ಟೈಮ್ ನೋಡಿಕೊಂಡು ಪಟಾಕಿ ಹಚ್ಚಿ: ಸಂಭ್ರಮಾಚರಣೆ ಮಾಡುವವರಿಗೆ ಪೋಲೀಸರ ಎಚ್ಚರಿಕೆ

ನಾಲ್ಕು ದಿನಗಳ ಕಾಲದ ದೀಪಾವಳಿ ಸಡಗರದ ಸಮಯದಲ್ಲಿ ಪಟಾಕಿ, ಸುಡುಮದ್ದುಗಳ ಬಳಕೆಗೆ ಸುಪ್ರೀಂ ಕೋರ್ಟ್ ಹೇರಿರುವ ನಿರ್ಬಂಧ ಆದೇಶವನ್ನು ರಾಜ್ಯ ಪೋಲೀಸರು ಕಟ್ಟುನಿಟ್ಟಾಗಿ ಪಾಲನೆಗೆ.....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ನಾಲ್ಕು ದಿನಗಳ ಕಾಲದ ದೀಪಾವಳಿ ಸಡಗರದ ಸಮಯದಲ್ಲಿ ಪಟಾಕಿ, ಸುಡುಮದ್ದುಗಳ ಬಳಕೆಗೆ ಸುಪ್ರೀಂ ಕೋರ್ಟ್ ಹೇರಿರುವ ನಿರ್ಬಂಧ ಆದೇಶವನ್ನು ರಾಜ್ಯ ಪೋಲೀಸರು ಕಟ್ಟುನಿಟ್ಟಾಗಿ ಪಾಲನೆಗೆ ತರಲು ಮುಂದಾಗಿದ್ದಾರೆ. ರಾತ್ರಿ  8ರಿಂದ 10ರ ಹೊರತು ಇತರೆ ವೇಳೆಯಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೋಲೀಸ್ ಇಲಾಖೆ ಎಚ್ಚರಿಸಿದೆ.
ಹಬ್ಬದ ಸಡಗರವೆಂದಾಗಲೀ, ಇಂದಿನ ಉಪ ಚುನಾವಣೆ ಫಲಿತಾಂಶದ ಖುಷಿಗಾಗಲಿ ನಿಗದಿತ ವೇಳೆಯ ಹೊರತಾಗಿ ಪಟಾಕಿ ಸುಟ್ಟು ಸಂಭ್ರಮ ಆಚರಿಸುವಂತಿಲ್ಲ.
"ಯಾರಾದರೂ ನಿಗದಿತ ಸಮಯದ ಹೊರತಾಗಿ ಪಟಾಕಿಗಳನ್ನು ಹಚ್ಚಿದ್ದು ಕಂಡುಬಂದರೆ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ.ದೂರು ಪಡೆದು ಸ್ಥಳಕ್ಕೆ ಆಗಮಿಸುವ ಪೋಲೀಸರು ಪರಿಸ್ಥಿತಿ ಅವಲೋಕಿಸುತ್ತಾರೆ. ಪಟಾಕಿ ಹಚ್ಚುವವರು ಅಪ್ರಾಪ್ತನಾಗಿದ್ದರೆ, ಅಪ್ರಾಪ್ತನೊಡನೆ ಇನ್ನೊಬ್ಬ ವ್ಯಕ್ತಿ ವಯಸ್ಕನಿದ್ದಲ್ಲಿ ಆ ವಯಸ್ಕ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಲಾಗುತ್ತದೆ"ಪೊಲೀಸ್ ಕಮಿಷನರ್ ಟಿ. ಸುನೀಲ್ ಕುಮಾರ್ ಹೇಳಿದ್ದಾರೆ.
ಹೆಚ್ಚುವರಿ ಕಮಿಷನರ್ (ಪೂರ್ವ) ಸೀಮಂತ್ ಕುಮಾರ್ ಸಿಂಗ್ ಪ್ರಕಾರ ಇದೇ ನಿಯಮಗಳು ರಾಜಕೀಯ ಪಕ್ಷಗಳಿಗೆ ಸಹ ಅನ್ವಯಿಸುತ್ತದೆ.ಯಾರಾದರೂ ಏಕೆ ಪಟಾಕಿ ಹಚ್ಚಿದ್ದಾರೆ ಎನ್ನುವುದನ್ನು ನಾವು ನೋಡುವುದಿಲ್ಲ. ನಿಯಮ ಅನುಸರಿಸದೆ ಹೋದರೆ ಕ್ರಮ ಜರುಗಿಸುತ್ತೇವೆ ಎಂದು ಅವರು ಹೇಳಿದರು.
ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಅನುಸಾರ ದೇಶದ ಯಾವುದೇ ರಾಜ್ಯದಲ್ಲಿ ದಿನಕ್ಕೆ ಎರಡು ತಾಸಿಗಿಂತ ಹೆಚ್ಚು ಪಟಾಕಿ ಸುಡುವಂತಿಲ್ಲ.ಆಯಾ ರಾಜ್ಯಗಳು ಇದಕ್ಕಾಗಿ ಸಮಯ ನಿಗದಿಪಡಿಸಿಕೊಳ್ಳಬಹುದಾಗಿದೆ. ಆದರೆ ಎರಡು ತಾಸಿಗೆ ಹೆಚ್ಚಿನ ಸಮಯ ನೀಡುವಂತಿಲ್ಲ.ಎಂದು ನ್ಯಾಯಾಲಯ ಹೇಳಿದೆ.ಕರ್ನಾಟಕದಲ್ಲಿ ರಾತ್ರಿ  ರಿಂದ 10 ಘಂಟೆಗಳವರೆಗೆ ಮಾತ್ರ ಪಟಾಕಿ ಹಚ್ಚಲ್ಲು ಅವಕಾಶವಿದೆ. ಈ ಕುರಿತು ಸರ್ಕಾರ ಶನಿವಾರ ಸುತ್ತೋಲೆ ಹೊರಡಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com