ಕೆಆರ್ ಎಸ್ ನಲ್ಲಿ ಅತಿ ಎತ್ತರವಾದ ಕಾವೇರಿ ಪ್ರತಿಮೆ: ರಾಜಕೀಯ ಗಿಮಿಕ್, ನೆಟ್ಟಿಗರ ಟ್ವಿಟ್ಟರಾರತಿ!

ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್ ಆಸ್ ಜಲಾಶಯದ ಬೃಂದಾವನ್ ಗಾರ್ಡನ್ ನಲ್ಲಿ ಅತಿ ಎತ್ತರವಾದ ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾಡುವ ಸರ್ಕಾರದ ಪ್ರಸ್ತಾವನೆ ...
ಕಾವೇರಿ ಪ್ರತಿಮೆ (ಸಂಗ್ರಹ ಚಿತ್ರ)
ಕಾವೇರಿ ಪ್ರತಿಮೆ (ಸಂಗ್ರಹ ಚಿತ್ರ)
ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್ ಆಸ್ ಜಲಾಶಯದ ಬೃಂದಾವನ್ ಗಾರ್ಡನ್ ನಲ್ಲಿ  ಅತಿ ಎತ್ತರವಾದ ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾಡುವ ಸರ್ಕಾರದ ಪ್ರಸ್ತಾವನೆ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ,
ಈ ಯೋಜನೆಯಿಂದ ಸಾಂಸ್ಕೃತಿ ಪರಂಪರೆಗೆ ಧಕ್ಕೆಯಾಗುತ್ತದೆ ಎಂದು ಮೈಸೂರಿಗರು ಅಭಿಪ್ರಾಯವಾಗಿದೆ, ಇದೊಂದು ಕೀಳುಮಟ್ಟದ ರಾಜಕೀಯವಾಗಿದ್ದು, ಕಾವೇರಿ  ಹೆಸರಿನಲ್ಲಿ ಹಣ ವ್ಯರ್ಥ ಮಾಡುವ ಯೋಜನೆ ಎಂದು ಟ್ವಿಟ್ಟರಿಗರು ಕಿಡಿಕಾರಿದ್ದಾರೆ.
ಈ ಇಡೀ ಯೋಜನೆಗೆ ಹಣ ಖರ್ಚು ಮಾಡುವುದು ವ್ಯರ್ಥ. ಕೆಆರ್ ಎಸ್ ಪ್ರವಾಸೋದ್ಯಮ ಸೈಟ್ ಅಲ್ಲ, ಡಿಸ್ನಿ ಲ್ಯಾಂಡ್ ನಂತ ಪಾರ್ಕ್ ನಿರ್ಮಾಣ ಮಾಡುವುದು ಅನಾವಶ್ಯಕ ಎಂದು ಮೈಸೂರಿನ ವಕೀಲ ಸಿ,ಎಸ್ ಸುರೇಶ್ ಹೇಳಿದ್ದಾರೆ.
ಜಲಾಶಯದ ಸುತ್ತಮುತ್ತ ನಿರ್ಮಾಣ ಕಾಮಗಾರಿ ಕೈಗೊಳ್ಳುವುದರಿಂದ ಪರಿಸರಕ್ಕೆ ಹಾನಿಯಾಗುವ ಸಾಧ್ಯತೆಯಿದೆ, ಪರಿಸರ ವಿಜ್ಞಾನಕ್ಕೆ ಹಾನಿಯಾಗುವ ಸಾಧ್ಯತೆಯಿರುವುದರಿಂದ ಇಲ್ಲಿ ನಿರ್ಮಾಣ ಕಾಮಗಾರಿ ಅನುಮತಿ ಸಿಗುವುದೇ ಎಂಬುದನ್ನು ಕಾದು ನೋಡಬೇಕು ಎಂದು ಮೈಸೂರಿ ವನ್ಯಜೀವಿ ವಾರ್ಡನ್ ರಾಜ್ ಕುಮಾರ್ ಡಿ, ಅಭಿಪ್ರಾಯ ಪಟ್ಟಿದ್ದಾರೆ.
ಈ ಯೋಜನೆ ಪ್ರಸ್ತಾವನೆ ರಾಜಕೀಯ ಪ್ರೇರಿತವಾಗಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಕಾವೇರಿ ಮಾತೆಯ ಪ್ರತಿಮೆಯನ್ನು ಸರ್ಕಾರದ ಹಣದಲ್ಲಿ ನಿರ್ಮಿಸಲಾಗುವುದಿಲ್ಲ, ಖಾಸಗಿ- ಸರ್ಕಾರಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಸಚಿವ ಡಿ.ಕೆ ಶಿವಕುಮಾರ್ ಸ್ಪಷ್ಟ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com