ಆರೋಗ್ಯದ ನೆಪಹೇಳಿ ಟಿಪ್ಪು ಜಯಂತಿಯಿಂದ ದೂರವುಳಿದ ಸಿಎಂ: ಮೈತ್ರಿ ಸರ್ಕಾರ ಒಗ್ಗಟ್ಟಿಗೆ ಧಕ್ಕೆ!

: ಮಾಜಿ ಸಿಎಂ ಸಿದ್ದರಾಮಯ್ಯ ಆರಂಭಿಸಿದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಗೈರಾಗಿರುವುದು ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷಗಳ ಸಂಬಂಧಕ್ಕೆ ,,
ಟಿಪ್ಪು ಮತ್ತು  ಕುಮಾರ ಸ್ವಾಮಿ
ಟಿಪ್ಪು ಮತ್ತು ಕುಮಾರ ಸ್ವಾಮಿ
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಆರಂಭಿಸಿದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಗೈರಾಗಿರುವುದು ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷಗಳ ಸಂಬಂಧಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಕೆಲ ಕಾಂಗ್ರೆಸ್ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿಂದೆ ನಡೆದ ವಾಲ್ಮೀಕಿ ಜಯಂತಿಗೂ ಕೂಡ ಸಿಂ ಗೈರಾಗಿದ್ದರು. ಈಗ ಮತ್ತೆ ಆರೋಗ್ಯದ ಕಾರಣ ನೀಡಿ ಟಿಪ್ಪು ಜಯಂತಿಯಿಂದ ಕುಮಾರ ಸ್ವಾಮಿ ದೂರ ಉಳಿದಿದ್ದಾರೆ.
ಸಮ್ಮಿಶ್ರ ಸರ್ಕಾರದ ಸಿಎಂ ನಿರ್ಧಾರದಿಂದ ಕಾಂಗ್ರೆಸ್ ಅಸಮಾಧಾನಗೊಂಡಿದೆ, ಮುಖ್ಯಮಂತ್ರಿ ಕುಮಾರ ಸ್ವಾಮಿ ನೇತೃತ್ವದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯುವುದಾಗಿ ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿತ್ತು, ಆದರೆ ವಿವಾದಾತ್ಮಕ ಟಿಪ್ಪು ಜಯಂತಿ ಆಚರಣೆಯಿಂದ ದೂರ ಉಳಿದು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಮುಖ್ಯಮಂತ್ರಿಗಳ ಪೂರ್ವ ನಿಯೋಜಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಿಎಂ ಟಿಪ್ಪು ಜಯಂತಿಯಲ್ಲಿ ಪಾಲ್ಗೋಳ್ಳಲು ಸಾಧ್ಯವಾಗುತ್ತಿಲ್ಲ, ಸಿಎಂ ಈ ನಿರ್ಧಾರ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಿಗೆ ಪರೋಕ್ಷ ಸಂದೇಶ ನೀಡುವಂತಿದೆಎಂದು ಸಂದೀಪ್ ಶಾಸ್ತ್ರಿ ತಿಳಿಸಿದ್ದಾರೆ.
ಆರೋಗ್ಯ ಕಾರಣದಿಂದಾಗಿ ಸಿಎಂ ಪಾಲ್ಗೋಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ, ವಾಲ್ಮೀಕಿ ಜಯಂತಿ ಹಾಗೂ ಟಿಪ್ಪು ಜಯಂತಿ ಗೆ ಸಿಎಂ ಹಾಜರಾಗದಿರುವು ಕಾಂಗ್ರೆಸ್ ನ ಹಲವು ನಾಯಕರುಗಳ ಆಕ್ರೋಶಕ್ಕೆ ಕಾರಣವಾಗಿದೆ, ವಾಲ್ಮೀಕಿ ಜಯಂತಿ ಈಗಾಗಲೇ ತಪ್ಪು ಸಂದೇಶ ರವಾನಿಸಿದೆ, ಚುನಾವಣಾ ಸಮಯವಾದ್ದರಿಂದ ಮಾಧ್ಯಮಗಳಿಗ ಅನವಾಶ್ಯಕವಾಗಿ ಆಹಾರವಾಯ್ತು. ಇದರಿಂದ ಹಾನಿಯೂ ಆಯ್ತು ಎಂದು ಸಂಪುಟದ ಸಹೋದ್ಯೋಗಿಯೋಬ್ಬರು ಹೇಳಿದ್ದಾರೆ.
ಟಿಪ್ಪು ಜಯಂತಿಗೆ ಗೈರಾಗುವ ಮೂಲಕ ಸಮ್ಮಿಶ್ರ ಸರ್ಕಾರದಲ್ಲಿ ಒಗ್ಗಟ್ಟಿಲ್ಲ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಾಗುತ್ತದೆ. ಜನರೂ ಕೂಡ ಮೈತ್ರಿ ಪಕ್ಷದ ಏಕತೆ ಪ್ರಶ್ನಿಸುವಂತಾಗುತ್ತದೆ ಎಂದು ತಿಳಿಸಿದ್ದಾರೆ.
ಟಿಪ್ಪು ಜಯಂತಿ ಆಚರಿಸಲು ಇಷ್ಟವಿಲ್ಲದಿದ್ದರೇ ಮನೆಯಲ್ಲಿ ಇರುವಂತೆ ನಾವು (ಬಿಜೆಪಿ) ಸಲಹೆ ನೀಡಿದ್ದೆವು, ಅದರಂತೆ ಸಿಎಂ ಮನೆಯಲ್ಲಿದ್ದಾರೆ ಎಂದು ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ಕುಹಕವಾಡಿದ್ದಾರೆ. ಸಿಎಂ ತಮ್ಮನ್ನು ತಾವು ಸೇಫ್ ಮಾಡಿಕೊಂಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಕಳೆದು ಕೊಳ್ಳಲು ಇಷ್ಟವಿಲ್ಲದ ಕುಮಾರ ಸ್ವಾಮಿ ಸದ್ಯಕ್ಕೆ ಸೇಫ್ ಗೇಮ್ ಆಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com