ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕರು ರಾಜಕಾರಣಿಗಳು:ಕಬ್ಬು ಬೆಳೆಗಾರರ ಈ ಸ್ಥಿತಿಗೆ ಅವರೇ ಕಾರಣ!

ಕಬ್ಬು ಬೆಳೆಗಾರರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಗೊಳ್ಳುತ್ತಿದೆ, ರಾಜಕಾರಣಿಗಳ ಮಾಲೀಕತ್ವದ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಹಣವನ್ನು ...
ಬಾಕಿ ಪಾವತಿಗಾಗಿ ಒತ್ತಾಯಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ
ಬಾಕಿ ಪಾವತಿಗಾಗಿ ಒತ್ತಾಯಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ
ಬೆಳಗಾವಿ: ಕಬ್ಬು ಬೆಳೆಗಾರರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಗೊಳ್ಳುತ್ತಿದೆ, ರಾಜಕಾರಣಿಗಳ ಮಾಲೀಕತ್ವದ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಹಣವನ್ನು ಶೀಘ್ರವೇ ಪಾವತಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
2017-18ನೇ ಸಾಲಿನಲ್ಲಿ ಕರ್ನಾಟಕದ ಸುಮಾರು 65 ಸಕ್ಕರೆ ಕಾರ್ಖಾನೆಗಳಿಗೆ 36.86 ಲಕ್ಷ ಮೆಟ್ರಿಕ್ ಟನ್ ಕಬ್ಬು ಪೂರೈಸಲಾಗಿದೆ,  15 ಲಕ್ಷ ಕಬ್ಬು ಬೆಳೆಗಾರರು ಸುಮಾರು 3.47 ಕೋಟಿ ಮೆಟ್ರಿಕ್ ಟನ್ ಕಬ್ಬನ್ನು ಕಾರ್ಖಾನೆಗಳಿಗೆ ಪೂರೈಸಿದ್ದು ಅವರೆಲ್ಲಾ  ಹಣಕಾಸಿನ ಮುಗ್ಗಟ್ಟು  ಎದುರಿಸುತ್ತಿದ್ದಾರೆ, ಸಕ್ಕರೆ ಕಾರ್ಖಾನೆಗಳು ಸುಮಾರು 450ಕೋಟಿ ರು ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂದು ರೈತರು ಹೇಳಿದ್ದಾರೆ, ಆದರೆ ರಾಜ್ಯ ಸಕ್ಕರೆ ಆಯುಕ್ತ ಅಜಯ್ ನಾಗಭೂಷಣ್ ಬೆಳಗಾವಿಯ ಕಾರ್ಖಾನೆಗಳು 38 ಕೋಟಿ ರು  ಮಾತ್ರ ಬಾಕಿಯಿದೆ ಎಂದು ಹೇಳಿದ್ದಾರೆ.
ಸಕ್ಕರೆ ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಈ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ, ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆ ರೈತರಿಗೆ 19 ಕೋಟಿ ರು ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ರಮೇಶ್ ಜಾರಕಿಹೊಳಿ ಲಭ್ಯವಾಗಲಿಲ್ಲ.
ಸತೀಶ್ ಜಾರಕಿಹೊಳಿ, ಬಿಡಿ ಇನಾಮ್ದಾರ್, ಸಿದ್ದು ನ್ಯಾಮಗೌಡ, ಎಸ್ ಆರ್ ಪಾಟೀಲ್,ಶ್ಯಾಮನೂರು ಶಿವಶಂಕರಪ್ಪ. ಸಂಗಮೇಶ್ ನಿರಾಣಿ ಉಮೇಶ್ ಕತ್ತಿ ಸೇರಿದಂತೆ ಹಲವು ರಾಜಕಾರಣಿಗಳ ಒಡೆತನದ ಕಾರ್ಖಾನೆಗಳು ಬಹು ದೊಡ್ಡ ಪ್ರಮಾಣದ ಹಣ ಪಾವತಿಸಬೇಕಿದೆ.
ಹಣ ಪಾವತಿ ಮಾಡದಿದ್ದರೂ ರೈತರು ಏಕೆ ಜಾರಕಿಹೊಳಿ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಬೇಕು, ಎಂದು ಶಾಂತ ಕುಮಾರ್ ಪ್ರಶ್ನಿಸಿದ್ದಾರೆ, ಬಡ ರೈತರ ಹಣ ನೀಡದೇ ಬಾಕಿ ಉಳಿಸಿಕೊಂಡಿರುವ ಜಾರಕಿಹೊಳಿ ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಮತ್ತೊಬ್ಬ ರೈತ ಆಗ್ರಹಿಸಿದ್ದಾರೆ,
ವಿಜಯಾಪುರ ಜಿಲ್ಲೆಯಲ್ಲಿ ಸಾವಿರಾರು ರೈತರಿಗೆ ಕಾರ್ಖಾನೆಗಳು ಮೊದಲ 15 ದಿನದಲ್ಲೇ ಹಣ ಪಾವತಿಸಬೇಕಾಗಿತ್ತು,  ಆದರೆ 10 ತಿಂಗಳು ಕಳೆದರೂ ಇನ್ನೂ ಹಣಾ ಪಾವತಿಯಾಗಿಲ್ಲ, ಇಲ್ಲಿನ 9 ಕಾರ್ಖಾನೆಗಳು ಸುಮಾರು 22 ಲಕ್ಷ ಟನ್ ಕಬ್ಬನ್ನು ಅರೆದಿವೆ.,
ಅಥಣಿಯಲ್ಲಿರುವ ಲಕ್ಷ್ಮಣ ಸವದಿ ಒಡೆತನದ ಕೃಷ್ಣ ಸಹಕಾರ ಸಕ್ಕರೆ ಕಾರ್ಖಾನೆ, ಪ್ರತಿ ಟನ್ ಕಬ್ಬಿಗೆ 2,900 ರು ನೀಡುವ ಭರವಸೆ ಕೊಟ್ಟಿತ್ತು.ಆದರೆ ಒಂದು ನಯಾ ಪೈಸೆ ಕೂಡ ಕೊಟ್ಟಿಲ್ಲ, ಒಂದು ವೇಳೆ ಹಣ ಪಾವತಿ ಮಾಡದಿದ್ದರೇ ಪರಿಸ್ಥಿತಿ ಇನ್ನೂ ಹದಗೆಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com