ಕೇವಲ ಮುಸ್ಲಿಮರ ತೃಪ್ತಿಗಾಗಿ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿದೆ: ಯಡಿಯೂರಪ್ಪ

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ರಾಜ್ಯ ಸರ್ಕಾರ ಸಡಗರದಿಂದ ಆಚರಿಸಲು ಮುಂದಾಗುತ್ತಿದೆ, ಆದರೆ ಇದು ಕೇವಲ ಮುಸ್ಲಿಮರನ್ನು ತೃಪ್ತಿಗೊಳಿಸಲಿಕ್ಕಾಗಿ ಮಾತ್ರ ....
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
Updated on
ಕಾಸರಗೋಡು/ಬೆಂಗಳೂರು: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ರಾಜ್ಯ ಸರ್ಕಾರ ಸಡಗರದಿಂದ ಆಚರಿಸಲು ಮುಂದಾಗುತ್ತಿದೆ, ಆದರೆ ಇದು ಕೇವಲ ಮುಸ್ಲಿಮರನ್ನು ತೃಪ್ತಿಗೊಳಿಸಲಿಕ್ಕಾಗಿ ಮಾತ್ರ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
"ನಾವು ಟಿಪ್ಪು ಜಯಂತಿಯನ್ನು ವಿರೋಧಿಸುತ್ತೇವೆ. ಸರ್ಕಾರ ಈ ಟಿಪ್ಪು ಜಯಂತಿಯನ್ನು ಮುಸ್ಲಿಮ್ ಸಮುದಾಯದ ಜನಾ ತೃಪ್ತಿಗಾಗಿ ಮಾತ್ರ ಆಚರಿಸುತ್ತಿದೆ. ಇದನ್ನು ಯಾರೊಬ್ಬರೂ ಮೆಚ್ಚುವುದಿಲ್ಲ.ಕೆಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರಿಗೆ ಸಹ ಈ ಟಿಪ್ಪು ಜಯಂತಿ ಬಗ್ಗೆ ವಿರೋಧವಿದೆ" ಎ.ಎನ್.ಐ. ಸುದ್ದಿಸಂಸ್ಥೆ ಜತೆ ಮಾತನಾಡಿದ ಯಡಿಯೂರಪ್ಪ ಹೇಳಿದ್ದಾರೆ.
ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತ ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಕೇರಳದಲ್ಲಿ ಬಿಜೆಪಿ ಆಯೋಜಿಸಿರುವ "ಶಬರಿಮಲೆ ಉಳಿಸಿ" ಯಾತ್ರೆಗೆ ಯಡಿಯೂರಪ್ಪ ಗುರುವಾರ ಚಾಲನೆ ನೀಡಿದ್ದಾರೆ. ಕೇರಳದ ಮುತ್ತೂರಿನಿಂದ ಈ ಯಾತ್ರೆ ಪ್ರಾರಂಭವಾಗಲಿದೆ.
ಟಿಪ್ಪು ಬದಲು ಭಾರತ ರತ್ನ ಎಪಿಜೆ ಅಬ್ದುಲ್ ಕಲಾಂ ಜಯಂತಿ ಸರ್ಕಾರ ಆಚರಿಸಬೇಕು ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.
ಇನ್ನೊಂದೆಡೆ ಸುದ್ದಿಗಾರರೊಡನೆ ಮಾತನಾಡಿದ್ ಅಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ "ಬಿಜೆಪಿ ಎಂದಿಗೂ ಸ್ವಾತಂತ್ರ ಹೋರಾಟಗಾರರ ತ್ಯಾಗವನ್ನು ಗೌರವಿಸುವುದಿಲ್ಲ" ಎಂದಿದಾರೆ.
"ಟಿಪ್ಪು ಜಯಂತಿಗೆ ಬಿಜೆಪಿ ಮೊದಲಿನಿಂದ ವಿರೋಧಿಸುತ್ತಾ ಬಂದಿದೆ. ಟಿಪ್ಪು ಸುದೀರ್ಘ ಇತಿಹಾಸ ಹೊಂದಿದ್ದು ಆತನ ಜನ್ಮದಿನ ಆಚರಣೆಯಲ್ಲಿ ಯಾವ ತಪ್ಪಿಲ್ಲ. ಆದರೆ ಬಿಜೆಪಿಗೆ ಕೆಲ ರಾಜಕೀಯ ಅಜೆಂಡಾ ಇದ್ದು ಅವರು ಎಂದಿಗೂ ಹಿಂದೂ ಹಾಗೂ ಮುಸ್ಲಿಮರಲ್ಲಿ ಬೇಧ ತರಲು ಪ್ರಯತ್ನಿಸುತ್ತಾರೆ"
ಕಳೆದ ವರ್ಷ ರಾಷ್ಟ್ರಪತಿಗಳು ಉಭಯ ಸದನವನ್ನುದ್ದೇಶಿಸಿ ಮಾಡಿದ ಭಾಷಣ ಉಲ್ಲೇಖಿಸಿ ಮಾತನಾಡಿದ ಶಿವಕುಮಾರ್ ಟಿಪ್ಪುವಿನ ಹೋರಾಟಕ್ಕೆ ನಾವು ಗೌರವ ಸೂಚಿಸಬೇಕು. ಮೈಸೂರು ಯುದ್ಧದಲ್ಲಿ ತೋರಿದ ಅಸೀಮ ಪರಾಕ್ರಮವನ್ನು ನಾವು ಗೌರವಿಸಲು ಬೇಕು" ಎಂದರು
ಬ್ರಿಟೀಷರ ವಿರುದ್ಧ ಹೋರಾಡಿದ್ದ ಟಿಪ್ಪು ಸುಲ್ತಾನ್ ೧೭೯೯ರಲ್ಲಿ ನಾಲ್ಕನೇ ಮೈಸೂರು ಯುದ್ಧದ ವೇಳೆ ಶ್ರೀರಂಗಪಟ್ಟಣದಲ್ಲಿ ಸಾವನ್ನಪ್ಪಿದ್ದನು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com