ಅಂತರ್ಜಾತಿ ವಿವಾಹಕ್ಕೆ ವಿರೋಧ; ಸೋದರಿಯ ಪತಿಯನ್ನು ಕೊಂದ ಸೋದರ!

ಅಂತರ್ಜಾತಿ ವಿವಾಹವಾದ ಹಿನ್ನಲೆಯಲ್ಲಿ ದಂಪತಿಯನ್ನು ಹತ್ಯೆಗೈದು ಮಂಡ್ಯದಲ್ಲಿ ಕಾವೇರಿ ನದಿಗೆ ...
ಹರೀಶ್ ನ ಶವ ಪತ್ತೆಯಾದ ಪರಿಶೀಲನೆ ನಡೆಸುತ್ತಿರುವ ಪೊಲೀಸರು
ಹರೀಶ್ ನ ಶವ ಪತ್ತೆಯಾದ ಪರಿಶೀಲನೆ ನಡೆಸುತ್ತಿರುವ ಪೊಲೀಸರು

ಬೆಂಗಳೂರು: ಅಂತರ್ಜಾತಿ ವಿವಾಹವಾದ ಹಿನ್ನಲೆಯಲ್ಲಿ ದಂಪತಿಯನ್ನು ಹತ್ಯೆಗೈದು ಮಂಡ್ಯದಲ್ಲಿ ಕಾವೇರಿ ನದಿಗೆ ಎಸೆದ ಘಟನೆ ನಡೆದು ಕೇವಲ ಐದು ದಿನಗಳು ಕಳೆದ ನಂತರ ಅಂತಹದ್ದೇ ಮತ್ತೊಂದು ಭೀಕರ ಘಟನೆ ನಡೆದಿದೆ.

27 ವರ್ಷದ ಹರೀಶ್ ಎಂಬ ಕ್ಯಾಬ್ ಚಾಲಕನನ್ನು ಅಂತಹದ್ದೇ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ನಾಯಕ ಜಾತಿಗೆ ಸೇರಿದ ಹರೀಶ್ ತನ್ನ ಬಾಲ್ಯ ಸ್ನೇಹಿತೆ ಮೀನಾಕ್ಷಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಆಕೆ ತಿಗಳ ಜಾತಿಗೆ ಸೇರಿದವಳು. ಮೀನಾಕ್ಷಿಯ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.

ಮದುವೆಯಾದರೆ ತೊಂದರೆ ನೀಡುವುದಾಗಿ ಮೀನಾಕ್ಷಿಯ ಸೋದರ ಹರೀಶ್ ಗೆ ಎಚ್ಚರಿಕೆ ನೀಡಿದ್ದನಂತೆ, ಹತ್ಯೆ ಮಾಡುವುದಾಗಿ ಕೂಡ ಬೆದ್ದರಿಕೆ ಹಾಕಿದ್ದನು. ಮದುವೆಯಾಗಿ ಮೀನಾಕ್ಷಿ ಗರ್ಭಿಣಿಯಾಗಿದ್ದಳು. ನಿನ್ನೆ ಹರೀಶ್ ನ ಮೃತದೇಹ ದೇವನಹಳ್ಳಿ ಸಮೀಪ ಬಿದರಹಳ್ಳಿಯ ಸಮೀಪ ನಲ್ಲೂರು ಗ್ರಾಮದ ಜಮೀನಿನಲ್ಲಿ ಪತ್ತೆಯಾಗಿದೆ.

ಹರೀಶ್ ನ ಮೃತದೇಹ ಕಂಡ ಗ್ರಾಮಸ್ಥರು ಚೆನ್ನರಾಯಪಟ್ಟಣ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕಳೆದ ಮಂಗಳವಾರ ನಾಪತ್ತೆಯಾಗಿದ್ದ ಹರೀಶ್ ನನ್ನು ಆತನ ಕುಟುಂಬಸ್ಥರು ಮತ್ತು ಸ್ನೇಹಿತರು ಹುಡುಕುತ್ತಿದ್ದರು. ಕೊಲೆಯಾಗಿದ್ದು ಗೊತ್ತಾದ ಕೂಡಲೇ ಹರೀಶ್ ನ ತಂದೆ ಮುನಿ ಅಂಜನಪ್ಪ ಪೊಲೀಸರಿಗೆ ದೂರು ನೀಡಿದರು.

ತನ್ನ ಪತಿಯನ್ನು ಸೋದರನೇ ಕೊಂದಿದ್ದಾನೆ ಎಂದು ಮೀನಾಕ್ಷಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಆಕೆಯ ಸೋದರ ನವೀನ್ ಕುಮಾರ್ ನನ್ನು ಪ್ರಶ್ನಿಸಿದಾಗ ಹಿರಿಯ ಸೋದರ ವಿನಯ್ ಕುಮಾರ್ ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ನಿರುದ್ಯೋಗಿಯಾಗಿರುವ ವಿನಯ್ ನನ್ನು ಪೊಲೀಸರು ಬಂಧಿಸಿ ಕಸ್ಟಡಿಗೊಪ್ಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com