ಇಂದು ಸುವರ್ಣ ಸೌಧದ ಗೇಟ್ ಮುರಿಯುತ್ತಾರೆ ಅಂದರೆ ಏನು ಅರ್ಥ? ಲಾರಿ ನುಗ್ಗಿಸಿದವರು ಯಾರೂ ರೈತರಲ್ಲ, ದರೋಡೆಕೋರರು ಎಂಬ ಸಿಎಂ ಹೇಳಿಕೆಗೆ ಜಯಶ್ರೀ ಎನ್ನುವ ರೈತ ಮಹಿಳೆ ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಬೆಳಗಾವಿಗೆ ಬನ್ನಿ ನಾವು ರೈತರಾ ಅಲ್ಲವೋ ಎಂಬುದನ್ನ ತೋರಿಸುತ್ತೇವೆ. 4 ವರ್ಷದಿಂದ ಎಲ್ಲಿ ಮಲಗಿದ್ದೆ ಎಂಬ ಹೇಳಿಕೆಗೂ ಪ್ರತಿಕ್ರಿಯೆ ನೀಡಿರುವ ರೈತ ಮಹಿಳೆ 4 ವರ್ಷದಿಂದ ಅಲ್ಲ 10 ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇನೆ, ಸಿಎಂ ಕುಮಾರಸ್ವಾಮಿ ಹೆಣ್ಣು ಕುಲಕ್ಕೇ ಅವಮಾನ ಮಾಡಿದ್ದಾರೆ. ಯಾವ ನೈತಿಕತೆ ಮೇಲೆ ಈ ರೀತಿ ಮಾತನಾಡಿದ್ದಾರೆ ಎಂದು ಜಯಶ್ರೀ ಪ್ರಶ್ನಿಸಿದ್ದಾರೆ.