ಟಿಪ್ಪು ಸುಲ್ತಾನ್ ಅತ್ಯಾಚಾರಿ, ಹಿಂದೂ ವಿರೋಧಿ: ಚಿದಾನಂದ ಮೂರ್ತಿ ಕಿಡಿ

ಟಿಪ್ಪು ಜಯಂತಿ ಆಚರಣೆ ಕುರಿತಂತೆ ರಾಜ್ಯದಲ್ಲಿ ವಾದ-ವಿವಾದಗಳು ವಿಕೋಪಕ್ಕೆ ತಿರುಗಿದ್ದು ಈ ಮಧ್ಯೆ ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಅವರು ಟಿಪ್ಪು....
ಚಿದಾನಂದ ಮೂರ್ತಿ
ಚಿದಾನಂದ ಮೂರ್ತಿ
Updated on
ಬೆಂಗಳೂರು: ಟಿಪ್ಪು ಜಯಂತಿ ಆಚರಣೆ ಕುರಿತಂತೆ ರಾಜ್ಯದಲ್ಲಿ ವಾದ-ವಿವಾದಗಳು ವಿಕೋಪಕ್ಕೆ ತಿರುಗಿದ್ದು ಈ ಮಧ್ಯೆ ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಅವರು ಟಿಪ್ಪು ಸುಲ್ತಾನ್ ಅತ್ಯಾಚಾರಿ ಹಾಗೂ ಹಿಂದೂ ವಿರೋಧಿ ಅವನ ಜಯಂತಿ ಆಚರಣೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಕಿಡಿಕಾರಿದ್ದಾರೆ. 
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಿದಾನಂದ ಮೂರ್ತಿ ಅವರು ಸರ್ಕಾರ ಯಾವುದೋ ಒಂದು ವರ್ಗದ ಓಲೈಕೆಗಾಗಿ ಮಾಡುತ್ತಾರೆ ಎಂಬ ವ್ಯಾಖ್ಯಾನ ಬೇರೆಯಾಗಿದ್ದು ಆದರೆ ಟಿಪ್ಪು ಜಯಂತಿ ಆಚರಣೆ ಮಾಡುವುದು ಹಿಟ್ಲರ್ ಜಯಂತಿ ಮಾಡವುದಕ್ಕೆ ಸಮ. ಇದು ಇತಿಹಾಸಕ್ಕೆ ಮಾಡುವ ಅಪಮಾನ ಆಗಿದೆ ಎಂದು ಸರ್ಕಾರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. 
ಈ ಸಮ್ಮಿಶ್ರ ಸರ್ಕಾರವಾದರೂ ಟಿಪ್ಪು ಜಯಂತಿ ವಿಚಾರವಾಗಿ ಮೌನವಾಗಿರುತ್ತೆ ಎಂದು ತಿಳಿದಿದ್ದೇವು. ಆದರೆ ಇವರು ಬುದ್ದಿ ಇಲ್ಲದೆ ಮಾಡುತ್ತಿದ್ದಾರೆ. ಈಗ ನಮ್ಮ ಕೆಲಸ ಸತ್ಯದ ಪರ ನಿಲ್ಲುವುದು ನಮ್ಮ ಕರ್ತವ್ಯ ಆಗಿದೆ. ಹಿಂದೂಗಳನ್ನು ಕೊಲೆಗೈದ, ಹಿಂದೂ ಮಹಿಳೆಯರನ್ನು ಅತ್ಯಾಚಾರ ಮಾಡಿದ ಹಾಗೂ ಅನೇಕ ಹಿಂದೂ ಮಹಿಳೆಯರನ್ನು ತನ್ನ ಆಸ್ಥಾನದ ಅಧಿಕಾರಿಗಳಿಗೆ ಮಾರಾಟ ಮಾಡಿದ್ದಾನೆ ಎಂದು ಹೇಳಿದ್ದಾರೆ. 
ಟಿಪ್ಪು ಒಬ್ಬ ಹಠವಾದಿ ಎಂಬುವುದು ಎಷ್ಟು ನಿಜವೋ ಅಷ್ಟೇ ಆತ ಒಬ್ಬ ಅತ್ಯಾಚಾರಿ, ಹಿಂದೂ ವಿರೋಧಿ ಎಂಬುವುದು ಕೂಡ ಅಷ್ಟೇ ಸತ್ಯ. ಇಂತಹ ಟಿಪ್ಪು ಜಯಂತಿ ಆಚರಿಸಿದರೆ ನಾವು ಹೋರಾಟ ಮಾಡುತ್ತೇವೆ. ಹೀಗಾಗಲೇ ಬಿಜೆಪಿ ಹೋರಾಟ ಮಾಡುವುದಾಗಿ ಕರೆ ನೀಡಿದ್ದು ನಾನು ಹೋರಾಟಕ್ಕೆ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com