ಜೂನ್ ನಲ್ಲಿ ಕಾಣಿಸಿಕೊಂಡ ಕ್ಯಾನ್ಸರ್, ಆರು ತಿಂಗಳಿಗೆ ಅನಂತ್ ಕುಮಾರ್ ಬಲಿ: ಘಟನಾವಳಿ ಬಿಚ್ಚಿಟ್ಟ ವೈದ್ಯರು!

ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ನಿಧನರಾಗಿದ್ದಾರೆ, ಜೂನ್ ತಿಂಗಳಲ್ಲಿ ಮೊದಲಿಗೆ ಅನಂತ್ ಕುಮಾರ್ ಅವರಿಗೆ ...
ಅನಂತ್ ಕುಮಾರ್
ಅನಂತ್ ಕುಮಾರ್
Updated on
ಬೆಂಗಳೂರು: ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ನಿಧನರಾಗಿದ್ದಾರೆ, ಜೂನ್ ತಿಂಗಳಲ್ಲಿ ಮೊದಲಿಗೆ ಅನಂತ್ ಕುಮಾರ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು,  ಕೂಡಲೇ ಬಸವನಗುಡಿಯಲ್ಲಿರುವ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಯಿತು.
ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ಅನಂತ್ ಪತ್ನಿ ತೇಜಸ್ವಿನಿ ಕೂಡ ಟ್ರಸ್ಟಿಯಾಗಿದ್ದಾರೆ,. ಆದರೆ ಅಲ್ಲಿನ ಚಿಕಿತ್ಸೆಯಿಂದ ಅನಂತ ಕುಮಾರ್ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣಲಿಲ್ಲ,  ಹೀಗಾಗಿ ನ್ಯೂಯಾರ್ಕ್ ನ ಮೆಮೋರಿಯಲ್ ಸ್ಲೋನ್ ಕೆಟ್ಟರಿಂಗ್ ಕ್ಯಾನ್ಸರ್ ಸೆಂಟರ್ ಗೆ ಸೆಪ್ಟಂಬರ್ ತಿಂಗಳಲ್ಲಿ ದಾಖಲಿಸಿಲಾಯಿತು.
ಅಕ್ಟೋಬರ್ 20 ರವರೆಗೆ ಅನಂತ್ ಸುಮಾರು 20 ದಿನಗಳ ಕಾಲ ಅಲ್ಲಿಯೇ ಇದ್ದರು. ಅವರಿಗೆ ನೀಡಿದ ಚಿಕಿತ್ಸೆಯಿಂದ ಯಾವುದೇ ಪ್ರಯೋಜನವಾಗಲಿಲ್ಲ, ಹೀಗಾಗಿ ಅವರು ವಾಪಸ್ ಭಾರತಕ್ಕೆ ಬರಲು ನಿರ್ಧರಿಸಿದರು, ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಾವು ಚಿಕಿತ್ಸೆ ಮುಂದುವರಿಸಿದೆವು, ಆದರೆ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗಲಿಲ್ಲ, ಕಾಯಿಲೆ ಮತ್ತಷ್ಟು ಉಲ್ಬಣಗೊಂಡಿತು. ಇತ್ತೀಚೆಗೆ ಅಮೆರಿಕ ಬಿಡುಗಡೆ ಮಾಡಿದ ಹೊಸ ಔಷಧಿ ಕೂಡ ಅವರಿಗೆ ನೀಡಲಾಗಿತ್ತು, ಆದರೆ ಪ್ರಯೋಜನವಾಗಲಿಲ್ಲ ಎಂದು ಶಂಕರ ಕ್ಯಾನ್ಸರ್ ಫೌಂಡೇಶನ್  ವೈದ್ಯ ಡಾ. ಬಿ.ಎಸ್ ಶ್ರೀನಾಥ್ ಹೇಳಿದ್ದಾರೆ.
40 ವರ್ಷದ ನಂತರ ವರ್ಷಕ್ಕೆ ಒಮ್ಮೆಯಾದರೂ ಇಡೀ ದೇಹವನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬುದನ್ನು ಹಲವರು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ನಾವು ಪರೀಕ್ಷೆ ಮಾಡಿದಾಗ ಮಾತ್ರವಷ್ಟೇ ಕ್ಯಾನ್ಸರ್ ಪತ್ತೆ ಹಚ್ಚಲು ಸಾಧ್ಯ, ಆರಂಭಿಕ ಹಂತದಲ್ಲಿ ಅದರ ಯಾವುದೇ ಗುಣ ಲಕ್ಷಣಗಳು ಗೋಚರಿಸುವುದಿಲ್ಲ., 
ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿಯೇ ಅನಂತ್ ಕುಮಾರ್ ಆವರಿಗೆ ಕಾಯಿಲೆ ಕಾಣಿಸಿಕೊಂಡಿದೆ, ಆ ವೇಳೆಯಲ್ಲಿ ಅವರಿಗೆ ವಿಪರೀತ ಕೆಮ್ಮು ಕಾಣಿಸಿಕೊಂಡಿತ್ತು. ಉತ್ತರ ಕರ್ನಾಟದ ಭಾಗದಲ್ಲಿ ಹೆಚ್ಚಿನ ದೂಳಿನ ಪ್ರದೇಶದಲ್ಲಿ ಪ್ರಚಾರ ಕೈಗೊಂಡಿದ್ದರಿಂದ ಕೆಮ್ಮು ಹೆಚ್ಚಾಗಿದೆ ಎಂದು ಅವರು ಬಾವಿಸಿದ್ದರು, ಸೋಮವಾರ ಬೆಳಗ್ಗೆ 1.45 ಗೆ ಅವರು ಕೊನೆಯುಸಿರೆಳೆದರು ಎಂದು ಶ್ರೀನಾಥ್ ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com