
ಬೆಂಗಳೂರು: ದೇಶದಲ್ಲಿಯೇ ಅತಿದೊಡ್ಡ ಜಿಎಸ್ ಟಿ ನಕಲಿ ಸರಕುಪಟ್ಟಿ ಹಗರಣ ಎಂದು ಹೇಳಲಾಗುತ್ತಿರುವ ಜಿಎಸ್ ಟಿ ನಕಲಿ ಸರಕುಪಟ್ಟಿ ಹಗರಣಕ್ಕೆ ಸಂಬಂಧಿಸಿದಂತೆ ಸುಹೈಲ್ ಎಂಬ ತೆರಿಗೆ ಸಲಹೆಗಾರನ ಕೈವಾಡವಿದೆ ಎಂದು ಶಂಕಿಸಲಾಗಿದೆ.
ಬಿ ಕಾಂ ಪದವೀಧರನಾಗಿರುವ ಸುಹೈಲ್ ಕಳೆದೊಂದು ದಶಕದಿಂದ ತೆರಿಗೆ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದು ದೇಶದ ಹೊಸ ತೆರಿಗೆ ವ್ಯವಸ್ಥೆಯ ಜಟಿಲತೆಗಳ ಬಗ್ಗೆ ಜ್ಞಾನವನ್ನು ಹೊಂದಿದ್ದನು.
ಸುಮಾರು 1200 ಕೋಟಿ ರೂಪಾಯಿ ಸರಕುಪಟ್ಟಿಯ ನಕಲು ಮಾಡಿರುವ ಹಗರಣದ ಹಿಂದೆ ಬಾಷಾ ಎಂಬ ಚಿಂದಿ ವ್ಯಾಪಾರಿ ಕೂಡ ಇದ್ದಾನೆ ಎನ್ನಲಾಗುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಸರ್ಕಾರಕ್ಕೆ ಜಿಎಸ್ ಟಿ ನೀಡದೆ ವಂಚನೆಯೆಸಗಲು ನೋಡಿದ್ದರು ಎಂದು ಹೇಳುತ್ತಾರೆ.
ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಹಫಿಝುರ್ ಎಂಬ ಮತ್ತೊಬ್ಬಾತ ಇದ್ದು ಆತ ಸುಹೈಲ್ ಜೊತೆ ತೆರಿಗೆ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದ. ಕಳೆದ 10 ತಿಂಗಳಿನಿಂದ ಈ ಆರೋಪಿಗಳು ಹಗರಣದಲ್ಲಿ ವಂಚನೆಯಲ್ಲಿ ತೊಡಗಿದ್ದು ಎರಡು ತಿಂಗಳ ಹಿಂದೆ ಬೆಳಕಿಗೆ ಬಂದಿತು ಎಂದು ಬೆಂಗಳೂರು ದಕ್ಷಿಣ ವಿಭಾಗದ ಜಿಎಸ್ ಟಿ ಆಯುಕ್ತರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
Advertisement