ಪೊಲೀಸರ ಭಯದಿಂದಾಗಿ ಮೃತ ತಂದೆಯ ಅಂತ್ಯ ಸಂಸ್ಕಾರಕ್ಕೆ ಗೈರಾದ ನಕ್ಸಲ್ ಕೃಷ್ಣಮೂರ್ತಿ

ನಕ್ಸಲ್‌ ಮುಖಂಡ ಬಿ.ಜಿ.ಕೃಷ್ಣಮೂರ್ತಿ ಅವರ ತಂದೆ, ನೆಮ್ಮಾರ್‌ ಗ್ರಾ.ಪಂ. ವ್ಯಾಪ್ತಿಯ ನೆಮ್ಮಾರ್‌ ಎಸ್ಟೇಟ್‌ನ ಕಾನು ಗೋಪಾಲಯ್ಯ(ಶನಿವಾರ ಬೆಳಗ್ಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ನಕ್ಸಲ್‌ ಮುಖಂಡ ಬಿ.ಜಿ.ಕೃಷ್ಣಮೂರ್ತಿ ಅವರ ತಂದೆ, ನೆಮ್ಮಾರ್‌ ಗ್ರಾ.ಪಂ. ವ್ಯಾಪ್ತಿಯ ನೆಮ್ಮಾರ್‌ ಎಸ್ಟೇಟ್‌ನ ಕಾನು ಗೋಪಾಲಯ್ಯ(81) ಶನಿವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. 
ಗೋಪಾಲಯ್ಯ ಅವರಿಗೆ ಪತ್ನಿ, ಪುತ್ರ ಬಿ.ಜಿ.ಕೃಷ್ಣಮೂರ್ತಿ ಹಾಗೂ ಐವರು ಪುತ್ರಿಯರು ಇದ್ದಾರೆ. ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿದ್ದ ಗೋಪಾಲಯ್ಯ ವರ್ಷದಿಂದಲೂ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಇತ್ತೀಚೆಗೆ ಇಲ್ಲಿನ ಧನ್ವಂತರಿ ಆಸ್ಪತ್ರೆಗೆ ದಾಖಲಾಗಿದ್ದರು. 
ಗೋಪಾಲಯ್ಯ ಅವರ ಒಬ್ಬನೇ ಪುತ್ರ ಕೃಷ್ಣಮೂರ್ತಿ ನಕ್ಸಲ್‌ ಚಟುವಟಿಕೆಯಲ್ಲಿರುವುದರಿಂದ ಕುಟುಂಬದ ಸಂಬಂಧ ಕಡಿದುಕೊಂಡಿದ್ದಾರೆ. ಮಗ ದೂರವಾಗಿದ್ದರಿಂದ ತೀವ್ರ ನೊಂದಿದ್ದ ಗೋಪಾಲಯ್ಯ ಕೊನೆ ಕ್ಷಣದಲ್ಲಿ ಪುತ್ರನ ಬಗ್ಗೆ ಕನವರಿಸುತ್ತಿದ್ದರು. 
ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೋಳ್ಳಲು ಕೃಷ್ಣಮೂರ್ತಿ ಬರುತ್ತಾನೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪೊಲೀಸರ ಭೀತಿಯಿಂದಾಗಿ ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೋಳ್ಳಲಿಲ್ಲ.
ಬಿ.ಜಿ.ಕೃಷ್ಣಮೂರ್ತಿ ಸ್ಥಳಿಯ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಮುಗಿಸಿದ ನಂತರ ಎಲ್‌ಎಲ್‌ಬಿ ಶಿಕ್ಷ ಣವನ್ನು ಶಿವಮೊಗ್ಗದಲ್ಲಿ ಪಡೆದಿದ್ದರು. ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಗುಣ ಬೆಳೆಸಿಕೊಂಡು, ಮಾವೋ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದರು. 2000ರ ಆಸುಪಾಸಿನಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ ಚುರುಕಾಗಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯದಿಂದ ನಕ್ಸಲ್‌ ಪರ ಆಕರ್ಷಿತರಾಗಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com