'ರಾಷ್ಟ್ರೀಯ ಸ್ವಚ್ಛ ವಿದ್ಯಾಲಯ' ಪುರಸ್ಕಾರ: ಈ ಬಾರಿ ರಾಜ್ಯದ ಯಾವ ಶಾಲೆಗೂ ಇಲ್ಲ!

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ 2017-18 ನೇ ಸಾಲಿನ ಸ್ವಚ್ಛ ವಿದ್ಯಾಲಯ ಪುರಸ್ಕಾರ ಪಟ್ಟಿಯಲ್ಲಿ ರಾಜ್ಯದ ಯಾವುದೇ ಶಾಲೆಗಳು ಸ್ಥಾನ ಪಡೆದಿಲ್ಲ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ 2017-18 ನೇ ಸಾಲಿನ  ಸ್ವಚ್ಛ ವಿದ್ಯಾಲಯ ಪುರಸ್ಕಾರ ಪಟ್ಟಿಯಲ್ಲಿ ರಾಜ್ಯದ ಯಾವುದೇ ಶಾಲೆಗಳು ಸ್ಥಾನ ಪಡೆದಿಲ್ಲ.ರಾಜ್ಯದಲ್ಲಿ 48 ಸಾವಿರ ಸರ್ಕಾರಿ ಶಾಲೆಗಳು ಹಾಗೂ 3 ಸಾವಿರ ಖಾಸಗಿ ಶಾಲೆಗಳಿದ್ದರೂ ಯಾವ ಶಾಲೆಗೂ ಈ ಪ್ರಶಸ್ತಿ ದಕ್ಕಿಲ್ಲ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಯ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ದೇಶಾದ್ಯಂತ 52 ಶಾಲೆಗಳು  ರಾಷ್ಟ್ರೀಯ ಸ್ವಚ್ಛ ವಿದ್ಯಾಲಯ ಪುರಸ್ಕಾರಕ್ಕೆ ಆಯ್ಕೆ ಯಾಗಿವೆ. ರಾಜ್ಯದಿಂದಲೂ 38 ಶಾಲೆಗಳಿಂದ ಅರ್ಜಿ ಸಲ್ಲಿಸಲಾಗಿತ್ತು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಿಂದ ಮಾಹಿತಿ ತಿಳಿದುಬಂದಿದೆ.

ಆದಾಗ್ಯೂ, ಅಂತಿಮ ಪಟ್ಟಿಯಲ್ಲಿ ರಾಜ್ಯದ ಯಾವುದೇ ಶಾಲೆಯೂ ಪ್ರಶಸ್ತಿ ಏಕೆ ದೊರೆಯಲಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯವನ್ನು ಕೇಳಲು ಇಲಾಖೆ ನಿರ್ಧರಿಸಿದೆ. ಈ ಬಾರಿ 38 ಶಾಲೆಗಳ ಹೆಸರನ್ನು ಪ್ರಶಸ್ತಿ ಪಟ್ಟಿಗೆ ಸೇರಿಸಲು ಕಳುಹಿಸಲಾಗಿತ್ತು ಎಂದು ಸರ್ವ ಶಿಕ್ಷ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಡಾ. ರೇಜು ಹೇಳಿದ್ದಾರೆ.

ಪ್ರಶಸ್ತಿಗಾಗಿ ಹೇಗೆ ಆಯ್ಕೆ ನಡೆಯುತ್ತದೆ.

ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ 2014-15ರ ಶೈಕ್ಷಣಿಕ  ವರ್ಷದಿಂದ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಶಾಲೆಯ ನೀರು , ಒಳಚರಂಡಿ ಹಾಗೂ ನೈರ್ಮಲ್ಯ ವ್ಯವಸ್ಥೆ ಪರಿಶೀಲಿಸಲಾಗುತ್ತದೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಯದ ಸಮಿತಿ ಆಯ್ದ ಶಾಲೆಗಳಿಗೆ ಭೇಟಿ ನೀಡುತ್ತದೆ. ಎಲ್ಲಾ ಶಾಲೆಗಳಲ್ಲೂ ಬಾಲಕಿಯರು ಹಾಗೂ ಬಾಲಕಿಯರಿಗೆ ಪ್ರತ್ಯೇಕವಾದ ಶೌಚಾಲಯ ಇರಬೇಕಾಗುತ್ತದೆ. ಮಕ್ಕಳ ನಡವಳಿ ಸೇರಿದಂತೆ ಶಾಲೆಗಳಲ್ಲಿ ನೈರ್ಮಲ್ಯ, ಸುರಕ್ಷತೆಗೆ ಒತ್ತು ನೀಡಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com