ಸಂಗ್ರಹ ಚಿತ್ರ
ರಾಜ್ಯ
ಮತ್ತೆ ಬದಲಾಯ್ತು ಸಾಹಿತ್ಯ ಸಮ್ಮೇಳನ ದಿನಾಂಕ: ಜ.4ರಿಂದ ಮೂರು ದಿನ ಧಾರವಾಡದಲ್ಲಿ ನುಡಿಜಾತ್ರೆ!
84ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರಿವ ದಿನಾಂಕ ಮತ್ತೆ ಬದಲಾಗಿದೆ. ಇದಕ್ಕೆ ಹಿಂದೆ ಡಿಸೆಂಬರ್ ನಲ್ಲಿ ನಡೆಲಿದೆ ಎನ್ನಲಾಗಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಡೆ...
ಬೆಂಗಳೂರು: 84ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರಿವ ದಿನಾಂಕ ಮತ್ತೆ ಬದಲಾಗಿದೆ. ಇದಕ್ಕೆ ಹಿಂದೆ ಡಿಸೆಂಬರ್ ನಲ್ಲಿ ನಡೆಲಿದೆ ಎನ್ನಲಾಗಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಡೆಗೆ ಜನವರಿ 6ರಿಂದ ಮೂರು ದಿನ ನಡೆಯಲಿದೆ ಎನ್ನ್ಲಾಗಿತ್ತು. ಈಗಿನ ಮಹಾಇತಿಯಂತೆ ಸಮ್ಮೇಳನ ದಿನಾಂಕ ಮತ್ತೆ ಬದಲಾಗಿದ್ದು ಜನವರಿ 6ರ ಬದಲು 4ರಿಂದಲೇ ನುಡಿಜಾತ್ರೆಗೆ ಚಾಲನೆ ಸಿಗಲಿದೆ.
2017ರ ನವೆಂಬರ್ ನಲ್ಲಿ ಮೈಸೂರಿನಲ್ಲಿ ನಡೆದಿದ್ದ 83ನೇ ಸಮ್ಮೇಳನದ ವೇಳೆ ಮುಂದಿನ ಸಮೇಳನವನ್ನು ವಿದ್ಯಾನಗರಿ ಧಾರವಡದಲ್ಲಿ ಹಮ್ಮಿಕೊಳ್ಳುವುದಕ್ಕಾಗಿ ತೀರ್ಮಾನಿಸಲಾಗಿತ್ತು.
ಡಿಸೆಂಬರ್ 7ರಿಂದ ನಡೆಯಬೇಕಾಗಿದ್ದ ಸಮ್ಮೇಳನವನ್ನು ನಡೆಸಲು ಸರಿಯಾದ ಸಿದ್ದತೆ ಮಾಡಿಕೊಳ್ಳುವುದಕ್ಕೆ ಸಮಯಾವಕಾಶದ ಕೊರತೆ ಇರುವ ಕಾರಣ ಒಂದು ತಿಂಗಳ ಕಾಲ ಸಮ್ಮೇಳನವನ್ನು ಮುಂದೂಡಿ ಜನವರಿ 6ರಿಂದ ನಡೆಸಲು ಒಮ್ಮತದ ತೀರ್ಮಾನಕ್ಕೆ ಬರಲಾಗಿತ್ತು.
ಆದರೆ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ "ಸಮ್ಮೇಳನವು ಜನವರಿ 6ರ ಬದಲು 4ಕ್ಕೆ ಪ್ರಾರಂಭಗೊಳ್ಳಲಿದೆ.ಜನವರಿ 8ರಂದು ಸಾರಿಗೆ ಮುಷ್ಕರವಿರಲಿದ್ದು ಕೀಸ್ ಆರ್ ಟಿಸಿ ಸೇರಿ ಬಸ್ ಹಾಗೂ ಸಂಚಾರಿ ವಾಹನ ಸೌಲಭ್ಯಗಳಲ್ಲಿ ವ್ಯತ್ಯಯವಾಗುವ ಸಂಭವವಿದೆ. ಹೀಗಾಗಿ ಸಮ್ಮೇಳನಕ್ಕೆ ಆಗಮಿಸಿದ ಕನ್ನಡಾಭಿಮಾನಿಗಳಿಗೆ ತೊಂದರೆಯಾಗಬಾರದೆನ್ನುವ ಕಾರಣಕ್ಕೆ ಜನವರಿ 4ರಿಂದ ಮೂರು ದಿನಗಳ ಕಾಲ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಗಿದೆ" ಎಂದರು.
ಮೈಸೂರಿನಲ್ಲಿ ನಡೆದಿದ್ದ 83ನೇ ಸಾಹಿತ್ಯ ಸಮ್ಮೇಳನದಲ್ಲಿ 1.5 ಲಕ್ಷ ಮಂದಿ ಭಾಗವಹಿಸಿದ್ದರು. ಇದೇ ರೀತಿ ಧಾರವಾಡದ ಸಮ್ಮೇಳನಕ್ಕೆ ಸಹ ಸುಮಾರು ಎರಡು ಲಕ್ಷ ಜನ ಸೇರುತ್ತಾರೆ ಎನ್ನುವ ನಿರೀಕ್ಷೆ ಇದೆ.
ಧಾರವಾಡದಲ್ಲಿ ನಡೆಯುವ 84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ್ ಕಂಬಾರ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ