ಬೆಂಗಳೂರು: ನಗರದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ನಾಗರಿಕರಿಗೆ ವಾಸಿಸಲು ಮನೆ ನಿರ್ಮಾಣ ಕುಮಾರ ಸ್ವಾಮಿ ನೇತೃತ್ವದ ಸರ್ಕಾರ ಮಾಜಿ ಸಿಎಂ ಸಿದ್ದರಾಮಯ್ಯ ನಗರ ವಸತಿ ಯೋಜನೆಗೆ 11 ಮಹಡಿಗಳ ಹೆಚ್ಚುವರಿ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.
ನೆಲಮಹಡಿ ಜೊತೆಗೆ ಮೂರು ಮಹಡಿ ಹಾಗೂ 11 ಮಹಡಿ ಸೇರಿ ಒಟ್ಟು 14 ಮಹಡಿಗಳುಳ್ಳ ಮನೆ ನಿರ್ಮಾಣ ಮಾಡಲು ಅನುಮೋದನೆ ನೀಡಲಾಗಿದೆ,
ಬೆಂಗಳೂರಿನಲ್ಲಿ ಲಭ್ಯವಿರುವ ಕಡಿಮೆ ಭೂಮಿಯಲ್ಲಿ ಹೆಚ್ಚಿನ ಸಂಖ್ಯೆಯ ಮನೆ ನಿರ್ಮಾಣ ಮಾಡಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಸಚಿವ ಕೃಷ್ಣ ಭೈರೈಗೌಡ ಹೇಳಿದ್ದಾರೆ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ ಸಹಯೋಗದಲ್ಲಿ ಈ ವಸತಿ ನಿರ್ಮಾಣ ಮಾಡಲಾಗುತ್ತಿದೆ.
ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತರುವುದು ಸೇರಿದಂತೆ 2019ರ ಸಾರ್ವತ್ರಿಕ ರಜೆಗಳ ಕುರಿತು ಸಂಪುಟದಲ್ಲಿ ಅನುಪಮೋದನೆ ನೀಡಲಾಗಿದೆ.