ಬೆಳೆಸಾಲ ಮನ್ನಾ ಫಲಾನುಭವಿಗಳ ದಾಖಲೆ ಪರಿಶೀಲನೆ ಡಿಸೆಂಬರ್ ನಲ್ಲಿ ಆರಂಭ

ಬೆಳೆ ಸಾಲ ಮನ್ನಾ ಯೋಜನೆ ಸಕಾಲ ಜಾರಿಗೆ ಆಗುತ್ತಿರುವ ತೊಡಕಿನಿಂದಾಗಿ ರಾಜ್ಯ ಸರ್ಕಾರ ಫಲಾನುಭವಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಳೆ ಸಾಲ ಮನ್ನಾ ಯೋಜನೆ ಸಕಾಲ ಜಾರಿಗೆ  ಆಗುತ್ತಿರುವ ತೊಡಕಿನಿಂದಾಗಿ ರಾಜ್ಯ ಸರ್ಕಾರ ಫಲಾನುಭವಿ ರೈತರ ನಿಖರತೆಯನ್ನು ಪರಿಶೀಲಿಸಲು ಅವಧಿಯನ್ನು ವಿಸ್ತರಿಸಿದೆ. ಇದು ಡಿಸೆಂಬರ್ 15ರೊಳಗೆ ಆರಂಭವಾಗಬಹುದು ಎಂದು ರಾಜ್ಯ ಭೂ ದಾಖಲೆ, ಸಮೀಕ್ಷೆ, ಒಪ್ಪಂದ ಇಲಾಖೆ ನಿರ್ದೇಶಕ ಮುನೀಶ್ ಮೌದ್ಗಿಲ್ ಹೇಳಿದ್ದಾರೆ.

ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ಬೆಳೆ ಸಾಲದ ಕುರಿತು ದಾಖಲೆಗಳನ್ನು ಪರಿಶೀಲಿಸಲು ರಾಜ್ಯದ ವಾಣಿಜ್ಯ ಬ್ಯಾಂಕುಗಳ 6,500 ಶಾಖೆಗಳಿಗೆ ಸೂಚಿಸಲಾಗಿದೆ. ಅವರು ಒಂದು ವಾರದಲ್ಲಿ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಮುಗಿಸಿದರೆ ನಂತರ ರೈತರು ಬ್ಯಾಂಕುಗಳಿಗೆ ಹೋಗಿ ತಮ್ಮ ಅಗತ್ಯ ದಾಖಲೆಗಳಾದ ಆಧಾರ್ ಸಂಖ್ಯೆ, ರೇಷನ್ ಕಾರ್ಡು ಮತ್ತು ಸರ್ವೆ ಸಂಖ್ಯೆಗಳನ್ನು ಪರಿಶೀಲಿಸಿಕೊಳ್ಳಬಹುದು ಎಂದರು.

ಬೆಳೆ ಸಾಲ ಮನ್ನಾ ಯೋಜನೆಯ ಪ್ರಾಯೋಗಿಕ ಯೋಜನೆ ಹಂತದಲ್ಲಿ ಆಧಾರ್ ಮತ್ತು ರೇಷನ್ ಕಾರ್ಡುಗಳನ್ನು ಪರಿಶೀಲಿಸುವುದು ಮುಖ್ಯವಾಗಿರುತ್ತದೆ. ಅದರ ಪರಿಶೀಲನೆಯಲ್ಲಿ ವಿಳಂಬವಾಗಿರುತ್ತದೆ. ಬ್ಯಾಂಕುಗಳಲ್ಲಿ ರೈತರು ಬಂದು ದಟ್ಟಣೆಯಾಗುವುದನ್ನು ಮತ್ತು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುವುದನ್ನು ತಡೆಯಲು ಟೋಕನ್ ವ್ಯವಸ್ಥೆ ಮಾಡಲಾಗಿದೆ. ಈ ಪ್ರಕ್ರಿಯೆ 6 ದಿನಗಳ ಹಿಂದಷ್ಟೇ ಆರಂಭವಾಗಿದ್ದು ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವ್ಯವಸ್ಥೆಯಲ್ಲಿರುವ ಸಣ್ಣಪುಟ್ಟ ತೊಂದರೆಗಳನ್ನು ಬಗೆಹರಿಸಲಾಗುವುದು ಎಂದು ಮುನೀಶ್ ಮೌದ್ಗಿಲ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com