371(ಜೆ) ತಿದ್ದುಪಡಿ ಪರಿಣಾಮ: ಹೈದರಾಬಾದ್-ಕರ್ನಾಟಕ ವಿಭಾಗದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ!

ಹೈದರಾಬಾದ್-ಕರ್ನಾಟಕಕ್ಕಿದ್ದ "ಹಿಂದುಳಿದ ಪ್ರದೇಶ" ಎಂಬ ಹಣೆಪಟ್ಟಿಯನ್ನು ತೆಗೆದು ಹಾಕುವ ಸಲುವಾಗಿ ಅಂದಿನ ಯುಪಿಎ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ಡಿಸೆಂಬರ್....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಲಬುರ್ಗಿ: ಹೈದರಾಬಾದ್-ಕರ್ನಾಟಕಕ್ಕಿದ್ದ "ಹಿಂದುಳಿದ ಪ್ರದೇಶ" ಎಂಬ ಹಣೆಪಟ್ಟಿಯನ್ನು ತೆಗೆದು ಹಾಕುವ ಸಲುವಾಗಿ ಅಂದಿನ ಯುಪಿಎ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ಡಿಸೆಂಬರ್ 2012ರಲ್ಲಿ ಸಂವಿಧಾನದ371 (ಜೆ) ವಿಧಿಗೆ ತಿದ್ದುಪಡಿ ತಂದಿದ್ದರು
ಹಿಂದುಳಿದ ಪ್ರದೇಶಗಳನ್ನು ಅಧ್ಯಯನ ಮಾಡಲಿಕ್ಕಾಗಿ ಇಡೀ ರಾಜ್ಯವನ್ನು ಸುತ್ತಾಡಿ ಸಮಸ್ಯೆ ಪರಿಹಾರಕ್ಕೆ  ಶಿಫಾರಸು ಮಾಡಿದ ಡಾ ಡಿ ಎನ್ ನಂಜುಂಡಪ್ಪ ಸಮಿತಿಯ ವರದಿಯನ್ನು ಪರಿಗಣಿಸಿದ ನಂತರ ಈ ತಿದ್ದುಪಡಿಯನ್ನು ತರಲಾಯಿತು. ಇದರಿಂದಾಗಿ ಈ ಭಾಗದ  ಯುವಜನರಿಗೆ ಉದ್ಯೋಗಾವಕಾಶ ದೊರಕುವಲ್ಲಿ ಯಾವುದೇ ತೃಪ್ತಿಕರ ಸಾಧನೆ ಆಗಿಲ್ಲವಾದರೂ ಹೈದರಾಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ವೃತ್ತಿಪರ ಕಾಲೇಜುಗಳಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳಲು ಇದು ಸಾಧನಾವಿದೆ.
ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 2013ರ ಮೊದಲು ಈ ಭಾಗದ ವಿದ್ಯಾರ್ಥಿಗಳ ಸಂಖ್ಯೆ ಅತ್ಯಂತ ಕಡಿಮೆ ಇದ್ದದ್ದು ಈ ಐದು ವರ್ಷಗಳಲ್ಲಿ ಬಹಳಷ್ಟು ಹೆಚ್ಚಳವಾಗಿದೆ.2013ರ ಮೊದಲು ಎಂಬಿಬಿಎಸ್ ಕೋರ್ಸ್ ಪ್ರವೇಶಕ್ಕೆ 300 ಸೀಟು ಹೊಂದಿದ್ದ ಈ ಭಾಗದ ವಿದ್ಯಾರ್ಥಿಗಳು2018ರಲ್ಲಿ 905 ಸೀಟು ಪಡೆದಿದ್ದಾರೆ.ಅಲ್ಲದೆ 2014-15ರಲ್ಲಿ ಮೊದಲ ಬಾರಿಗೆ ವಿಶೇಷ ಮೀಸಲಾತಿ ಪಡೆದು ಪ್ರವೇಶಿಸಿದ 530 ವಿದ್ಯಾರ್ಥಿಗಳು ಈ ವರ್ಷ ತಮ್ಮ ಉನ್ನತ ವ್ಯಾಸಂಗ ಪೂರ್ಣಗೊಳಿಸಿದ್ದಾರೆ.
ಅಂತೆಯೆ ಹೈದರಾಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಸಹ ಈ ವಿಶೇಷ ಸ್ಥಾನಮಾನ ಅನುಕೂಲ ಕಲ್ಪಿಸಿದೆ.2013ಕ್ಕೆ ಮುನ್ನ  3,500 ಸಂಖ್ಯೆ ತಲುಪದ ಈ ಭಾಗದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಖ್ಯೆ ಇದೀಗ 6,350 ಕ್ಕೆ ತಲುಪಿದೆ.ಇದರಲ್ಲಿ ಮೊದಲ ಬ್ಯಾಚ್ ನ  6,312ವಿದ್ಯಾರ್ಥಿಗಳು ಈ ಸಾಲಿನಲ್ಲಿ ಬಿಇ ಪದವಿ ಪೂರೈಸಿ ಹೊರಬಂದಿದ್ದಾರೆ.ಒಟ್ಟು 9,1855 ಅನುದಾನಿತ ಹುದ್ದೆಗಳ ಪೈಕಿ  64,213 ಹುದ್ದೆಗಳು ಭರ್ತಿಯಾಗಿದ್ದು . 28,709 ಹುದ್ದೆಗಳು ಮಾತ್ರವೇ ಖಾಲಿ ಇದೆ.
ಜನವರಿ 1, 2013ರಿಂದ ಇಲ್ಲಿಯವರೆಗೆ ಸಂವಿಧಾನದ 371 (ಜೆ) ತಿದ್ದುಪಡಿ ವಿಧೇಯಕ್ಲಕ್ಕೆ ಅನುಸಾರವಾಗಿ 9,699 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com