ಬೆಂಗಳೂರು: ಮುಸ್ಲಿಂ ಯುವಕನನ್ನು ಮದುವೆಯಾಗಿದ್ದ ಹಿಂದೂ ಯುವತಿ ಆತ್ಮಹತ್ಯೆ!

ಮುಸ್ಲಿಂ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದ ಹಿಂದೂ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಕೋಡಿಗೆಹಳ್ಳಿ, ಬ್ಯಾಟರಾಯನಪುರದಲ್ಲಿ ನಡೆದಿದೆ.
ಬೆಂಗಳೂರು: ಮುಸ್ಲಿಂ ಯುವಕನನ್ನು ಮದುವೆಯಾಗಿದ್ದ ಹಿಂದೂ ಯುವತಿ ಆತ್ಮಹತ್ಯೆ!
ಬೆಂಗಳೂರು: ಮುಸ್ಲಿಂ ಯುವಕನನ್ನು ಮದುವೆಯಾಗಿದ್ದ ಹಿಂದೂ ಯುವತಿ ಆತ್ಮಹತ್ಯೆ!
ಬೆಂಗಳೂರು: ಮುಸ್ಲಿಂ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದ ಹಿಂದೂ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಕೋಡಿಗೆಹಳ್ಳಿ, ಬ್ಯಾಟರಾಯನಪುರದಲ್ಲಿ ನಡೆದಿದೆ.
ಬುಧವಾರ ರಾತ್ರಿ ನಡೆದ ಪ್ರಕರಣದಲ್ಲಿ ರೋಜಾ (18) ನೇಣಿಗೆ ಶರಣಾಗಿದ್ದಾಳೆ. ಬಾಗೇಪಲ್ಲಿ ಮೂಲದ ಈಕೆ ಕಳೆದ ನಾಲ್ಕು ತಿಂಗಳ ಹಿಂದೆ ಮನೆತೊರೆದು ಬಾಬಾಜಾನ್  ಎನ್ನುವ ಯುವಕನೊಡನೆ ವಾಸವಿದ್ದವಳು ನಿನ್ನೆ ಸಂಜೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಇದೊಂದು ಲವ್ ಜಿಹಾದ್ ಇರಬಹುದೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಘಟನೆ ಹಿನ್ನೆಲೆ
ಬಾಗೇಪಲ್ಲಿಯ ರೋಜಾಳಿಗೆ ತಂದೆ ಇರದ ಕಾರಣ ತಾಯಿಯೇ ಮನೆಗೆಲಸ ಮಾಡಿ ಪ್ರೀತಿಯಿಂದ ಬೆಳೆಸಿದ್ದರು. ಪಿಯು ವಿದ್ಯಾಭ್ಯಾಸ ಮುಗಿಸಿದ್ದ ರೋಜಾ ಬಾಗೇಪಲ್ಲಿ ಸಮೀಪದ ಖಾಸಗಿ ಕಾಲೇಜು ಸೇರಿ ಪದವಿ ವ್ಯಾಸಂಗಕ್ಕೆ ತೊಡಗಿದ್ದಳು.
ಈ ವೇಳೆ ಬಾಬಾಜಾನ್ ಎಂಬ ಮುಸ್ಲಿಂ ಯುವಕನ ಪರಿಚಾವಾಗಿದ್ದು ಪರಿಚಯ ಸ್ನೇಹವಾಗಿ ಕಡೆಗೆ ಪ್ರೀತಿಯು ಮೂಡಿದೆ.ಇದಾಗಿ ಇಬ್ಬರೂ ಮದುವೆಯಾಗುವ ನಿಶ್ಚಯಕ್ಕೆ ಬಂದಾಗ ಇಬ್ಬರ ಧರ್ಮ ಬೇರೆ ಬೇರೆಯಾಗಿದ್ದ ಕಾರಣ ಮನೆಯವರ ವಿರೋಧ ವ್ಯಕ್ತವಾಗಿತ್ತು.
ಆದರೆ ವಿರೋಧದ ನಡುವೆಯೂ ಯುವಕನನ್ನೇ ನಂಬಿ ಬಂದ ರೋಜಾ ನಾಲ್ಕು ತಿಂಗಳಿನಿಂದ ಬೆಂಗಳೂರು ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯ ಬ್ಯಾಟರಾಯನಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಳು
ಬಾಬಾಜಾನ್ ಫುಡ್ ಡೆಲಿವರಿ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು ಆತ ಕೆಲಸಕ್ಕಾಗಿ ಹೊರ ಹೋದಾಗ ಆಕೀಯೊಬ್ಬಳೇ ಮನೆಯಲ್ಲಿರುತ್ತಿದ್ದಳು ಎನ್ನಲಾಗಿದೆ. ಬುಧವಾರ ಮುಸ್ಲಿಮರ ಹಬ್ಬವಾದ ಈದ್ ಮಿಲಾದ್ ಇದ್ದ ಕಾರಣ ಬಾಬಾಜಾನ್ ಸ್ನೇಹಿತ ಶ್ರೀನಿವಾಸ್ ಎಂಬಾತನಿಗೆ ಚಿಕನ್ ತರುವಂತೆ ರೋಜಾ ಕೇಳಿದ್ದಳು. ಅದರಂತೆ ಪೇಟೆಯಿಂದ ಚಿಕನ್ ಖರೀದಿಸಿ ಮನೆಗೆ ಹಿಂತಿರುಗಿದ ಶ್ರೀನಿವಾಸ್  ಗೆ ಮನೆ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ತಿಳಿಯಿತು. ಎಷ್ಟೇ ಬಾಗುಇಲು ತಟ್ಟಿದರೂ ಬಾಗಿಲು ತೆರೆಯದೇ ಹೋದಾಗ ಆತ ಹಿಂಬಾಗಿಲಿನ ಮೂಲಕ ಒಳಗೆ ನೋಡಿದ್ದಾನೆ.ಆಗ ರೋಜಾ ನೇಣು ಬಿಗಿದ ಸ್ಥಿತಿಯಲ್ಲಿದ್ದದ್ದು ಪತ್ತೆಯಾಗಿದೆ.
ಇದೀಗ ರೋಜಾ ತಾಯಿ ಹಾಗೂ ಕುಟುಂಬಿಕರು ಬಾಬಾಜಾನ್ ಆಕೆಯನ್ನು ಬಲವಂತವಾಗಿ ಕರೆದುತಂದು ಇರಿಸಿಕೊಂಡಿದ್ದ. ಆಕೆ ಚೆನ್ನಾಗಿ ಓದಿ ಮುಂದೆ ಬರಬೇಕೆನ್ನುವ ಹಂಬಲ ಹೊಂದಿದ್ದಳು. ಆದರೆ ಬಾಬಾಜಾನ್ ಇದಾವದಕ್ಕೆ ಬಿಡದೆ ಆಕೆಗೆ ಕಿರುಕುಳ ನೀಡಿದ್ದಲ್ಲದೆ ಅವಳನ್ನು ಕೊಲೆ ಮಾಡಿದ್ದಾನೆ. ಹಾಗಾಗಿ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಆರೋಪಿಸಿದ್ದಾರೆ.
ಕೋಡಿಗೆಹಳ್ಳಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಬಾಬಾಜಾನ್ ನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com