ಮೈಸೂರು ಮೇಯರ್ ಪಟ್ಟ : ಸಿದ್ದರಾಮಯ್ಯ ಪ್ರವೇಶದಿಂದ ಕಾಂಗ್ರೆಸ್ ನಲ್ಲಿ ಹೆಚ್ಚಾದ ಭರವಸೆ

ಇದೇ ತಿಂಗಳ 17 ರಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವೇಶದಿಂದಾಗಿ ಪಾಲಿಕೆಯ ಪ್ರತಿಷ್ಠಿತ ಹುದ್ಧೆ ಹಿಡಿಯುವ ಭರವಸೆ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಾಗಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮೈಸೂರು: ಇದೇ ತಿಂಗಳ 17 ರಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ನಡೆಯಲಿದ್ದು,  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವೇಶದಿಂದಾಗಿ ಪಾಲಿಕೆಯ ಪ್ರತಿಷ್ಠಿತ ಹುದ್ಧೆ ಹಿಡಿಯುವ ಭರವಸೆ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಾಗಿದೆ.

ಸಿದ್ದರಾಮಯ್ಯ  ತವರು ನೆಲದಲ್ಲಿಯೇ ಸೋತಿದ್ದರು. ಈಗ ಮೇಯರ್  ಚುನಾವಣೆಯಲ್ಲಿ ಅವರ ಪ್ರವೇಶದಿಂದಾಗಿ  ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಅಸಮಾಧಾನ ಮೂಡಿದ್ದರೂ  ಮೇಯರ್ ಪಟ್ಟದ  ವಿಚಾರದಲ್ಲಿ ಸಿದ್ದರಾಮಯ್ಯ   ತಮ್ಮ ಪ್ರಾಬಲ್ಯ ಮೆರೆಯುವ ಸಾಧ್ಯತೆ ಕಂಡುಬರುತ್ತಿದೆ

65 ವಾರ್ಡ್ ಗಳನ್ನು ಹೊಂಡಿರುವ ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 22 ಸ್ಥಾನಗಳನ್ನು ಹೊಂದುವ ಮೂಲಕ ಅತಿ ದೊಡ್ಡ ಪಕ್ಷವಾಗಿದ್ದರೆ. ಕಾಂಗ್ರೆಸ್ 20 ಹಾಗೂ ಜೆಡಿಎಸ್ 19 ಸ್ಥಾನಗಳನ್ನು ಹೊಂದಿವೆ. ಸಿದ್ದರಾಮಯ್ಯ ಕಾರ್ಪೋರೇಟರ್  ಜೊತೆಗೆ ನಡೆಸಿದ ಮಾತುಕತೆ ವೇಳೆಯಲ್ಲಿ ಕಾಂಗ್ರೆಸ್ ಮೇಯರ್ ಪಟ್ಟ ಸಿಗಲಿದೆ ಎಂಬ ಭರವಸೆ ನೀಡಿದ್ದಾರೆ.

ಮೇಯರ್ ಪಟ್ಟ ವಿಚಾರದಲ್ಲಿ ಅಗತ್ಯವಾದರೆ  ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಜೊತೆಗೆ ಮಾತುಕತೆ ನಡೆಸುವುದಾಗಿ  ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಪೋರೇಟರ್ ಗಳಿಗೆ ತಿಳಿಸಿದ್ದಾರೆ.

ಮೈಸೂರು ಮಹಾನಗರ ಅಭಿವೃದ್ದಿಗಾಗಿ 4 ಸಾವಿರ ಕೋಟಿ ರೂ. ವೆಚ್ಚ ಮಾಡಿದ್ದರೂ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಪ್ರದರ್ಶನಕ್ಕೆ  ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ,  ಮೇಯರ್ ಚುನಾವಣೆ ಸಂಬಂಧ ಜಿಲ್ಲೆಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com