2.92 ಕೋಟಿ ರು. ಮೊತ್ತದ ಪ್ರಶಸ್ತಿ ಗೆದ್ದ ಬೆಂಗಳೂರು ವಿದ್ಯಾರ್ಥಿ

ಬೆಂಗಳೂರಿನ 16 ವರ್ಷದ ವಿದ್ಯಾರ್ಥಿಯೊಬ್ಬ 2.92 ಕೋಟಿ(4 ಲಕ್ಷ ಅಮೆರಿಕನ್ ಡಾಲರ್) ರುಪಾಯಿ ಮೊತ್ತದ...
ಸಮಯ್ ಗೋಡಿಕ
ಸಮಯ್ ಗೋಡಿಕ
Updated on
ಬೆಂಗಳೂರು: ಬೆಂಗಳೂರಿನ 16 ವರ್ಷದ ವಿದ್ಯಾರ್ಥಿಯೊಬ್ಬ 2.92 ಕೋಟಿ(4 ಲಕ್ಷ ಅಮೆರಿಕನ್ ಡಾಲರ್) ರುಪಾಯಿ ಮೊತ್ತದ 'ದಿ ಬ್ರೇಕ್‌ಥ್ರೂ ಜೂನಿಯರ್‌ ಚಾಲೆಂಜ್‌' ಪ್ರಶಸ್ತಿ ಗೆಲ್ಲುವ ಮೂಲಕ ತನ್ನ ಶಿಕ್ಷಕರಿಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾನೆ. 
ನಗರದ ಕೋರಮಂಗಲದ ನ್ಯಾಷನಲ್‌ ಪಬ್ಲಿಕ್‌ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸಮಯ್‌ ಗೋಡಿಕ, 'ಭೌಗೋಳಿಕ ವಿಜ್ಞಾನ ವಿಡಿಯೋ' ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ್ದಾರೆ. 
ಈ ಸ್ಪರ್ಧೆಯು , ಭೌತಶಾಸ್ತ್ರ, ಗಣಿತ ಮತ್ತು ಲೈಫ್‌ಸೈನ್ಸ್‌ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವುದು ಹಾಗೂ ಸೃಜನಶೀಲ ಆಲೋಚನೆಗಳನ್ನು ಹುಟ್ಟುಹಾಕುವುದು ಇದರ ಪ್ರಮುಖ ಉದ್ದೇಶವಾಗಿದೆ.
ಈ ಸ್ಪರ್ಧೆಗೆ 13 ರಿಂದ 18 ವರ್ಷದ ಒಳಗಿನ ವಿದ್ಯಾರ್ಥಿಗಳಿಂದ ಭೌತಶಾಸ್ತ್ರ ಮತ್ತು ಲೈಫ್‌ ಸೈನ್ಸ್‌ ವಿಷಯಗಳಿಗೆ ಸಂಬಂಧಿಸಿದ 'ನವೀನ ಕಲ್ಪನೆಯ' ವಿಡಿಯೋಗಳನ್ನು ಆಹ್ವಾನಿಸಲಾಗಿತ್ತು.
ಸಮಯ್‌, ಲೈಫ್‌ ಸೈನ್ಸ್‌ ವಿಭಾಗಕ್ಕೆ 'ನರ ರೋಗಿಗಳ ಚಿಕಿತ್ಸೆ'ಗೆ ಸಂಬಂಧಿಸಿದ ವಿಶೇಷ ಪರಿಕಲ್ಪನೆಯ ವಿಡಿಯೋ ಸಲ್ಲಿಸಿದ್ದರು. ಈ ಪರಿಕಲ್ಪನೆಯ ವೈಜ್ಞಾನಿಕ ಸಾಧ್ಯತೆಗಳ ಬಗ್ಗೆ ತಜ್ಞರು ಸಮಗ್ರವಾಗಿ ಪರಿಶೀಲನೆ ನಡೆಸಿ ಪ್ರಶಸ್ತಿಯನ್ನು ಘೋಷಿಸಿದ್ದಾರೆ.
ಈ ಪ್ರಶಸ್ತಿಯಲ್ಲಿ ಸಮಯ್‌, ಒಟ್ಟು 1.8 ಕೋಟಿ ರುಪಾಯಿ ವಿದ್ಯಾರ್ಥಿ ವೇತನ ರೂಪದ ನಗದು ಬಹುಮಾನ ಪಡೆಯಲಿದ್ದು, ಇವರ ಸಾಧನೆಗೆ ಒತ್ತಾಸೆಯಾಗಿ ನಿಂತ ಶಿಕ್ಷಕಿ ಪ್ರಮೀಳ ಮೆನನ್‌ ಅವರಿಗೆ 36 ಲಕ್ಷ ರು. ಹಾಗೂ ಶಾಲೆಗೆ ಒಟ್ಟು 72 ಲಕ್ಷ ರೂ. ಬಹುಮಾನ ಲಭ್ಯವಾಗಲಿದೆ. ಇದರಿಂದ ಅತ್ಯಾಧುನಿಕ ಗುಣಮಟ್ಟದ ಲ್ಯಾಬೋರೇಟರಿ ಈ ಶಾಲೆಯಲ್ಲಿ ತಲೆ ಎತ್ತಲಿದೆ. 
ಇನ್ನು ಈ ಪ್ರಶಸ್ತಿ ಗೆದ್ದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಸಮಯ್‌, ''ಈ ಪ್ರಶಸ್ತಿ ನನಗೆ ಸಿಗುತ್ತದೆ ಎಂದು ಕನಸಿನಲ್ಲೂ ಕಂಡಿರಲಿಲ್ಲ. ನಮ್ಮ ಶಾಲೆಯಲ್ಲಿ ವಿಜ್ಞಾನ ವಿಷಯಕ್ಕೆ ಹೆಚ್ಚು ಒತ್ತು ನೀಡುವ ಮೂಲಕ, ಪರಿಣಾಮಕಾರಿಯಾಗಿ ಭೋಧನೆ ಮಾಡುತ್ತಾರೆ. ಅದರ ಫಲಿತಾಂಶವೇ ಈ ಪ್ರಶಸ್ತಿಯಾಗಿದೆ'' ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com