ವಿದ್ಯಾರ್ಥಿಗಳ ಬ್ಯಾಕ್ ಲಾಗ್ ತೆರವಿಗೆ 2 ಹೆಚ್ಚುವರಿ ಅವಕಾಶ ನೀಡಿದ ವಿಟಿಯು

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ(ವಿಟಿಯು) ಬೆಳಗಾವಿ, 2003 ರಿಂದ 2009 ರವರೆಗಿನ ವಿದ್ಯಾರ್ಥಿಗಳಿಗೆ ತಮ್ಮ ಬ್ಯಾಚ್ ಲಾಗ್ ಗಳನ್ನು ತೆರವುಗೊಳಿಸಿ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ(ವಿಟಿಯು) ಬೆಳಗಾವಿ, 2003 ರಿಂದ 2009 ರವರೆಗಿನ ವಿದ್ಯಾರ್ಥಿಗಳಿಗೆ  ತಮ್ಮ ಬ್ಯಾಚ್ ಲಾಗ್ ಗಳನ್ನು ತೆರವುಗೊಳಿಸಿಕೊಳ್ಳುವ ಸಲುವಾಗಿ ಮತ್ತೆ ಎರಡು ಹೆಚ್ಚುವರಿ ಅವಕಾಶವನ್ನು ನೀಡಲು ನಿರ್ಧರಿಸಿದೆ.

ವಿದ್ಯಾರ್ಥಿ ಸಮುದಾಯದ ಕೋರಿಕೆಗಳನ್ನು ಪರಿಗಣಿಸಿ, ವಿಶ್ವವಿದ್ಯಾನಿಲಯವು ಡಿಸೆಂಬರ್ 2018 ರಿಂದ ಜನವರಿ 2019 ರವರೆಗೆ ನಡೆಯುವ ಪರೀಕ್ಷೆಗಳಲ್ಲಿ ಇಂತಹಾ ವಿದ್ಯಾರ್ಥಿಗಳು ತಾವು ಉಳಿಸಿಕೊಂಡಿರುವ ವಿಷಯದ ಪರೀಕ್ಷೆ ತೆಗೆದುಕೊಂಡು ತೇರ್ಗಡೆ ಹೊಂದಲು ಅವಕಾಶ ಕಲ್ಪಿಸಿಕೊಡಲು ವಿಟಿಯು ನ ವಿಶೇಷ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.

2003 ರಿಂದ 2009 ರವರೆಗೆ ಬಿಇ ಅಥವಾ ಬಿಟೆಕ್  ಮಾಡಿರುವ 2012-2015 ರ ನಡುವೆ ಎಂಬಿಎ ಅಥವಾ ಎಂಟೆಕ್ ಓದಿರುವ ವಿದ್ಯಾರ್ಥಿಗಳು ಯಾರಾದರೂ ಕೆಲ ವಿಷಯಗಳಲ್ಲಿ ಬ್ಯಾಕ್ ಲಾಗ್ ಇಟ್ಟುಕೊಂಡಲ್ಲಿ ಅಂತಹವರಿಗೆ ಈ ನಿರ್ಣಯದಿಂದ ಅನುಕೂಲವಾಗಲಿದೆ.

"ನಾವು ವಿದ್ಯಾರ್ಥಿಗಳಿಂದ ಬಂದ ಬೇಡಿಕೆ ಆಧರಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ.ಎಕ್ಸಿಕ್ಯುಟಿವ್ ಕೌನ್ಸಿಲ್ ಕೂಡಾ ಅದನ್ನು ಒಪ್ಪಿಕೊಳ್ಳುತ್ತದೆ ಮತ್ತು ಈ ವಿದ್ಯಾರ್ಥಿಗಳಿಗೆ ಎರಡು ಅವಕಾಶಗಳನ್ನು ನೀಡಲಾಗುತ್ತದೆ. ಎಂದು ವಿಟಿಯು ಅಧಿಕೃತ ಮೂಲಗಳು  ತಿಳಿಸಿದೆ. ಆದರೆ ಇದಾಗಲೇ ಎಲ್ಲಾ ವಿಷಯಗಳನ್ನು ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಇದು ಯಾವ ಬಗೆಯಲ್ಲಿಯೂ ಅನ್ವಯವಾಗುವುದಿಲ್ಲ.

"ಅಗತ್ಯವಿರುವ ಹಾಜರಾತಿ ಇಲ್ಲದಿರುವ ಅಥವಾ ಆಂತರಿಕ ಪರೀಕ್ಷೆ (ಇಂಟರ್ನಲ್ ಟೆಸ್ಟ್) ತೆಗೆದುಕೊಳ್ಳದ  ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲವೆಂದು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ, ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com