ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಾಲಾಪರಾಧಿ ಪುನಶ್ಚೇತನ ಕೇಂದ್ರದಿಂದ ಐವರು ಬಾಲಕರು ಪರಾರಿ!

ರಾಜ್ಯ ಸರ್ಕಾರಿ ಸ್ವಾಮ್ಯದ ಬಾಲಾಪರಾಧಿಗಳ ಪುನಶ್ಚೇತನ ಕೇಂದ್ರದಲ್ಲಿದ್ದ ಐದು ಮಂದಿ ಅಪ್ರಾಪ್ತ ಬಾಲಕರು ತಪ್ಪಿಸಿಕೊಂಡಿದ್ದಾರೆ. ಕೇಂದ್ರದಲ್ಲಿನ ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಬಳಿಕ....
Published on
ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಬಾಲಾಪರಾಧಿಗಳ ಪುನಶ್ಚೇತನ ಕೇಂದ್ರದಲ್ಲಿದ್ದ ಐದು ಮಂದಿ ಅಪ್ರಾಪ್ತ ಬಾಲಕರು ತಪ್ಪಿಸಿಕೊಂಡಿದ್ದಾರೆ. ಕೇಂದ್ರದಲ್ಲಿನ ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಬಳಿಕ ಒಟ್ಟು 15 ಬಾಲಕರು ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಇದರಲ್ಲಿ 10 ನಾಲಕರನ್ನು ಸಾರ್ವಜನಿಕರ ಸಹಕಾರದೊಡನೆ ತಕ್ಷಣ ಬಂಧಿಸಲಾಗಿದೆ. ಉಳಿದ ಐವರಿಗಾಗಿ ಹುಡುಕಾಟ ನಡೆದಿದೆ.
ಬೆಂಗಳೂರು ಮಡಿವಾಳದಲ್ಲಿನ ಬಾಲಕರ ಪುನಶ್ಚೇತನ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ಐವರಲ್ಲಿ ಒಬ್ಬ ಬಾಲಕ ಇದು ಮೂರನೇ ಬಾರಿಗೆ ಕೇಂದ್ರದಿಂದ ಪರಾರಿಯಾಗಲು ಯಶಸ್ವಿಯಾಗಿದ್ದಾನೆ. ಈ ಹಿಂಎ ನಡೆಸಿದ್ದ ಎರಡು ಪ್ರಯತ್ನಗಳಲ್ಲಿ ಅವನನ್ನು ಪತ್ತೆ ಮಾಡಿ ಮತ್ತೆ ಕೇಂದ್ರಕ್ಕೆ ಕಳಿಸಲಾಗಿತ್ತು.ಶುಕ್ರವಾರ ಬೆಳಿಗ್ಗೆ ಸುಮಾರು  9.15ಕ್ಕೆ ಈ ಘಟನೆ ನಡೆದಿದೆ. ಬಾಲಕರೆಲ್ಲರೂ ಬೆಳಗಿನ ಉಪಹಾರಕ್ಕೆ ತೆರ್ಳುವಾಗ ಇವರು ಪರಾರಿಯಾಗಲು ಪ್ರಯತ್ನಿಸಿದ್ದಾರೆ.
"ಕೇಂದ್ರದಲ್ಲಿ ಒಟ್ಟು ಮೂವರು ಸೆಕ್ಯೂರಿಟಿ ಗಾರ್ಡ್ ಗಳಿದ್ದು ಅವರಲ್ಲಿ ಓರ್ವನು ಶೌಚಾಲಯಕ್ಕೆ ತೆರಳಿದರೆ ಇನ್ನೊಬ್ಬ ಮೋಟಾರ್ ಸ್ವಿಚ್ ಹಾಕಲು ಹೋಗಿದ್ದನು ಆವೇಳೆ 15 ಬಾಲಕರು ಕೇಂದ್ರದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಗಾರ್ಡ್ ಮೇಲೆ ಕುರ್ಚಿಯ ಹ್ಯಾಂಡಲ್ ನಿಂದ ಹಲ್ಲೆ ಅನ್ಡೆಸಿದ್ದಾರೆ. ಗಾರ್ಡ್ ರಮೇಶ್ ಹಲ್ಲೆಗೊಳಗಾಗಿದ್ದಾನೆ." ಕೇಂದ್ರದ ಅಧೀಕ್ಷಕರು ಹೇಳಿದ್ದಾರೆ.
"ತಪ್ಪಿಸಿಕೊಂಡ  ಬಾಲಕರೆಲ್ಲರೂ 15-17 ವರ್ಷದ ವಯೋಮಾನದವರಾಗಿದ್ದು ಇದರಲ್ಲಿ ಒಟ್ಟು 10 ಮಂದಿಯನ್ನು ಕೇಂದ್ರದ ಸಿಬ್ಬಂದಿ ಹಗೂ ಸಾರ್ವಜನಿಕರ ಸಹಕಾರದಿಂದ ರಕ್ಷಿಸಲಾಗಿದೆ.ಗಾರ್ಡ್ ರಮೇಶ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ."
ಘಟನೆ ಕುರಿತು ಮಡಿವಾಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com