ಕರ್ನಾಟಕ ಹೈಕೋರ್ಟ್
ರಾಜ್ಯ
ಸುಪ್ರೀಂ ಕೋರ್ಟ್, ಹೈ ಕೋರ್ಟ್ ತೀರ್ಪುಗಳ ಸಂಗ್ರಹ ಪುಸ್ತಕ ಬಿಡುಗಡೆ
ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎಸ್ ಎನ್ ಸತ್ಯನಾರಾಯಣ ಅಡ್ವೊಕೇಟ್ ...
ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎಸ್ ಎನ್ ಸತ್ಯನಾರಾಯಣ ಅಡ್ವೊಕೇಟ್ ಅಸೋಸಿಯೇಷನ್ ಏರ್ಪಡಿಸಿದ್ದ 'ಕಂಪ್ಲೀಟ್ ಲಾ ಡೈಜೆಸ್ಟ್ ಆಫ್ ಸುಪ್ರೀಂ ಕೋರ್ಟ್ ಅಂಡ್ ಕರ್ನಾಟಕ ಕೇಸಸ್ 2010-2018' ಪುಸ್ತಕ ಬಿಡುಗಡೆ ಮಾಡಿದರು.
ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ ಸುಮಾರು 40 ಸಾವಿರ ತೀರ್ಪುಗಳನ್ನು ಸಂಗ್ರಹಿಸಿದ ಪುಸ್ತಕ ಇದಾಗಿದೆ. ಪುಸ್ತಕದಲ್ಲಿ ಸಂಕ್ಷಿಪ್ತ ಪೀಠಿಕೆ ಕೂಡ ಇದ್ದು, ಅದನ್ನು ವ್ಯವಸ್ಥಿತವಾಗಿ ಮತ್ತು ಕಾಲಾನುಕ್ರಮವಾಗಿ ಇಡಲಾಗಿದ್ದು ಕಳೆದ 8 ವರ್ಷಗಳಲ್ಲಿ ನೀಡಿರುವ ತೀರ್ಪುಗಳನ್ನು ಜನರು ಕೂಡಲೇ ಪತ್ತೆಹಚ್ಚಬಹುದು.
ಪುಸ್ತಕವನ್ನು ಹೆಚ್ ವಿ ನಾಗರಾಜ ರಾವ್ ಮತ್ತು ಅವರ ಪುತ್ರ ಎನ್ ರಾಘವೇಂದ್ರ ರಾವ್ ಸಂಪಾದಿಸಿದ್ದು, ಈ ಪುಸ್ತಕ ನ್ಯಾಯಾಧೀಶರಿಗೆ ಮತ್ತು ವಕೀಲರಿಗೆ ಬೇಗನೆ ತೀರ್ಪು ನೀಡಲು ಅನುಕೂಲವಾಗುತ್ತದೆ ಎಂದು ನ್ಯಾಯಮೂರ್ತಿ ಕೆ ಎನ್ ಫಣೀಂದ್ರ ತಿಳಿಸಿದ್ದಾರೆ. ಏಳು ಸಂಪುಟಗಳಲ್ಲಿ ಪುಸ್ತಕ ಪ್ರಕಟವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ