ಟಿಬಿ ಜಯಚಂದ್ರ
ರಾಜ್ಯ
ಮೋದಿಯನ್ನು ಜೀವಂತವಾಗಿ ಸುಡಬೇಕಾದ ಸಮಯ ಬಂದಿದೆ: ಟಿಬಿ ಜಯಚಂದ್ರ
ಪ್ರಧಾನಿ ನರೇಂದ್ರ ಮೋದಿಯನ್ನು ಜೀವಂತವಾಗಿ ಸುಡಬೇಕಾದ ಸಮಯ ಬಂದಿದೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಟಿಬಿ ಜಯಚಂದ್ರ ವಿವಾದಾತ್ಮಕ ಹೇಳಿಕೆ ನಿಡಿದ್ದಾರೆ.
ತುಮಕೂರು: ಪ್ರಧಾನಿ ನರೇಂದ್ರ ಮೋದಿಯನ್ನು ಜೀವಂತವಾಗಿ ಸುಡಬೇಕಾದ ಸಮಯ ಬಂದಿದೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಟಿಬಿ ಜಯಚಂದ್ರ ವಿವಾದಾತ್ಮಕ ಹೇಳಿಕೆ ನಿಡಿದ್ದಾರೆ.
"ನೋಟ್ ಬ್ಯಾನ್ ಮಾಡಿದ್ದ ಸಮಯದಲ್ಲಿ ಪ್ರಧಾನಿ ಮೋದಿ ನನಗೆ ಐವತ್ತು ದಿನ ಕಾಲಾವಕಾಶ ಕೊಡಿ. ನಾನು ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಿಲ್ಲವಾದರೆ ನನ್ನನ್ನು ಜೀವಂತವಾಗಿ ಸುಡಿ ಎಂದು ಹೇಳಿದ್ದರು. ಇದೀಗ ಅವರನ್ನು ಜೀವಂತವಾಗಿ ಸುಡುವ ಕಾಲ ಸಮೀಪಿಸಿದೆ" ಎಂದು ಜಯಚಂದ್ರ ಹೇಳಿದ್ದಾರೆ.
ಶುಕ್ರವಾರ (ನವೆಂಬರ್ 8)ಕ್ಕೆ ನೋಟ್ ಬ್ಯಾನ್ ಆಗಿ ಎರಡು ವರ್ಷಗಲಾದ ಹಿನ್ನೆಲೆಯಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಜಯಚಂದ್ರ ಈ ಹೇಳಿಕೆ ನೀಡಿದ್ದಾರೆ. ನೋಟು ನಿಷೇಧದ ವಿರುದ್ಧ ತುಮಕುರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.
"ನೋಟು ನಿಷೇಧದಿಂದ ಎರಡು ವರ್ಷದ ಬಳಿಕವೂ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರಧಾನಿಗಳನ್ನು ಹೋಲಿಸಬಹುದಾದರೆ ಗುಳ್ಳೆ ನರಿಗಷ್ಟೇ ಹೋಲಿಕೆ ಮಾಡಬಹುದು. ಇಂದಿನ ಪ್ರತಿಭಟನೆಗೆ ಕತ್ತೆಗಳನ್ನು ತರುವ ಬದಲು ಗುಳ್ಳೆ ನರಿಗಳನ್ನೇ ತರಬೇಕಿತ್ತು. ಇಂತಹಾ ತಪ್ಪು ನಿರ್ಧಾರಗಳ ತೆಗೆದುಕೊಂಡಿರುವ ಪ್ರಧಾನಿಗಳು ತಕ್ಷಣವೇ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಬೇಕು" ಅವರು ಹೇಳಿದ್ದಾರೆ.
ಟಿಬಿ ಜಯಚಂದ್ರ ಅವರ ಮಾತಿಗೆ ಪ್ರತಿಕಯಿಸಿರುವ ಬಿಜೆಪಿ "ಮೋದಿಯವರನ್ನು ಸುಡಬೇಕು ಎನ್ನುವ ಮೂಲಕ ಜಯಚಂದ್ರ ಪ್ರಧಾನಿಗೆ ಅಗೌರವ ತೋರಿದ್ದಾರೆ. ಅವರ ಕೀಳು ಗುಣಮಟ್ಟದ ಮಾತುಗಳಿಂದ ಪ್ರಧಾನಿ ಹುದ್ದೆಯ ಸ್ಥಾನಕ್ಕೆ ಕುಂದು ಉಂಟಾಗುವಂತೆ ಮಾಡಿದ್ದಾರೆ ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ