ಗದಗ ಜಿಲ್ಲೆಯ ಈ ಸರ್ಕಾರಿ ಶಾಲೆ ಮಕ್ಕಳಿಗೆ ಮಗ್ಗಿ ಎಂದರೆ ಸಲೀಸು!

ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲಿ ಇಂದಿಗೂ ಅಸಡ್ಡೆಯೇ. ಸರ್ಕಾರಿ ಶಾಲೆಗಳಲ್ಲಿ ಚೆನ್ನಾಗಿ ಹೇಳಿಕೊಡುವುದಿಲ್ಲ...
ಗದಗ ಜಿಲ್ಲೆಯ ನಾರಾಯಣಪುರ ಸರ್ಕಾರಿ ಶಾಲೆಯಲ್ಲಿ ಎರಡೂ ಕೈಗಳಲ್ಲಿ ಬರೆಯುತ್ತಿರುವ ವಿದ್ಯಾರ್ಥಿನಿ
ಗದಗ ಜಿಲ್ಲೆಯ ನಾರಾಯಣಪುರ ಸರ್ಕಾರಿ ಶಾಲೆಯಲ್ಲಿ ಎರಡೂ ಕೈಗಳಲ್ಲಿ ಬರೆಯುತ್ತಿರುವ ವಿದ್ಯಾರ್ಥಿನಿ

ಗದಗ: ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲಿ ಇಂದಿಗೂ ಅಸಡ್ಡೆಯೇ. ಸರ್ಕಾರಿ ಶಾಲೆಗಳಲ್ಲಿ ಚೆನ್ನಾಗಿ ಹೇಳಿಕೊಡುವುದಿಲ್ಲ, ಇಂಗ್ಲಿಷ್ ಬರುವುದಿಲ್ಲ ಎಂಬ ಅಭಿಪ್ರಾಯ.

ಗದಗ ಜಿಲ್ಲೆಯ ನಾರಾಯಣಪುರ ಗ್ರಾಮದ  ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಕಲಿಕೆಯನ್ನು ಹೆಚ್ಚು ಸುಲಭವಾಗಿ ಮತ್ತು ಆಸಕ್ತಿದಾಯಕವಾಗಿ ಹೇಳಿಕೊಡುತ್ತಾರೆ. ಈ ಶಾಲೆಯ ಕಲಿಕೆ ಮತ್ತು ಬೋಧನೆ ವಿಧಾನ ಬೇರೆ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿದೆ.

ನಾವು ಗ್ರಾಮೀಣ ಮಕ್ಕಳಿಗೆ ಗಣಿತದ ಬಗ್ಗೆ ಭದ್ರ ಬುನಾದಿ ಹಾಕುತ್ತೇವೆ, ಪ್ರತಿದಿನ ಅಪರಾಹ್ನ 3.50ರಿಂದ 4.30ರವರೆಗೆ ಮಗ್ಗಿ ಸುಗ್ಗಿ ಎಂದು ನಾರಾಯಣಪುರ ಉನ್ನತ ಪ್ರಾಥಮಿಕ ಶಾಲೆಯಲ್ಲಿ ಹೇಳಿಕೊಡುತ್ತಾರೆ, ಇದರಿಂದ ಆ ಶಾಲೆಯ ಮಕ್ಕಳಲ್ಲಿ ಗಣಿತ ಕಲಿಕೆಯ ಮಟ್ಟ ಹೆಚ್ಚಾಗಿದೆ. ಕಳೆದ ಏಳು ವರ್ಷಗಳಿಂದ ಇದನ್ನು ಹೇಳಿಕೊಡಲಾಗುತ್ತಿದೆ ಎನ್ನುತ್ತಾರೆ ಶಿಕ್ಷಕರು.

ಏನಿದು ಮಗ್ಗಿ ಸುಗ್ಗಿ: ಈ ಶಾಲೆಯ ಮಕ್ಕಳು 50ರವರೆಗೆ ಮಗ್ಗಿಯನ್ನು ಕ್ರಮ ಮತ್ತು ರಿವರ್ಸ್ ಆರ್ಡರ್ ನಲ್ಲಿ(ಗುಣಾಕಾರ ಮಗ್ಗಿ ಪಠಣ) ಕಲಿಯುತ್ತಾರೆ. ಸಣ್ಣ ತರಗತಿಯ ಮಕ್ಕಳು ಸಹ 25ರವರೆಗೆ ಮಗ್ಗಿ ಹೇಳುತ್ತಾರೆ. ಸರಿಯಾಗಿ ಕಲಿಯಲು ಸಾಧ್ಯವಾಗದ ಮಕ್ಕಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.

ಮಗ್ಗಿ ಕಲಿಯುವುದನ್ನು ನಾವು ಬಹಳ ಇಷ್ಟಪಡುತ್ತೇವೆ. ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ನಾನು 50 ಸಂಖ್ಯೆಯವರೆಗೆ ಸುಲಭವಾಗಿ ಮಗ್ಗಿ ಹೇಳುತ್ತೇನೆ. ಇದರಿಂದ ಗಣಿತದಲ್ಲಿ ಕೂಡು, ಕಳೆ, ಗುಣಿಸು, ಭಾಗಿಸು ಸುಲಭವಾಗಿ ಆಗುತ್ತದೆ ಎನ್ನುತ್ತಾಳೆ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಅಂಬಿಕಾದೇವಿ ಮಾಳಿಪಾಟೀಲ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com