊಮ್ಮೆ ಎಆರ್ ಟಿ ಚಿಕಿತ್ಸೆಗೆ ಒಳಗಾಗಿರುವ ವ್ಯಕ್ತಿಯು ಗುರುತಿಸಲಾಗದ ವೈರಸ್ ಹೊಂದಿದ್ದರೂ ಸಹ ಅವನಿಂದ ರೋಗ ಹರಡುವಿಕೆ ತೀರಾ ವಿರಳ ಎಂದು ವೈಜ್ಞಾನಿಕ ಪುರಾವೆಗಳು ತೋರಿಸಿವೆ. ಆದಾಗ್ಯೂ, ಚಿಕಿತ್ಸೆಯ ವೈಫಲ್ಯದ ಶಂಕಿತ ಪ್ರಕರಣಗಳಿಗೆ ಸಂಬಂಧಿಸಿದಂತೆ 10 ರಾಷ್ಟ್ರೀಯ  ಪ್ರಯೋಗಾಲಯಗಳಲ್ಲಿ ಮಾತ್ರ ವೈರಾಣು ಪರೀಕ್ಷೆ ನಡೆಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com