ಲೈಂಗಿಕ ಕಿರುಕುಳ: ಮಾಧ್ಯಮ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಎಫ್ಐಆರ್ ದಾಖಲು!

ಪ್ರಮುಖ ಬೆಳವಣಿಗೆಯೊಂದರಲ್ಲಿ ರಾಜಕೀಯ ವ್ಯಾಖ್ಯಾನಗಾರ್ತಿಯಾದ ಸೋನಂ ಮಹಾಜನ್ ಏಷ್ಯಾನೆಟ್ ಗ್ರೂಪ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಿನವ್ ಖರೆ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ....
ಅಣ್ಣಾಮಲೈ
ಅಣ್ಣಾಮಲೈ
ಬೆಂಗಳೂರು: ಪ್ರಮುಖ ಬೆಳವಣಿಗೆಯೊಂದರಲ್ಲಿ ರಾಜಕೀಯ ವ್ಯಾಖ್ಯಾನಗಾರ್ತಿಯಾದ ಸೋನಂ ಮಹಾಜನ್ ಏಷ್ಯಾನೆಟ್ ಗ್ರೂಪ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಿನವ್ ಖರೆ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಮಹಾಜನ್ ತಾಬ್ವು ಖರೆ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಕಳೆದ ವರ್ಷ ತಾನು ಅವರ ಸಂಸ್ಥೆಯಲ್ಲಿ ಕೆಲಸ ಮಾಡುವ ವೇಳೆ ಆತ ತನಗೆ ಲೈಂಗಿಕ ಕಿರುಕುಳ ನೀಡಿದ್ದರೆಂದು ಅವರು ದೂರಿನಲ್ಲಿ ಹೇಳಿದ್ದಾರೆ.
ಬೆಂಗಳೂರು ದಕ್ಷಿಣದ ಡಿಸಿಪಿ ಅಣ್ಣಾಮಲೈ ಖರೆ ವಿರುದ್ಧ ಎಫ್ಐಆರ್ ದಾಖಲಾಗಿರುವುದನ್ನುಖಚಿತಪಡಿಸಿದ್ದು ಇನ್ನೂ ಕಾನೂನು ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದಿದ್ದಾರೆ.". ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾವು ಖರೆ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ಮ್ಯಾಜಿಸ್ಟ್ರೇಟ್ ಮುಂದೆ 164 ಸಿಆರ್ಪಿಸಿ ಹೇಳಿಕೆಗಾಗಿ ನಾವು ಕಾಯುತ್ತಿದ್ದೇವೆ.ಸೋನಮ್ ಸದ್ಯ ಅನಾರೋಗ್ಯಕ್ಕೀಡಾಗಿದ್ದು ಆಕೆ ಒಮ್ಮೆ ನ್ಯಾಯಾಲಯಕ್ಕೆ ಬಂದು ಹೇಳಿಕೆ ನೀಡಿದ್ದಾದರೆ ನಾವು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ" ಅಣ್ಣಾಮಲೈ ಹೇಳಿದ್ದಾರೆ.
ಸೋನಮ್ ಬುಧವಾರ ಈ ಸಂಬಂಧ ಟ್ವೀಟ್ ಮಾಡಿದ್ದು ತಾನು ಖರೆ ವಿರುದ್ಧ ಎಫ್ಐಆರ್ ದಾಕಲಿಸಲು ಮುಂದಾದಾಗ ಒಂದು ಸ್ಟೇಷನ್ ನಿಂದ ಇನ್ನೊಂದಕ್ಕೆ ಅಲೆಯಬೇಕಾಗಿತ್ತು ಕಡೆಗೆ ಡಿಸಿಪಿ ಅವರಿಗೆ ಕರೆ ಮಾಡುವ ಅನಿವಾರ್ಯತೆ ಎದುರಾಗಿತ್ತು ಎಂದಿದ್ದರು. ಈ ಸಂಬಂಧ ಮಾತನಾಡಿದ ಅಣ್ಣಾಮಲೈ "ಇದು ಕಾನೂನಾತ್ಮಕ ಸಮಸ್ಯೆ. ನಾನು 10 ಗಂಟೆಗೆ ಕರೆ ಸ್ವೀಕರಿಸಿದೆ. ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳಿಗೆ ಎಫ್ಐಆರ್ದಾಖಲಿಸುವಂತೆ ಹೇಳಿದ್ದೆ. ಪ್ರಕರಣದ ಬಗ್ಗೆ ನ್ಯಾಯೋಚಿತ ತನಿಖೆ ನಡೆಸುತ್ತೇವೆ. "ಎಂದಿದ್ದಾರೆ.
ಅಕ್ಟೋಬರ್ 21 ರಂದು ಟ್ವಿಟ್ಟರ್ ನಲ್ಲಿ ಖರೆ ವಿವರವಾಗಿ ಘಟನೆಯ ಕುರಿತಂತೆ ಬರೆದಿದ್ದರು.ಮಹಾಜನ್ ಅವರ ಆರೋಪವು ತನ್ನ ಹೆಸರನ್ನು ಕೆಡಿಸಲು ಹಾಗೂ ತನ್ನಿಂದ ಹಣ ಪಡೆಯಲು ಮಾಡಿದ ತಂತ್ರ ಎಂದು ಅವರು ಆರೋಪಿಸಿದ್ದರು."ತಾನು ಕಡೆ ಕ್ಷಣದವರೆಗೆ ಹೋರಾಟ ನಡೆಸುತ್ತೇನೆ" ಖರೆ ಹೇಳಿದ್ದಾರೆ. 
ಮಹಾಜನ್ ಹೇಳುವಂತೆ ಆಕೆ 2017 ರಲ್ಲಿ ನಮ್ಮ ಬೆಂಗಳೂರು ಫೌಂಡೇಷನ್ ಸೇರ್ಪಡೆಯಾಗಿದ್ದರು. ಅದಾಗಿ ಆಕೆ ಖರೆ ಬಗೆಗೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಬಳಿಕ ಫೌಂಡೇಷನ್  ಡಿಸೆಂಬರ್ 2017 ರಲ್ಲಿ ಆಂತರಿಕ ತನಿಖಾ ಸಮಿತಿಯನ್ನು ಸ್ಥಾಪಿಸಿತು, ಇದು ಜೂನ್ 2018 ರಲ್ಲಿ ತೀರ್ಪು ನೀಡಿದ್ದು ಖರೆ ತಪ್ಪಿತಸ್ಥರೆಂದು ಪ್ರಕಟಿಸಿತ್ತು. ಫೌಂಡೇಷನ್ ಖರೆ ಮಹಾಜನ್ ಗೆ ಕ್ಷಮಾಪಣಾ ಪತ್ರ ಬರೆದು ಕೊಡುವಂತೆ ಕೇಳಿ ತಿಂಗಳುಗಳು ಉರುಳಿದರೂ ಖರೆಇದರ ಕುರಿತಂತೆ ನಿರ್ಲಕ್ಷ ತಾಳಿದ್ದರು.ಅಲ್ಲದೆ ಅಕ್ಟೋಬರ್ 1, 2018 ರಂದು ಅವರು ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ಭೇಟಿ ಮಾಡಿ ಸಮಿತಿ ತೀರ್ಪು ತಡೆ ಹಿಡಿಯುವಂತೆ ಕೋರಿದ್ದರು.
ಅಕ್ಟೋಬರ್ 7 ರಂದು ಈ ಪ್ರಕರಣದ ಕುರಿತು ಮಹಾಜನ್ ಟ್ವೀಟ್ ಮಾಡಿದ್ದರು. ಆದರೆ ಅಲ್ಲಿ ಅವರು ಯಾರೊಬ್ಬರ ಹೆಸರು ಉಲ್ಲೇಖಿಸಿರಲಿಲ್ಲ. ಇದಾಗಿ ಅಕ್ಟೋಬರ್ 8ರಂದು ಖರೆ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಲ್ಲದೆ ಸಮಿತಿ ತೀರ್ಪಿಗೆ ತಡೆ ತರಲು ಯಶಸ್ವಿ ಆಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com