22 ತಿಂಗಳ ನಂತರ ಮೈಸೂರು ವಿವಿಗೆ ನೂತನ ಉಪಕುಲಪತಿ ನೇಮಕ

22 ತಿಂಗಳಿಂದ ಖಾಲಿಯಿದ್ದ ಮೈಸೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯಾಗಿ ಮಾನಸ ಗಂಗೋತ್ರಿ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಪ್ರಾಧ್ಯಾಪಕ ...
ಮೈಸೂರು ವಿವಿ
ಮೈಸೂರು ವಿವಿ
ಮೈಸೂರು/ಬೆಂಗಳೂರು:  22 ತಿಂಗಳಿಂದ ಖಾಲಿಯಿದ್ದ ಮೈಸೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯಾಗಿ ಮಾನಸ ಗಂಗೋತ್ರಿ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಪ್ರಾಧ್ಯಾಪಕ ಪ್ರೊ.ಜಿ.ಹೇಮಂತ್‌ ಕುಮಾರ್‌ ಅವರನ್ನು ರಾಜ್ಯಪಾಲರು ನೇಮಿಸಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ. 
ಸಿಎಂ ಕುಮಾರ ಸ್ವಾಮಿ ವಿಶ್ರಾಂತ ಕುಲಪತಿ ಪ್ರೊ.ನಾರಾಯಣ ಸ್ವಾಮಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು.ಶೋಧನಾ ಸಮಿತಿ ಮೂವರು ಹೆಸರನ್ನು ನ.13ರಂದು ಶಿಫಾರಸು ಮಾಡಿ ರಾಜ್ಯ ಸರಕಾರಕ್ಕೆ ಕಳುಹಿಸಿ ಕೊಟ್ಟಿತ್ತು. ಇದೀಗ ಪ್ರೊ.ಜಿ.ಹೇಮಂತ್‌ ಕುಮಾರ್‌ ಹೆಸರನ್ನು ರಾಜ್ಯಪಾಲರು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. 
ಸಮಿತಿಗೆ ಒಟ್ಟು 82 ಅರ್ಜಿಗಳು ಬಂದಿದ್ದವು. ಅದರಲ್ಲಿ ಮೂವರ ಹೆಸರನ್ನು ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿತ್ತು. ಅಂತಿಮವಾಗಿ ಪ್ರೊ.ಜಿ.ಹೇಮಂತ್‌ ಕುಮಾರ್‌ ಅವರನ್ನು ರಾಜ್ಯಪಾಲರು ನೇಮಿಸಿ ಆದೇಶ ಹೊರಡಿಸಿದ್ದಾರೆ. 
ಹೇಮಂತ್ ಕುಮಾರ್ ಅವರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು ಲಕ್ಷ್ಮಿಪುರಂ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಹಾಗೂ ಜೆಎಸ್ ಎಸ್ ಮತ್ತು ಶಾರದಾ ಹೈಸ್ಕೂಲ್ ನಲ್ಲಿ ವಿಧ್ಯಾಬ್ಯಾಸ ಮಾಡಿದ್ದರು, ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ
ಮೈಸೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಮೊದಲ ಬ್ಯಾಚ್‌ನ ವಿದ್ಯಾರ್ಥಿ ಪೊ›. ಹೇಮಂತ್‌ ಕುಮಾರ್‌ ಅವರು ಒಟ್ಟು 333 ಪ್ರಬಂಧ ಮಂಡನೆ ಮಾಡಿದ್ದಾರೆ. 20 ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶಕರಾಗಿದ್ದಾರೆ. ಮೈಸೂರು ವಿವಿ ಹಾಗೂ ಚೀನಾ ವಿದ್ಯಾರ್ಥಿಗಳ ಜತೆಗಿನ ವಿದ್ಯಾಭ್ಯಾಸ ಒಡಂಬಡಿಕೆ ಯೋಜನೆಯ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ.
ಮೈಸೂರು ವಿವಿಗೆ ಅಂತರ್ಜಾಲ ಸಂಪರ್ಕ ನಿರ್ವಹಣೆ ಸಂಬಂಧ ನೆಚ್‌ ವರ್ಕಿಂಗ್‌ ಯೋಜನೆ ಸಿದ್ಧಪಡಿಸಿದ್ದಾರೆ. ಜತೆಗೆ ಸೂಪರ್‌ ಕಂಪ್ಯೂಟರ್‌ ಸ್ಥಾಪನೆಯ ಹಿಂದಿನ ರೂವಾರಿ ಕೂಡ ಆಗಿದ್ದಾರೆ.
ಉಪ ಕುಲಪತಿಯಾಗಿ ನೇಮಕವಾಗುವುದನ್ನು ನಾನು ಯಾವತ್ತೂ ನೆನೆಸಿರಲಿಲ್ಲ, ತಮಗೆ ಎಲ್ಲರು ಸಹಕಾರ ನೀಡಬೇಕೆಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com